ಕತ್ತರಿಯಿಂದ ಹಲ್ಲೆ ಮಾಡಿ ಶಾಲೆಯ ಮೊದಲ ಮಹಡಿಯಿಂದ ವಿದ್ಯಾರ್ಥಿನಿಯನ್ನು ತಳ್ಳಿದ ಶಿಕ್ಷಕಿ!

ನವದೆಹಲಿ: ಶಿಕ್ಷಕಿಯೊಬ್ಬಳು 5ನೇ ತರಗತಿಯ ವಿದ್ಯಾರ್ಥಿನಿಯ ತಲೆಗೆ ಕತ್ತರಿಯಿಂದ ಹೊಡೆದಿದ್ದಾಳೆ. ಇಷ್ಟಕ್ಕೇ ಸುಮ್ಮನಾಗದೆ ವಿದ್ಯಾರ್ಥಿನಿಯನ್ನು ಶಾಲೆಯ ಒಂದನೇ ಮಹಡಿಯಿಂದ ಕೆಳಗೆ ತಳ್ಳಿ, ಅಮಾನುಷವಾಗಿ ವರ್ತಿಸಿದ್ದಾಳೆ. ಈ ಘಟನೆ ದೆಹಲಿಯ ರಾಣಿ ಝಾನ್ಸಿ ರಾಣಿ ರಸ್ತೆ ಬಳಿಯ ಮಾಡೆಲ್ ಬಸ್ತಿ ಎದುರು ಇರುವ ಪ್ರಾರ್ಥಿಕ್ ವಿದ್ಯಾಲಯದಲ್ಲಿ ಸಂಭವಿಸಿದೆ. ಘಟನೆ ಸಂಭವಿಸುತ್ತಿದ್ದಂತೆ, ಕೂಡಲೇ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. A teacher of Prathmik Vidyalaya in Model Basti … Continue reading ಕತ್ತರಿಯಿಂದ ಹಲ್ಲೆ ಮಾಡಿ ಶಾಲೆಯ ಮೊದಲ ಮಹಡಿಯಿಂದ ವಿದ್ಯಾರ್ಥಿನಿಯನ್ನು ತಳ್ಳಿದ ಶಿಕ್ಷಕಿ!