ರಾಯಚೂರು: ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಸಹ ಶಿಕ್ಷಕ ಮಹೆಬೂಬ್ ಅಲಿ ಎಂಬಾತನನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಡಿ ಬಡಿಗೇರ್ ಅಮಾನತ್ತುಗೊಳಿಸಿ ಮಂಗಳವಾರ ಆದೇಶಿಸಿದ್ದಾರೆ.
ಇದನ್ನೂ ಓದಿ: ಶಿಕ್ಷಕಿಗೆ ಆಶ್ಲೀಲ ಮೇಸೇಜ್ ಕಳಿಸುತ್ತಿದ್ದ ಮುಖ್ಯಶಿಕ್ಷಕನಿಗೆ ಧರ್ಮದೇಟು
ನಗರದ ಹೊರವಲಯದ ಯರಮರಸ್‌ನ ಸರ್ಕಾರಿ ಆದರ್ಶ ವಿದ್ಯಾಲಯ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹೆಬೂಬ್ ಅಲಿ ಅದೇ ಶಾಲೆಯಲ್ಲಿ ಇಂಟರ್ನಶಿಪ್ ತರಬೇತಿಯಲ್ಲಿದ್ದ ಶಿಕ್ಷಕಿಗೆ ಅನೇಕ ದಿನಗಳಿಂದ ಫೋನ್ ಮೂಲಕ ಅಸಭ್ಯವಾಗಿ ಸಂದೇಶಗಳನ್ನು ಕಳಿಸುವುದು ಮತ್ತು ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುತ್ತಿರುವ ಬಗ್ಗೆ ಕಿರುಕುಳಕ್ಕೊಳಗಾದ ಶಿಕ್ಷಕಿ ಆ.12ರಂದು ಇಲಾಖೆಗೆ ದೂರು ಸಲ್ಲಿದ್ದರು.
ದೂರಿನನ್ವಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಡಿಗೇರ್ ಸಹ ಶಿಕ್ಷಕನ್ನು ಅಮಾನತ್ ಮಾಡಿದ್ದಾರೆ.