ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು

ಅನಂತಪುರ: ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆ ಮತದಾನ ಹಿಂಸಾಚಾರಕ್ಕೆ ತಿರುಗಿದ್ದು ಈ ಗಲಾಟೆಯಲ್ಲಿ ಟಿಡಿಪಿ ಕಾರ್ಯಕರ್ತ ಸಿದ್ಧ ಭಾಸ್ಕರ್​ ರೆಡ್ಡಿ ಹಾಗೂ ವೈಎಸ್​ಆರ್​ ಕಾರ್ಯಕರ್ತ ಪುಲ್ಲಾರೆಡ್ಡಿ ಮೃತಪಟ್ಟಿದ್ದಾರೆ.

ಅನಂತಪುರ ಜಿಲ್ಲೆಯ ತಾಡಪತ್ರಿ ಕ್ಷೇತ್ರದ ಮೀರಾಪುರಂನ ಮತಗಟ್ಟೆ 197ರಲ್ಲಿ ಈ ದುರ್ಘಟನೆ ಸಂಭವಿಸಿದೆ.
ಆಂಧ್ರಪ್ರದೇಶದಲ್ಲಿ ಮೊದಲು ಶಾಂತಿಯುತವಾಗಿಯೇ ಮತದಾನ ಪ್ರಾರಂಭವಾಯಿತು. ಅಧಿಕ ಸಂಖ್ಯೆಯಲ್ಲಿ ಮತದಾರರೂ ಮುಂಜಾನೆಯೇ ಆಗಮಿಸಿದರು. ಆದರೆ ಗುಂಟೂರು ಮತ್ತು ಚಿತ್ತೂರಿನಲ್ಲಿ ಮಾತ್ರ ವೈಎಸ್​ಆರ್​ ಹಾಗೂ ಟಿಡಿಪಿ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಬೆಳೆದು ಅದು ನಂತರ ಹಿಂಸಾಚಾರಕ್ಕೆ ತಿರುಗಿತು. ಇವಿಎಂಗಳೂ ನಾಶಗೊಂಡವು.

ಮೀರಾಪುರಂ ಗ್ರಾಮದ ಮತಗಟ್ಟೆಯ ಬಳಿ ಎರಡೂ ಪಕ್ಷಗಳ ಕಾರ್ಯಕರ್ತರ ವಾಗ್ವಾದ ತೀವ್ರಗೊಂಡು ಪರಸ್ಪರ ಕಲ್ಲು ತೂರಾಟ ನಡೆಸಿಕೊಂಡಿದ್ದಾರೆ.