More

  ಶಾಲೆಯಲ್ಲೇ ವಿವಾಹವಾದ ಶಿಕ್ಷಕಿ! ಅಚ್ಚರಿಗೊಂಡ ವಿದ್ಯಾರ್ಥಿಗಳು

  ಅಮೆರಿಕಾ: ಶಾಲೆಯೊಂದರಲ್ಲಿ ನರ್ಸರಿ ಮಕ್ಕಳಿಗೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು, ತಾನು ಪಾಠ ಮಾಡುವ ಮಕ್ಕಳ ಮುಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎಂದು ಬಯಸಿ, ಆಶ್ಚರ್ಯಕರ ರೀತಿ ತಮ್ಮ ಪತಿಯೊಂದಿಗೆ ಎಂಟ್ರಿ ಕೊಟ್ಟ ದೃಶ್ಯಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿವೆ.

  ಇದನ್ನೂ ಓದಿ: ರಾಹುಲ್ ಜೊತೆ ಮದುವೆಯಾಗಲು ಕಂಡೀಷನ್ ಹಾಕಿದ್ದ, ಸದಾ ವಿವಾದದಿಂದ ಸುದ್ದಿಯಾಗುವ ಈ ಚೆಲುವೆ ಬಗ್ಗೆ ನಿಮಗೆಷ್ಟು ಗೊತ್ತು?

  ಅಮೆರಿಕಾದ ಮಿನ್ನೇಸೋಟದಲ್ಲಿರುವ ಗುಡ್ ಶೆಫರ್ಡ್ ಕ್ಯಾಥೋಲಿಕ್ ಶಾಲೆಯ ಶಿಕ್ಷಕಿಯಾದ ಕ್ಯಾಟಿ ಜ್ವಿಯರ್ ಎಂಬುವರು ತಮ್ಮ ಪತಿ ಕೆವಿನ್ ಅವರೊಂದಿಗೆ ಕಳೆದ ಗುರುವಾರ ಶಾಲಾ ಆವರಣದಲ್ಲಿ ಉಂಗುರ ಬದಲಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಆಸೆಯಂತೆ ಮಕ್ಕಳು ಮದುವೆಗೆ ಸಾಕ್ಷಿಯಾಗಿದ್ದು, ನೆಚ್ಚಿನ ಟೀಚರ್​ ವಿವಾಹ ಸಮಾರಂಭಕ್ಕೆ ವಿಶೇಷ ಉಡುಗೊರೆಯನ್ನು ನೀಡಿ, ಶುಭಕೋರಿದ್ದಾರೆ.

  ಕಳೆದ ಒಂಬತ್ತು ವರ್ಷಗಳಿಂದ ಅದೇ ಶಾಲೆಯಲ್ಲಿ ಮಕ್ಕಳಿಗೆ ಬೋಧನೆ ಮಾಡುತ್ತಿರುವ ಜ್ವಿಯರ್, ತನ್ನ ಸ್ಕೂಲ್​ನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಮುಂದೆಯೇ ಮದುವೆ ಮಾಡಿಕೊಳ್ಳಬೇಕು ಎಂಬ ಬಯಕೆ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಸಾಕಷ್ಟು ಯೋಜನೆ ಹಾಕಿಕೊಂಡು, ಅದರಂತೆಯೇ ತಯಾರಿ ಕೂಡ ಮಾಡಿಕೊಂಡು ಇದೀಗ ಅದನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

  ಇದನ್ನೂ ಓದಿ: ಈ ರಾಜ್ಯಗಳಿಗೆ ಮಳೆ ಎಚ್ಚರಿಕೆ, ರಾಷ್ಟ್ರ ರಾಜಧಾನಿಯಲ್ಲಿ ಹೇಗಿದೆ ಹವಾಮಾನ?

  ಈ ದೃಶ್ಯಗಳನ್ನು ನೋಡಿದ ನೆಟ್ಟಿಗರು ಶಿಕ್ಷಕಿಯ ದಾಂಪತ್ಯ ಜೀವನಕ್ಕೆ ಶುಭಹಾರೈಸಿದ್ದು, ಮುಂದಿನ ದಿನಗಳು ಶುಭವಾಗಿರಲಿ ಎಂದು ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).

  ‘ಓಂ’ ಚಿತ್ರದಲ್ಲಿರುವ ಈ ಇಬ್ಬರು ಮಕ್ಕಳು ಈಗ ಹೇಗಿದ್ದಾರೆ ಗೊತ್ತಾ? ಸ್ಟಾರ್​ ನಟನ ಮಕ್ಕಳಿವರು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts