ಎನ್.ಆರ್.ಪುರ: ಶಿಕ್ಷಕ ವೃತ್ತಿ ಪವಿತ್ರ ಹಾಗೂ ಗೌರವಯುತವಾದುದು ಎಂದು ನಿವೃತ್ತ ಮುಖ್ಯಶಿಕ್ಷಕಿ ಪುಟ್ಟಮ್ಮ ಹೇಳಿದರು.
ಶೆಟ್ಟಿಕೊಪ್ಪ ಸಿದ್ಧಿ ವಿನಾಯಕ ಸೇವಾ ಸಮಿತಿಯಿಂದ ನಡೆದ ಗಣೇಶೋತ್ಸವ ಹಾಗೂ ಮಣಿಕಂಠ ಮಹಿಳಾ ಭಜನಾ ಮಂಡಳಿಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನನ್ನ 40 ವರ್ಷದ ಶಿಕ್ಷಕ ವೃತ್ತಿ ಆತ್ಮ ತೃಪ್ತಿ ತಂದಿದೆ. ಶಿಕ್ಷಕಿಯೆಂದು ಮರೆತು ವಿದ್ಯಾರ್ಥಿಯಾಗಿ ಮಕ್ಕಳೊಂದಿಗೆ ಬೆರೆಯುತ್ತಿದ್ದೆ. ಶಾಲಾಭಿವೃದ್ಧಿ ಸಮಿತಿ, ಗ್ರಾಮಸ್ಥರು, ಪಾಲಕರು ಸಹಕಾರ ನೀಡಿದ್ದಾರೆ ಎಂದರು. ಮಣಿಕಂಠ ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ಸುನಂದಾ, ಕಾರ್ಯದರ್ಶಿ ಸುಧಾ, ಗ್ರಾಪಂ ಸದಸ್ಯೆ ಶೈಲಾ ಮಹೇಶ್, ಶಾಲಿನಿ, ಪುಷ್ಪಾವತಿ, ಎಸ್.ವಿ.ಗಾಯತ್ರಿ, ದಾನಮ್ಮ, ಕೃಷ್ಣಮ್ಮ, ಚಂದ್ರಾವತಿ, ಹೇಮಾವತಿ, ನಾಗವೇಣಿ, ವೀಣಾ, ವಿಮಲಾ ಇತರರಿದ್ದರು.