More

    ಶಿಕ್ಷಕ ವೃತ್ತಿ ಪವಿತ್ರವಾದದ್ದು: ಹೆಚ್. ಎಸ್. ಫಾರೂಕ

    ಗದಗ: ಸಮಾಜದಲ್ಲಿ ಪೂಜ್ಯನೀಯ ಸ್ಥಾನ ಹೊಂದಿದ ಹಾಗೂ ಮಕ್ಕಳ ಬದುಕಿನಲ್ಲಿ ಸದಾ ಜ್ಞಾನದ ಜ್ಯೋತಿ ಬೆಳಗಿಸುತ್ತಾ ಕತ್ತಲಿನಿಂದ ಬೆಳಕಿನೆಡೆಗೆ ಎಲ್ಲರನ್ನು ಕರೆದುಕೊಂಡು ದಾರಿ ದೀಪವಾಗುವ ಶಿಕ್ಷಕ ವೃತ್ತಿಯು ಪವಿತ್ರವಾದದ್ದು ಎಂದು ಗದಗ ಶಹರದ ಬಿ. ಆರ್. ಸಿ ಕೇಂದ್ರದ ಸಮನ್ವಯಾಧಿಕಾರಿ ಹೆಚ್ ಎಸ್ ಫಾರೂಕ ಹೇಳಿದರು.
    ಅವರು ಮಂಗಳವಾರ ರೋಟರಿ ಸಂಸ್ಥೆ ಗದಗ ಬೆಟಗೇರಿಯಿಂದ ಶ್ರೀಮತಿ ಉಷಾದೇವಿ ಕುಷ್ಟಗಿ ರೋಟರಿ ಕಮ್ಯುಟಿ ಕೇರ್ ಸೆಂಟರನಲ್ಲಿ ನಡೆದ ಶಿಕ್ಷಕ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಸಂಸ್ಥೆಯಿದ ಕೊಡಮಾಡುವ “ನೇಶನ್ ಬಿಲ್ರ‍್ಸ ಅವಾರ್ಡನ್ನು” ಶಿಕ್ಷಕರಿಗೆ ಪ್ರಧಾನ ಮಾಡಿ ಮಾತನಾಡಿದರು. ಸಮಾಜದಲ್ಲಿ ಶಿಕ್ಷಕರಿಗೆ ಜವಾಬ್ದಾರಿಗಳಿವೆ ಪ್ರತಿ ಮಗು ತನ್ನ ಬಾವಿಭವಿಷ್ಯವನ್ನು ಉತ್ತಮವಾಗಿಸಿಕೊಳ್ಳಲು ನಾವೆಲ್ಲರು ಶ್ರಮಿಸಬೇಕು. ರೋಟರಿ ಸಂಸ್ಥೆಯವರು ವೃತ್ತಿಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಶಿಕ್ಷಕ ಬಳಗವನ್ನು ಗೌರವಿಸುತ್ತಿರುವುದು ಶ್ಲಾಘನೀಯವೆಂದರು.
    ಅತಿಥಿಗಳಾಗಿ ಆಗಮಿಸಿದ ರಾಜು ಗುಡಿಮನಿಯವರು ಮಾತನಾಡಿ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು ಮತ್ತು ಇವರ ಬದುಕು ತ್ಯಾಗಮಯ ಇಂತಹ ಶಿಕ್ಷಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆಯಿಂದರು. ರೋಟರಿ ಸಂಸ್ಥೆ ಗದಗ ಬೆಟಗೇರಿಯಿಂದ “ನೇಶನ್ ಬಿಲ್ರ‍್ಸ ಅವಾರ್ಡ ೨೦೨೩ ನ್ನು” ಎಸ್. ವಾಯ್. ಹೊಸಮನಿ, ಆರ್. ಎಲ್. ಹೂವಿನಹಳ್ಳಿ, ಆರ್. ಬಿ. ಸಂಕಣ್ಣವರ, ವಿ. ಎನ್. ವನಕಿ, ಬಿ. ಬಿ. ಹರ್ತಿ, ಆರ್. ಎಸ್. ರಾಜೋಳಿ, ಶ್ರೀಮತಿ ಎಸ್. ಎಸ್. ಬಳ್ಳಾರಿ, ಎಮ್. ಆರ್. ನೀಲಣ್ಣವರ, ಜಿ. ಆರ್. ದೇವಾಂಗಮಠ ಹಾಗೂ ಇಮಾಮಸಾಬ ಗಾಡಗೋಳಿ ಈ ೧೦ ಜನರಿಗೆ ನೀಡಲಾಗಿದೆ. ಸಂಸ್ಥೆಯ ಅಧ್ಯಕ್ಷರಾದ ರೊ ಚಂದ್ರಮೌಳಿ ಜಾಲಿ ಎಲ್ಲ ಪ್ರಶಸ್ತಿ ಸ್ವೀಕರಿಸಿದ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿ ಕಾರ್ಯಕ್ರಮದ ಮೊದಲಿಗೆ ಎಲ್ಲರನ್ನು ಸ್ವಾಗತಿಸಿದರು. ರೊ. ಶ್ರೀಧರ ಸುಲ್ತಾನಪೂರ ರೋಟರಿ ಲಿಟರಸಿ ಮಿಷನ್ ಇಂಡಿಯಾದಿದ ನೀಡುವ “ನೇಶನ್ ಬಿಲ್ರ‍್ಸ ಅವಾರ್ಡ” ಕುರಿತು ಸಂಕ್ಷಿಪ್ತ ಮಾಹಿತಿನೀಡಿ ಎಲ್ಲ ಶಿಕ್ಷಕರನ್ನು ಹಾಗೂ ಪ್ರಶಸ್ತಿ ಪ್ರಧಾನ ಮಾಡಿದ ಶ್ರೀ ಹೆಚ್. ಎಸ್. ಫಾರುಕಿಯವರನ್ನು ಸಭೆಗೆ ಪರಿಚಯಿಸಿದರು. ಕಾರ್ಯಕ್ರಮದ ಆತಿಥ್ಯವನ್ನು ವಹಿಸಿದ ಇಂ. ಅರವಿಂದಸಿAಗ ಬ್ಯಾಳಿಯವರುನ್ನು ರೊ. ಇಂ. ಕಿಶೋರ ರೇವಣಕರವರು ಸಭೆಗೆ ಪರಿಚಯಿಸಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ವೀಣಾ ತಿರ್ಲಾಪೂರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
    ರೋಟರಿ ಸಂಸ್ಥೆಯ ಸದಸ್ಯರಾದ ಡಾ. ಶೇಖರ್ ಡಿ. ಸಜ್ಜನರ, ಹೆಚ್. ಎಸ್. ಪಾಟೀಲ, ಮಹಾಂತೇಶ ಬಾತಾಖಾನಿ, ವಿಶ್ವನಾಥ ಯಳಮಲಿ, ಅಕ್ಷಯ ಶೆಟ್ಟಿ, ಸಂತೋಷ ಅಕ್ಕಿ, ಡಾ. ಆರ್. ಬಿ. ಉಪ್ಪಿನ, ಡಾ. ಪ್ರದೀಪ ಉಗಲಾಟ, ಕಮಲಾಕ್ಷಿ ಅಂಗಡಿ, ಸುರೇಶ ಕುಂಬಾರ, ಶಿವಾಚಾರ್ಯ ಹೊಸಳ್ಳಿಮಠ, ¯ಕ್ಷಣ ಭಾಂಡಗೆ, ಶ್ರೀಮತಿ ಕವಿತಾ ದಂಡಿನ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts