Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಶಿಕ್ಷಕರಿಗೆ ಕಲಿಸುವ ಹೊಣೆ ಮಾತ್ರ

Saturday, 15.09.2018, 2:03 AM       No Comments

ರುದ್ರಣ್ಣ ಹರ್ತಿಕೋಟೆ

ಬೆಂಗಳೂರು: ಸರ್ಕಾರಿ ಶಾಲೆಗಳ ಗುಣಮಟ್ಟ ಕುಸಿಯುತ್ತಿರುವುದನ್ನು ಮನಗಂಡಿರುವ ರಾಜ್ಯ ಸರ್ಕಾರ, ಶಿಕ್ಷಕರಿಗೆ ಬೋಧನಾ ಜವಾಬ್ದಾರಿ ಬಿಟ್ಟು ಉಳಿದೆಲ್ಲ ಕೆಲಸಗಳಿಂದ ಮುಕ್ತಿ ಕೊಡಿಸುವ ಮಹತ್ವದ ನಿರ್ಧಾರಕ್ಕೆ ಬಂದಿದೆ.

ಶಿಕ್ಷಕರಿಗೆ ಜವಾಬ್ದಾರಿ ಹೆಚ್ಚಾಗುವುದೇ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿಯಲು ಕಾರಣವೆಂಬ ಆರೋಪಗಳಿವೆ. ಆದ್ದರಿಂದ ಆಡಳಿತಾತ್ಮಕ ವ್ಯವಸ್ಥೆಯನ್ನು ಮಾಹಿತಿ ತಂತ್ರಜ್ಞಾನದ ಮೂಲಕ ನಿರ್ವಹಿಸಿ ಶಿಕ್ಷಕ ರನ್ನು ಕಲಿಕೆಗಷ್ಟೇ ಸೀಮಿತ ಗೊಳಿಸುವ ತೀರ್ವನಕ್ಕೆ ಸರ್ಕಾರ ಬಂದಿದೆ.

ಹಣ ಸಾಕಾಗುತ್ತಿಲ್ಲ: ಸರ್ಕಾರ ಜಿಡಿಪಿಯ ಶೇ.3.5ನ್ನು ಶಿಕ್ಷಣಕ್ಕಾಗಿ ವೆಚ್ಚ ಮಾಡುತ್ತಿದೆ. ರಾಜ್ಯದಲ್ಲಿ ಶಿಕ್ಷಣಕ್ಕಾಗಿ 18000 ಕೋಟಿ ರೂ. ಖರ್ಚು ಮಾಡಲಾಗುತ್ತಿದ್ದರೂ ಸರ್ಕಾರಿ ಶಾಲೆಗಳಿಗೆ ಈ ಹಣ ಸಾಲುತ್ತಿಲ್ಲ, ಖಾಸಗಿ ರಂಗ ದುಬಾರಿಯಾಗಿದೆ. ಆದ್ದರಿಂದಲೇ ಗುಣಮಟ್ಟ ಕುಸಿತದಂತಹ ರೋಗ ತಗುಲಿದೆ ಎಂಬುದು ಸರ್ಕಾರ ರೂಪಿಸುತ್ತಿರುವ ನೀತಿಯಲ್ಲಿ ವಿವರಿಸಲಾಗಿದೆ.

ಶಾಲೆಯಿಂದ ದೂರ: ಸರ್ಕಾರಿ ಶಾಲೆಗಳಲ್ಲಿ ಗುಣ ಮಟ್ಟ ಕುಸಿದಿರುವ ಪರಿಣಾಮ ಶಾಲೆಯಿಂದ ಹೊರಗುಳಿ ಯುವ ಹಾಗೂ ಖಾಸಗಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಗುಣಮಟ್ಟಕ್ಕೆ ಆದ್ಯತೆ ನೀಡಬೇಕಾದ

ಶಿಕ್ಷಕರು ತಮಗೆ ಬೇರೆ ಕೆಲಸಗಳ ಹೊರೆಯೇ ಹೆಚ್ಚಾಗಿದೆ ಎಂಬ ಸಬೂಬು ಹೇಳುತ್ತಿದ್ದಾರೆ. ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಪ್ರಾಥಮಿಕ ಶಾಲೆಗಳಿಗೆ ದಾಖಲಾತಿಯ ಪ್ರಮಾಣ ಶೇ. 27 ಅಂದರೆ 56 ಲಕ್ಷದಿಂದ 41 ಲಕ್ಷಕ್ಕೆ ಇಳಿದಿದೆ. ಅದೇ ಕಾಲಕ್ಕೆ ಖಾಸಗಿ ಶಾಲೆಗಳಿಗೆ ದಾಖಲಾತಿಯ ಪ್ರಮಾಣ 28 ಲಕ್ಷದಿಂದ 41 ಲಕ್ಷಕ್ಕೆ ಏರಿಕೆಯಾಗಿದೆ. ನಗರ ಪ್ರದೇಶದಲ್ಲಿ ಶೇ. 80 ಮಕ್ಕಳು ಖಾಸಗಿ ಶಾಲೆಗಳಲ್ಲಿಯೇ ಇರುತ್ತಾರೆ.

