ಹೊಸಪೇಟೆ: ಕೊಚ್ಚಿ ಹೋಗಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಜಾಗಕ್ಕೆ ಹೊಸ ಸ್ಟಾಪ್ ಲಾಗ್ ಗೇಟ್ ನ 5 ಎಲಿಮೆಂಟ್ ಗಳ ಪೈಕಿ ಜಿಂದಾಲ್ ನಿಂದ ಗುರುವಾರ ಒಂದು ಎಲೆಮೆಂಟ್ ಜಲಾಶಯಕ್ಕೆ ಬೆಳಗ್ಗೆ 8.50ಕ್ಕೆ ಬಂದಿದ್ದು, ಮಧ್ಯಾಹ್ನದ ನಂತರ ಅಳವಡಿಕೆ ಕಾರ್ಯ ಆರಂಭವಾಗಲಿದೆ.
ಕಳೆದ 5 ದಿನಗಳಿಂದ ಹರಿದು ಹೋಗುತ್ತಿರುವ ನೀರನ್ನು ತಡೆಯಲು ಜಲಾಶಯದಲ್ಲಿ ಸತ ಪ್ರಯತ್ನಗಳು ನಡೆಯುತ್ತಿವೆ. ಮೂರು ದಿನಗಳಲ್ಲಿ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಟಿಬಿಬಿ ಅಧಿಕಾರಿಗಳು ಹೇಳಿದರು. 5 ದಿನಗಳ ನಂತರ ಜಲಾಶಯಕ್ಕೆ ಪೊಲೀಸ್ ಭದ್ರತೆಯಲ್ಲಿ ಬಳ್ಳಾರಿಯ ಜಿಂದಾಲ್ ನಿಂದ ಅಂತೂ ಬಂತು ಸ್ಟಾಫ್ ಲಾಗ್ ಗೇಟ್ ನ ಒಂದು ಎಲಿಮೆಂಟ್ ಬಂದಿದೆ.
ಮಂಗಳವಾರ ಎಲಿಮೆಂಟ್ ಗಳು ಬರಬೇಕಿತ್ತು. ತಡವಾಗಿದೆ. ರಾತ್ರಿ ಬರುವ ಸುಚನೆಯಿತ್ತು. ಆದರೆ, ಮಳೆಯಿಂದಾಗಿ ತರಲಾಗದೇ, ಗುರುವಾರ ಬೆಳಗ್ಗೆ ತರಲಾಗಿದೆ. ಜಿಂದಾಲ್ ನಿಂದ ನಗರದ ಹರಿಹರ ರಸ್ತೆಯ ಹೊತ್ತುತಂದ ಟ್ರಕ್, ಇಲ್ಲಿನ ಸಂಚಾರಿ ಪೊಲೀಸ್ ಠಾಣೆ ಬಳಿ ನಗರ ಪ್ರವೇಶ ಮಾಡಿ, ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಡ್ಯಾಮ್ ಗೆ ಬಂದಿದೆ. ಇನ್ನು 4 ಎಲಿಮೆಂಟ್ ಗಳು ನಾರಾಯಣ, ಹಿಂಸೂಸ್ತಾನ್ ಎಂಜನಿಯರ್ಸ್ ಗಳಿಂದ ಬರಬೇಕಿದೆ.
ತುಂಗಭದ್ರಾ ಜಲಾಶಯದ ಆವರಣಕ್ಕೆ ಎಲಿಮೆಂಟ್ ಬರುತ್ತಿದ್ದಂತೆ ಡ್ಯಾಮ್ ಗೇಟ್ ಗಳ ಎಕ್ಸ್ಪರ್ಟ್ ಕನ್ನಯ್ಯ ನಾಯ್ಡು ಹಾಗೂ ಅವರ ತಂಡ ಸಂತಸ ಗೊಂಡರು. ತಜ್ಞರು ಹಾಗೂ ಅಧಿಕಾರಿಗಳು ಎಲಿಮೆಂಟ್ ಪರಿಶೀಲನೆ ಮಾಡಿದರು.