More

    ಗಂಡನನ್ನು ಕಳೆದುಕೊಂಡ ಶಿಕ್ಷಕಿಯನ್ನು ವಿದ್ಯಾರ್ಥಿಯೇ ಸಂತೈಸಿದ!; ವೈರಲ್​ ಆಯ್ತು ಆ ಚಿತ್ರ..

    ನವದೆಹಲಿ: ಮಕ್ಕಳು ದುಃಖದಲ್ಲಿದ್ದಾಗ ದೊಡ್ಡವರು ಸಾಂತ್ವನ ಹೇಳುವುದು ವಿಶೇಷವೇನಲ್ಲ. ಆದರೆ ದೊಡ್ಡವರೇ ದುಃಖದಲ್ಲಿದ್ದಾಗ ಚಿಕ್ಕವರು ಸಾಂತ್ವನ ಹೇಳುವುದು, ಅದರಲ್ಲೂ ಶಿಕ್ಷಕಿಯೊಬ್ಬರಿಗೆ ಆಕೆಯ ವಿದ್ಯಾರ್ಥಿಯೊಬ್ಬ ಸಾಂತ್ವನ ಹೇಳಿದ ಪರಿ ಈಗ ವಿಶೇಷವಾಗಿ ಪರಿಣಮಿಸಿದೆ.

    ಪತಿಯನ್ನು ಕಳೆದುಕೊಂಡ ಶಿಕ್ಷಕಿಗೆ ವಿದ್ಯಾರ್ಥಿಯೊಬ್ಬ ಸಾಂತ್ವನ ಹೇಳಿದ ರೀತಿಗೆ ಖುದ್ದು ಶಿಕ್ಷಕಿ ಮಾತ್ರವಲ್ಲದೆ, ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಮೆಸಾಚುಸೆಟ್ಸ್​ನ ಮೆಲಿಸಾ ಮಿಲ್ನರ್ ಎಂಬ ಶಿಕ್ಷಕಿಗೆ ಇಂಥದ್ದೊಂದು ಅಪರೂಪದ ಹಾಗೂ ಅತಿ ವಿಶೇಷವಾದ ಸಾಂತ್ವನ ಲಭಿಸಿದೆ. ತನ್ನ ವಿದ್ಯಾರ್ಥಿ ಸಂತೈಸಿದ ಆ ಪರಿಯನ್ನು ಖುದ್ದು ಮೆಲಿಸಾ ಟ್ವೀಟ್​ ಮಾಡಿ ಹೇಳಿಕೊಂಡಿದ್ದಾರೆ.

    ಶಿಕ್ಷಕಿ ಪತಿಯನ್ನು ಕಳೆದುಕೊಂಡು ದುಃಖದಲ್ಲಿ ಇರುವುದನ್ನು ತಿಳಿದ ವಿದ್ಯಾರ್ಥಿ ಚಿತ್ರವೊಂದನ್ನು ಬಿಡಿಸಿ ಅದರ ಮೂಲಕವೇ ಸಾಂತ್ವನ ಹೇಳಿದ್ದಾನೆ. ಡಿಯರ್ ಮಿಸೆಸ್​ ಮಿಲ್ನರ್​.. ಐ ಆ್ಯಮ್ ಸಾರಿ ಫಾರ್ ಯುವರ್​ ಲಾಸ್. ನಿಮಗೆ ನಿಮ್ಮ ಪತಿ ಕಾಣಿಸದಿದ್ದರೂ ನಿಮ್ಮಿಬ್ಬರ ಹೃದಯವನ್ನು ಬೆಸೆಯುವಂಥ ಗೆರೆಯೊಂದು ಅಲ್ಲಿದೆ. ನೀವು ಬೇಗ ಸುಧಾರಿಸಿಕೊಳ್ಳುತ್ತೀರಿ ಎಂದು ಆಶಿಸುತ್ತೇನೆ ಎಂಬುದಾಗಿ ಬರೆದಿರುವ ಹುಡುಗ, ಅದರ ಜೊತೆಗೆ ಚಿತ್ರವೊಂದನ್ನೂ ಬಿಡಿಸಿದ್ದಾನೆ. ಅದರಲ್ಲಿ ಟೀಚರ್ ಮೆಲಿಸಾ ಮೇಲೆ ಆಕಾಶ ನೋಡುವ ರೀತಿ, ಮೇಲೆ ಆಕಾಶದಲ್ಲಿ ಪತಿ ಮಿಲ್ನರ್ ಗಾಳಿಪಟದ ರೀತಿ ಇರುವಂತೆ ಹಾಗೂ ಇಬ್ಬರ ಹೃದಯಗಳ ಮಧ್ಯೆ ಗಾಳಿಪಟದ ಸೂತ್ರದಂಥ ಒಂದು ಎಳೆ ಹಾದುಹೋದಂತೆ ಚಿತ್ರವೊಂದನ್ನು ರಚಿಸಿದ್ದಾನೆ. ಇಂಥ ಕ್ಯಾಪ್ಷನ್​ ಇರುವ ಚಿತ್ರವನ್ನು ಟ್ವೀಟ್ ಮಾಡಿಕೊಂಡಿದ್ದು, ಅದು ಐದು ಲಕ್ಷಕ್ಕೂ ಅಧಿಕ ಲೈಕ್​ ಪಡೆದಿದ್ದು, 43 ಸಾವಿರಕ್ಕೂ ಅಧಿಕ ಮಂದಿ ರಿಟ್ವೀಟ್​ ಮಾಡಿಕೊಂಡಿದ್ದು, ವೈರಲ್​ ಆಗಿದೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ರಮೇಶ್​ ಜಾರಕಿಹೊಳಿ ರಾಸಲೀಲೆ ವಿಡಿಯೋ ವೈರಲ್: ಕೆಲಸ ಕೇಳಿಕೊಂಡು ಬಂದವಳ ಜತೆ ಸಲ್ಲಾಪ

    ಪಾಕಿಸ್ತಾನದಲ್ಲೊಬ್ಬಳು ಐಶ್ವರ್ಯ ರೈ ಹೋಲುವ ಚೆಲುವೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts