ಜಲಂಧರ್: ತನ್ನ ಜಾತಕದಲ್ಲಿನ ‘ಮಂಗಲಿಕ್ ದೋಷ’ ನಿವಾರಣೆಗಾಗಿ ಶಿಕ್ಷಕಿಯೊಬ್ಬಳು ತನ್ನ 13 ವರ್ಷದ ಟ್ಯೂಷನ್ ವಿದ್ಯಾರ್ಥಿಯನ್ನು ಬಲವಂತವಾಗಿ ಮದುವೆಯಾದ ಘಟನೆ ಪಂಜಾಬಿನಿಂದ ವರದಿಯಾಗಿದೆ. ಸ್ಪೆಷಲ್ ಕ್ಲಾಸ್ ಎಂದು ಹುಡುಗನನ್ನು ಮನೆಯಲ್ಲಿರಿಸಿಕೊಂಡು, ನಂತರ ಮದುವೆಯ ಶಾಸ್ತ್ರಗಳನ್ನು ನಡೆಸಿದ್ದಾರೆ ಎನ್ನಲಾಗಿದೆ.
ಪಂಜಾಬಿನ ಜಲಂಧರ್ ನಗರದ ಬಸ್ತಿ ಬಾವ ಖೇಲ್ ನಿವಾಸಿಯಾದ ಶಿಕ್ಷಕಿಯೊಬ್ಬರು ಮದುವೆ ಆಗದಿರುವ ಬಗ್ಗೆ ತಲೆ ಕೆಡಿಸಿಕೊಂಡಿದ್ದರಂತೆ. ಇದಕ್ಕೆ ಜಾತಕದಲ್ಲಿರುವ ಮಂಗಲಿಕ್ ದೋಷ ಕಾರಣವಾಗಿದ್ದು, ಅದರ ನಿವಾರಣೆಗೆ ಅಪ್ರಾಪ್ತ ವಯಸ್ಸಿನ ಹುಡುಗನೊಂದಿಗೆ ಸಾಂಕೇತಿಕ ವಿವಾಹ ಮಾಡಿಕೊಳ್ಳಬೇಕು ಎಂದು ಪೂಜಾರಿಯೊಬ್ಬರು ಸಲಹೆ ನೀಡಿದ್ದರಂತೆ. ಇದಕ್ಕಾಗಿ ತಾನು ಟ್ಯೂಷನ್ ಮಾಡುತ್ತಿದ್ದ 13 ವರ್ಷದ ವಿದ್ಯಾರ್ಥಿಯನ್ನು ವರನನ್ನಾಗಿ ಆಯ್ದುಕೊಂಡ ಶಿಕ್ಷಕಿ, ಹುಡುಗನ ಪಾಲಕರ ಬಳಿ ತರಗತಿಗಳಿಗಾಗಿ ತನ್ನ ಮನೆಯಲ್ಲೇ ಆತ ಒಂದು ವಾರ ತಂಗಲು ಅನುಮತಿ ಪಡೆದಳಂತೆ!
ಇದನ್ನೂ ಓದಿ: ಪತಿಯನ್ನ ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪತ್ನಿ! ಬೇಲ್ ಮೇಲೆ ಹೊರ ಬಂದವಳಿಂದ ಮತ್ತೊಂದು ನೀಚ ಕೃತ್ಯ
ನಂತರ ಶಿಕ್ಷಕಿ ಮತ್ತು ಅವಳ ಕುಟುಂಬದವರು ಬಲವಂತವಾಗಿ ಹಲದಿ-ಮೆಹೆಂದಿ, ಸಾತ್ ಫೇರೆ ಮತ್ತು ಸುಹಾಗ್ರಾತ್ ಸಮಾರಂಭಗಳೊಂದಿಗೆ ಮದುವೆ ಶಾಸ್ತ್ರವನ್ನು ನಡೆಸಿದ್ದಾರೆ. ಮತ್ತೆರಡು ದಿನದ ನಂತರ ಶಿಕ್ಷಕಿಯನ್ನು ವಿಧವೆಯೆಂದು ಘೋಷಿಸಿ ಬಳೆ ಒಡೆಸುವ ಶಾಸ್ತ್ರ ಮಾಡಿದ್ದಾರೆ ಎನ್ನಲಾಗಿದೆ.
ಹುಡುಗನು ಮನೆಗೆ ವಾಪಸಾದಾಗ ಈ ಬಗ್ಗೆ ತಿಳಿಸಿ, ಶಿಕ್ಷಕಿಯ ಮನೆಯಲ್ಲಿ ಕೂಡಿಟ್ಟು ತನ್ನಿಂದ ಮನೆಗೆಲಸವನ್ನೂ ಮಾಡಿಸಿದ್ದಾಗಿ ಪಾಲಕರಿಗೆ ತಿಳಿಸಿದ್ದಾನೆ. ತಕ್ಷಣ ಬಸ್ತಿ ಬಾವ ಠಾಣೆಯಲ್ಲಿ ದೂರು ನೀಡಿದ ಪಾಲಕರು ಶಿಕ್ಷಕಿಯ ಮೇಲೆ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದ್ದಾರೆ. ಆದರೆ ಆ ನಂತರ ಶಿಕ್ಷಕಿ ಮತ್ತು ಪಾಲಕರ ನಡುವೆ ರಾಜಿ ಸಂಧಾನವಾಯಿತಾದ್ದರಿಂದ ದೂರನ್ನು ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬಿಜೆಪಿ ಸಂಸದ ಮನೆಯ ಸಮೀಪ ಬಾಂಬ್ ಬ್ಲಾಸ್ಟ್; ಸಿಸಿಟಿವಿ ಧ್ವಂಸ ಮಾಡಿ 15 ಕಡೆ ಸ್ಫೋಟ
ಆದರೆ, ಅಪ್ರಾಪ್ತ ವಯಸ್ಕನಿಗೆ ಸಂಬಂಧಿಸಿದ ಈ ಆರೋಪವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಆದೇಶಿಸಲಾಗಿದೆ ಎಂದು ಡಿಎಸ್ಪಿ ಗುರ್ಮೀತ್ ಸಿಂಗ್ ಹೇಳಿದ್ದಾರೆ. ಶಿಕ್ಷಕಿ ಮತ್ತು ಇತರ ಸಂಬಂಧಿತರ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗುವುದೆಂದು ಕಾದು ನೋಡಬೇಕಾಗಿದೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
“ನನ್ನ ಹೆಲಿಕಾಪ್ಟರ್ ಕೆಟ್ಟಿತ್ತು… ಆದರೆ ನಾನದನ್ನು ಸಂಚು ಎನ್ನುವುದಿಲ್ಲ…”
ಸಿಡಿ ಕೇಸ್ಗೆ ಮತ್ತೊಂದು ಟ್ವಿಸ್ಟ್: ಹನಿ’ಟ್ರ್ಯಾಪ್’ ಸೀಕ್ರೇಟ್ ರಿವೀಲ್!