ಅವಾಚ್ಯ ಶಬ್ದ ಬಳಸಿದ್ದ ಪ್ರೀ-ನರ್ಸರಿ ಮಕ್ಕಳ ಬಾಯಿಗೆ ಟೇಪ್​ ಸುತ್ತಿದ್ದ ಶಿಕ್ಷಕಿ ಅಮಾನತು

ಗುರುಗ್ರಾಮ: ತರಗತಿ ನಡೆಸಲು ಬಹಳ ತೊಂದರೆ ನೀಡುತ್ತಿದ್ದ ಮತ್ತು ಅವಾಚ್ಯ ಶಬ್ದಗಳನ್ನು ಬಳಸುತ್ತಿದ್ದ ಖಾಸಗಿ ಶಾಲೆಯ ಇಬ್ಬರು ಪ್ರೀ-ನರ್ಸರಿ ಮಕ್ಕಳಿಗೆ ಸೆಲ್ಲೊಟೇಪ್​ ಸುತ್ತಿದ್ದ ಶಿಕ್ಷಕಿಯನ್ನು ಶಾಲೆ ಆಡಳಿತ ಮಂಡಳಿ ಶನಿವಾರ ಅಮಾನತುಗೊಳಿಸಿದೆ.

ಅಕ್ಟೋಬರ್​ನಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ವಿಡಿಯೋದಲ್ಲಿ ಶಿಕ್ಷಕಿ ನಾಲ್ಕು ವರ್ಷದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗೆ ಸೆಲ್ಲೋಟೇಪ್​ ಸುತ್ತುತ್ತಿರುವುದು ದಾಖಲಾಗಿದೆ.

ಈ ಬಗ್ಗೆ ಇಬ್ಬರೂ ವಿದ್ಯಾರ್ಥಿಗಳ ಪಾಲಕರು ಶಾಲೆಯ ಆಡಳಿತ ಮಂಡಳಿಗೆ ದೂರು ನೀಡಿದಾಗ, ಶಿಕ್ಷಕಿಯನ್ನು ತಕ್ಷಣ ಅಮಾನತು ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲೆಯ ಪ್ರಾಂಶುಪಾಲ, ‘ಪಾಲಕರ ದೂರು ನೀಡಿದ ಕೂಡಲೇ ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ’ ಎಂದಿದ್ದಾರೆ. (ಏಜೆನ್ಸೀಸ್)