More

    ಶಿಕ್ಷಣ ಸಂಸ್ಥೆಗಳ ನೌಕರರಿಂದ ಪಾದಯಾತ್ರೆ

    ಹುಬ್ಬಳ್ಳಿ: ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ$್ಯ, ಸರ್ಕಾರದ ಮಲತಾಯಿ ಧೋರಣೆ, ಆಡಳಿತ ಮಂಡಳಿಗಳಿಂದ ಸರ್ಕಾರಿ ಆದೇಶಗಳ ಉಲ್ಲಂನೆಯನ್ನು ಖಂಡಿಸಿ ಅ. 21ರಂದು ಬೆಳಗ್ಗೆ 10ಕ್ಕೆ ನಗರದಿಂದ ಧಾರವಾಡದ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂದ ಮಹಾಪ್ರಧಾನ ಕಾರ್ಯದಶಿರ್ ಶ್ರೀಶೈಲ ಗಡದಿನ್ನಿ ತಿಳಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಚನ್ನಮ್ಮ ವೃತ್ತದಲ್ಲಿ ನೂರಕ್ಕೂ ಹೆಚ್ಚು ಶಿಕ್ಷಕರು ಜಮಾಯಿಸಲಿದ್ದಾರೆ. ಇಲ್ಲಿಂದ ಪಾದಯಾತ್ರೆ ಹೊರಟು ಸಂಜೆ 4ಕ್ಕೆ ಧಾರವಾಡ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

    ಅನುದಾನರಹಿತ ಶಾಲೆ, ಕಾಲೇಜುಗಳ ನೌಕರರ ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ಮತ್ತು ಇತರೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಹೋರಾಟ ನಡೆಸಲಾಗುತ್ತಿದೆ. ಕಡ್ಡಾಯ ಸೇವಾ ಭದ್ರತೆಯನ್ವಯ ನೇಮಕಾತಿ ಪತ್ರ, ಸೇವಾಪುಸ್ತಕ ನಿರ್ವಹಣೆ, 60 ವರ್ಷದ ನಂತರವೇ ನಿವೃತ್ತಿಗೊಳಿಸುವುದು. ಈ ಕುರಿತು ಸರ್ಕಾರ 2006ರಲ್ಲಿಯೇ ಆದೇಶ ಮಾಡಿದೆ. ಕೋರ್ಟ್ ಕೂಡ ಆದೇಶ ಪಾಲನೆಗೆ ಸೂಚನೆ ನೀಡಿದೆ. ಆದರೂ, ಇಲಾಖೆ ಅಧಿಕಾರಿಗಳ ನಿರ್ಲಕ್ಷ$್ಯ ಮುಂದುವರಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅನುದಾನರಹಿತ ಶಾಲೆ, ಕಾಲೇಜುಗಳ ವಿದ್ಯಾಥಿರ್ಗಳಿಗೂ ಸರ್ಕಾರದ ಯೋಜನೆಯನ್ವಯ ಬಿಸಿಯೂಟ, ಸೈಕಲ್, ಮೊಟ್ಟೆ, ಸಮವಸ್ತ್ರ ಎಲ್ಲವನ್ನೂ ನೀಡಬೇಕು ಎಂದು ಆಗ್ರಹಿಸಿದರು.

    ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ತಡೆಯಬೇಕೆಂದು ಹೋರಾಟ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸರ್ಕಾರ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಲೋಕಾಯುಕ್ತಕ್ಕೆ ದೂರು ನೀಡುವ ಯೋಚನೆಯೂ ಇದೆ ಎಂದು ಹೇಳಿದರು.

    ಸಂಘಟನಾ ಕಾರ್ಯದರ್ಶಿ ಸಂಜೀವ ಶಿರಗನಳ್ಳಿ, ಕಾರ್ಯಾಧ್ಯಕ್ಷ ಆರ್. ರಂಜನ್, ಈರಣ್ಣ ಎಮ್ಮಿ ಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts