ಮದ್ದೂರು: ಮಕ್ಕಳು ಮಾನವೀಯ ವೌಲ್ಯ, ನೈತಿಕತೆ, ಶಿಸ್ತು, ಸಂಸ್ಕಾರ ರೂಢಿಸಿಕೊಳ್ಳುವಂತೆ ಶಿಕ್ಷಕರು ಹಾಗೂ ಪಾಲಕರು ಮಾರ್ಗದರ್ಶನ ನೀಡಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಕೊಪ್ಪ ಹೋಬಳಿಯ ಹೊಸಗಾವಿಯಲ್ಲಿರುವ ಪುಷ್ಪಗಿರಿ ರೂರಲ್ ಎಜುಕೇಶನ್ ಟ್ರಸ್ಟ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪುಷ್ಪಗಿರಿ ಉತ್ಸವ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳನ್ನು ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದರಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಅಪಾರ ಎಂದರು.
ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಿ ಹಳ್ಳಿಗಾಡಿನ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಹೊಸಗಾವಿಯ ಪುಷ್ಪಗಿರಿ ನರ್ಸರಿ, ಪ್ರೆಮರಿ ಮತ್ತು ಹೈಸ್ಕೂಲ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರನ್ನು ಸಂಸ್ಥೆಯ ಅಧ್ಯಕ್ಷ ಸೋಮು, ಕಾರ್ಯದರ್ಶಿ ಆಶಾಸೋಮು ಗೌರವಿಸಿದರು. ಕ್ರೀಡಾಕೂಟ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.
ನಾಗಮಂಗಲ ನವೋದಯ ಇಂಟರ್‌ನ್ಯಾಷನಲ್ ಸ್ಕೂಲ್ ಅಧ್ಯಕ್ಷ ದೇವರಾಜು, ಕುಣಿಗಲ್ ವ್ಯಾಲಿ ಗ್ರೂಪ್ ಆ್ ಇನ್‌ಸ್ಟಿಟ್ಯೂಷನ್ ಕಾರ್ಯದರ್ಶಿ ಡಾ.ಜಿ.ಆರ್.ಕುಮಾರ್, ಒಕ್ಕಲಿಗರ ಸಂಘದ ಅಧ್ಯಕ್ಷ ಶಿವಲಿಂಗೇಗೌಡ, ಬಂಡವಾಳ ಹೂಡಿಕೆ ಸಲಹೆಗಾರ ಎಚ್.ಚನ್ನಕೇಶವ, ಖಾಸಗಿ ಶಾಲೆಗಳ ಸಂಘದ ಮುಖ್ಯಸ್ಥರಾದ ದೇವರಾಜು, ನಾಗೇಗೌಡ, ಅರುಣ್, ರಮೇಶ್, ಜಗದೀಶ್, ರಾಮಕೃಷ್ಣ, ಶಿವರಾಜು, ಪ್ರೇಮಾ ಇದ್ದರು.