ಶಾಲೆಗೆ ಕಳುಹಿಸೋ ಮಕ್ಕಳಿಂದ ಶಿಕ್ಷಕರು ಏನೆಲ್ಲ ಕೆಲಸ ಮಾಡಿಸ್ತಾರೆ ಗೊತ್ತಾ?

ಕೊಪ್ಪಳ: ತರಗತಿ ವೇಳೆ ವಿದ್ಯಾರ್ಥಿಗಳನ್ನು ಶಿಕ್ಷಕರು ಮನೆ ಕೆಲಸಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಹೊಸಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳನ್ನು ಬಟ್ಟೆ ಒಗೆಯಲು ಬಳಸಿಕೊಂಡಿದ್ದಾರೆ. ಶಾಲಾ ಸಮಯದಲ್ಲಿ ತಮ್ಮನ್ನು ಬಟ್ಟೆ ಒಗೆಯಲು ಕಳುಹಿಸಿದ್ದರು ಎಂದು ವಿದ್ಯಾರ್ಥಿನಿಯರು ಒಪ್ಪಿಕೊಂಡಿದ್ದಾರೆ.

ಹೊಸಳ್ಳಿ ಚನ್ನಬಸವ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಬಹಳ ದಿನಗಳಿಂದ ಈ ರೀತಿ ವಿದ್ಯಾರ್ಥಿನಿಯರನ್ನು ಇಂಥ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದು, ಶಿಕ್ಷಕರ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

 

Leave a Reply

Your email address will not be published. Required fields are marked *