ಬೆಂಗಳೂರು: ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ ವಿತರಿಸಲಾಗುತ್ತಿರುವ ಅಭಿವೃದ್ಧಿ ಹಕ್ಕು ಪ್ರಮಾಣಪತ್ರ (ಡಿಆರ್‌ಸಿ) ಅಥವಾ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಸೌಲಭ್ಯವನ್ನು ಗ್ರೇಟರ್ ಬೆಂಗಳೂರು ಪ್ರದೇಶ (ಜಿಬಿಎ) ಕ್ಕೆ ಸೇರಿದ ಯಾವುದೇ ಜಾಗದಲ್ಲಾದರೂ ಬಳಸಿಕೊಳ್ಳಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಈ ಸಂಬಂಧ ನಗರಾಭಿವೃಧ್ಧಿ ಇಲಾಖೆ ಆದೇಶ ಹೊರಡಿಸಿರುವುದರಿಂದ ಜಿಬಿಎ ವ್ಯಾಪ್ತಿಗೆ ಸೇರಿರುವ ಬಿಬಿಎಂಪಿ, ಬಿಡಿಎ, ಬೆಂಗಳೂರು-ಮೈಸೂರು ಇನ್ಪ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರ (ಬಿಎಂಐಸಿಪಿಎ) ವ್ಯಾಪ್ತಿಯಲ್ಲಿ ಎಲ್ಲಿ ಬೇಕಾದರೂ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಬಿಬಿಎಂಪಿಯು 2023ರಲ್ಲಿ ಇಂತಹದ್ದೊಂದು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಇದೀಗ ಪ್ರಸ್ತಾವನೆ ಆಧರಿಸಿ ಕರ್ನಾಟಕ ನಗರ ಹಾಗೂ ಗ್ರಾಮಾಂತರ ಯೋಜನಾ ಕಾಯ್ದೆ 19614 ಸೆಕ್ಷನ್ 13ಕ್ಕೆ ತಿದ್ದುಪಡಿ ಈ ಹೊಸ ಆದೇಶವನ್ನು ಹೊರಡಿಸಲಾಗಿದೆ.
ಡಿಆರ್‌ಸಿ ಅಥವಾ ಟಿಡಿಆರ್‌ಅನ್ನು ಆಯಾ ಯೋಜನಾ ಪ್ರಾಧಿಕಾರಗಳ ಸಹಮತ ಇದ್ದರೂ, ಎಲ್ಲ ಪ್ರಾಧಿಕಾರಗಳಲ್ಲಿ ನೀಡಲಾಗುವ ಸೌಲಭ್ಯವನ್ನು ನಿರ್ವಹಿಸುವವ ಅಧಿಕಾರವನ್ನು ಬಿಡಿಎನಲ್ಲಿಯೇ ಮುಂದುವರಿಸಿ ಆದೇಶ ಮಾಡಲಾಗಿದೆ.