ಡ್ರಾಪ್ ಔಟ್

ಸರ್ಕಾರಿ ಶಾಲೆಯಿಂದ ದೂರ ಉಳಿಯುವ ಮಕ್ಕಳು ಒಂದೆಡೆಯಾದರೆ, ಶಾಲೆಗಳಿಗೆ ಸೇರಿ ಅರ್ಧಕ್ಕೆ ಬಿಡುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಒಟ್ಟು 18 ಲಕ್ಷ ಮಕ್ಕಳು ಶಾಲೆಯನ್ನು ಅರ್ಧಕ್ಕೆ ತೊರೆಯುತ್ತಿದ್ದಾರೆ. 1 ರಿಂದ 8 ನೇ ತರಗತಿಯ ತನಕ 2.5 ಲಕ್ಷ, 8 ರಿಂದ 10 ನೇ ತರಗತಿಯ ತನಕ 3.5 ಲಕ್ಷ ಹಾಗೂ 10 ರಿಂದ 12 ನೇ ತರಗತಿಯ ತನಕ 12 ಲಕ್ಷ ಮಕ್ಕಳು ಶಾಲೆಯನ್ನು ಅರ್ಧದಲ್ಲಿಯೇ ತೊರೆಯುತ್ತಿದ್ದಾರೆ.

ನೀತಿ ರೂಪಿಸಲು ಆದ್ಯತೆ

ಗುಣಮಟ್ಟ ಹೆಚ್ಚಳದಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿರುವುದನ್ನು ಸರ್ಕಾರ ಮನಗಂಡಿದೆ. ಆದ್ದರಿಂದಲೇ ಶಿಕ್ಷಕ-ವಿದ್ಯಾರ್ಥಿ ಕೇಂದ್ರಿತ ನೀತಿಯನ್ನು ರೂಪಿಸುವ ಕಡೆ ಗಮನ ಹರಿಸಿದೆ. ಶಿಕ್ಷಕರು ಗುಣಮಟ್ಟ ಹೆಚ್ಚಳದ ಚಾಲಕರಾಗುವ ರೀತಿಯಲ್ಲಿ ಅವರನ್ನು ಸಜ್ಜುಗೊಳಿಸುವ ಕಡೆ ಗಮನ ಕೇಂದ್ರೀಕರಿಸುತ್ತಿದೆ.

ಮೆರಿಟ್ ಆಧಾರದ ಬಡ್ತಿ

ಶಿಕ್ಷಕರಿಗೆ ಜ್ಯೇಷ್ಠತೆಯಲ್ಲದೇ ಮೆರಿಟ್ ಆಧಾರದಲ್ಲಿ ಬಡ್ತಿ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ. ಇದರಿಂದ ಶಿಕ್ಷಕರಲ್ಲೂ ಸ್ಪರ್ಧೆಯ ಮನೋಭಾವ ಬೆಳೆಯುತ್ತದೆ, ಅದು ಶಿಕ್ಷಣದ ಮೇಲೆ ಪರಿಣಾಮ ಬೀರಿ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಸಹಾಯವಾಗುತ್ತದೆ ಎಂಬುದು ಸರ್ಕಾರದ ಉದ್ದೇಶ. ಕಾಲಕಾಲಕ್ಕೆ ಶಿಕ್ಷಕರಿಗೂ ತರಬೇತಿ ನೀಡುವುದನ್ನು ಕಡ್ಡಾಯ ಮಾಡಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ.

ಹಳೆಯ ವಿದ್ಯಾರ್ಥಿಗಳ ಬಳಕೆ

ಶೈಕ್ಷಣಿಕ ಗುಣಮಟ್ಟ ಹೆಚ್ಚಳದ ಬಗ್ಗೆ ಇಲಾಖೆ ಕಾಲಕಾಲಕ್ಕೆ ಆನ್​ಲೈನ್​ನಲ್ಲಿ ಪರಿಶೀಲನೆ ಮಾಡಲಿದೆ. ಅದರ ಜತೆಗೆ ಶಾಲೆಯ ಅಭಿವೃದ್ಧಿಗೆ ವಿವಿಧ ರೀತಿಯ ಕೊಡುಗೆಗಳನ್ನು ನೀಡಲು ಹಳೆಯ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಗೆ ಒತ್ತುನೀಡುವ ಜತೆಗೆ ಶಾಲಾ ಮೇಲುಸ್ತುವಾರಿ ಸಮಿತಿಗಳನ್ನು ಬಲಪಡಿಸಲು ನಿರ್ಧರಿಸಲಾಗಿದೆ.

ಪರಿಷತ್ ರಚನೆ

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಡಿ ಯಲ್ಲಿ ಶಿಕ್ಷಣ ತಜ್ಞರು ಹಾಗೂ ವೃತ್ತಿಪರರನ್ನು ಒಳಗೊಂಡಂತೆ ರಾಜ್ಯ ಶಿಕ್ಷಣ ಶಾಲಾ ಪರಿಷತ್ತು ರಚಿಸಿ, ಅದರ ಮೂಲಕ ಪಠ್ಯಕ್ರಮ, ಶಿಕ್ಷಕರ ತಯಾರಿ ಮೊದಲಾದವುಗಳನ್ನು ನಿರ್ಧಾರ ಮಾಡಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ.

Leave a Reply

Your email address will not be published. Required fields are marked *

Back To Top