ಬೆಂಗಳೂರು: ಬೆಳಿಗ್ಗೆ ಚಹಾದೊಂದಿಗೆ ದಿನ ಪ್ರಾರಂಭಿಸುವ ಅನೇಕ ಜನರಿದ್ದಾರೆ. ಸ್ವಲ್ಪ ತಲೆನೋವು ಬಂದರೂ ಟೈಂ ಪಾಸ್ ಆಗದಿದ್ದರೂ ಟೀ ಕುಡಿಯುತ್ತಾರೆ. ಇಬ್ಬರು ಗೆಳೆಯರು ಭೇಟಿಯಾದರೂ ಕೂಡಲೆ ಒಂದು ಕಪ್ ಟೀ ಕುಡಿಯೋಣ ಎಂದು ಯೋಚಿಸುತ್ತಾರೆ.
ತಜ್ಞರು ಹೇಳುವ ಪ್ರಕಾರ ಚಹಾವು ಕೆಲವೊಮ್ಮೆ ಉತ್ತೇಜಕವಾಗಿದ್ದರೂ, ಇದು ಹಲವಾರು ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ಅತಿಯಾಗಿ ಟೀ ತೆಗೆದುಕೊಳ್ಳುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಎನ್ನಲಾಗಿದೆ. ಆದರೆ ಟೀ ಕುಡಿಯುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಇತ್ತೀಚಿನ ಸಂಶೋಧಕರು.
ಹಾಗಾದರೆ ಚಹಾ ಕುಡಿಯುವುದಕ್ಕೂ ಕೊಲೆಸ್ಟ್ರಾಲ್ ಹೆಚ್ಚಿಸುವುದಕ್ಕೂ ಏನು ಸಂಬಂಧ ಎಂದು ನೀವು ಆಶ್ಚರ್ಯ ಪಡುತ್ತೀರಿ. ತಜ್ಞರ ಪ್ರಕಾರ, ಹೆಚ್ಚು ಹಾಲಿನ ಟೀ ಕುಡಿಯುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಹೆಚ್ಚಿಸುತ್ತದೆ. ಇದು ಅಪಧಮನಿಗಳಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ. ಇದು ದೀರ್ಘಾವಧಿಯಲ್ಲಿ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಚಹಾವನ್ನು ಕುಡಿಯುವುದರಿಂದ, ಚಯಾಪಚಯ ದರವು ಕ್ರಮೇಣ ಕಡಿಮೆಯಾಗುತ್ತದೆ.
ದೇಹದಲ್ಲಿ ಕೊಬ್ಬನ್ನು ಸುಡುವ ಪ್ರಕ್ರಿಯೆಯು ಕ್ರಮೇಣ ದುರ್ಬಲಗೊಳ್ಳುತ್ತದೆ. ಇದು ನೈಸರ್ಗಿಕವಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಅತಿಯಾಗಿ ಟೀ ಕುಡಿಯುವುದರಿಂದ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.
ಅತಿಯಾಗಿ ಚಹಾ ಸೇವಿಸುವವರಿಗೆ ಕೊಲೆಸ್ಟ್ರಾಲ್ ಜೊತೆಗೆ ಇತರ ಸಮಸ್ಯೆಗಳು ಎದುರಾಗಬಹುದು. ಅಸಿಡಿಟಿ ಸಮಸ್ಯೆಯೂ ಉಂಟಾಗುತ್ತದೆ. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವವರಿಗೆ ಅಸಿಡಿಟಿ ಸಮಸ್ಯೆ ಹೆಚ್ಚು ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಉದ್ಭವಿಸುತ್ತವೆ ಎನ್ನುತ್ತಾರೆ ತಜ್ಞರು. ಇದು ಚರ್ಮದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚು ಟೀ ಕುಡಿಯುವವರಿಗೆ ಮೊಡವೆ ಸಮಸ್ಯೆ ಉಂಟಾಗುತ್ತದೆ. ರಾತ್ರಿಯಲ್ಲಿ ಟೀ ಕುಡಿಯುವುದರಿಂದ ನಿದ್ರಾಹೀನತೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಸರ್ ನಂತಹ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೆಚ್ಚು ಟೀ ಕುಡಿಯುವವರಲ್ಲಿ ನಿರ್ಜಲೀಕರಣದ ಸಮಸ್ಯೆ ಇರುತ್ತದೆ ಎನ್ನುತ್ತಾರೆ ತಜ್ಞರು. ಹಾಗಾಗಿ ದಿನಕ್ಕೆ ಎರಡು ಬಾರಿ ಹೆಚ್ಚು ಟೀ ಕುಡಿಯುವುದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.