More

    ಟಿಬಿ ಸೋಲಿಸಿ, ದೇಶಗೆಲ್ಲಿಸಿ: ಸಿದ್ದಪ್ಪ ಲಿಂಗದಾಳ

    ವಿಜಯವಾಣಿ ಸುದ್ದಿಜಾಲ ಗದಗ
    ಹಿಂದಿನ ಕಾಲದಲ್ಲಿ ಕ್ಷಯರೋಗ ಎಂದರೆ ಜನರಲ್ಲಿ ಭಯದ ವಾತವಾರಣ ಇತ್ತು. ಇಂದು ಆರೋಗ್ಯ ಇಲಾಖೆಯು ನಿರಂತರ ಅರಿವು ಮೂಡಿಸುವ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮತ್ತು ಔಷದೋಪಚಾರದಿಂದ ಈ ರೋಗಗಳ ಬಗ್ಗೆ ಜನರಲ್ಲಿ ಭಯ ಮುಕ್ತಗೊಳಿಸಲಾಗಿದೆ ಎಂದು ಆರೋಗ್ಯ ನಿರೀಣಾ-ಧಿಕಾರಿ ಸಿದ್ದಪ್ಪ ಲಿಂಗದಾಳ ಹೇಳಿದರು.
    ತಾಲೂಕಿನ ಅಡವಿ ಸೋಮಾಪುರ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಸಕ್ರೀಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯದ ಮೇಲ್ವಿಚಾರಣೆ ನಡೆಸಿ ಮಾತನಾಡಿದ ಅವರು, ಸಂಪೂರ್ಣ ಕ್ಷಯರೋಗ ಮುಕ್ತ ಕರ್ನಾಟಕ ನಿಮಿರ್ಸಲು ಸಮುದಾಯ ಕೈಜೊಡಿಸಲು ಮತ್ತು ಟಿಬಿ ಸೋಲಿಸಿ ದೇಶ ಗೆಲ್ಲಿಸಲು ಸಹಕಾರ ನೀಡಬೇಕೆಂದು ಹೇಳಿದರು.
    ಟಿಬಿಯು ಶ್ವಾಸಕೋಶಗಳಿಗಷ್ಟೇ ಅಲ್ಲದೇ ದೇಹದ ಇನ್ನಿತರ ಭಾಗಗಳಿಗೂ ಹರಡಬಹುದು. ರೋಗ ಲಕ್ಷಣಗಳು ಕಂಡುಬಂದರೆ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಪರೀಸಿಕೊಳ್ಳಬೇಕು. ಆರೋಗ್ಯ ಸಮುದಾಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ಲಭಿಸುವುದು ಎಂದು ಹೇಳಿದರು
    ಗದಗ ತಾಲೂಕು ಪ್ರಭಾರ ಆರೋಗ್ಯ ಶಿಣಾಧಿಕಾರಿ ವೈ. ಎನ್​. ಕಡೆಮನಿ ಮಾತನಾಡಿ, ಕ್ಷಯರೋಗ ರೋಗಿಯು ಕೆಮ್ಮಿದಾಗ ಅಥವಾ ಸೀನುವಾಗ ಹೊರಬರುವ ತುಂತುರಗಳಿಂದ ರೋಗಾಣು ಹರಡುತ್ತದೆ. ಗಾಳಿ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಸೋಂಕು ಉಂಟಾಗುತ್ತದೆ. ಎರಡು ವಾರು ಅಥವಾ ಅದಕ್ಕಿಂತ ಮೇಲ್ಪಟ್ಟು ಸತತವಾದ ಕೆಮ್ಮ ಬದರೆ ಕ್ಷಯರೋಗವಾಗಿರಬಹುದು ಎಂದರು.
    ಆಶಾ ಕಾರ್ಯಕರ್ತೆಯರಾದ ಮಾಲಾ ಮೇವುಂಡಿ, ರೇಣುಕಾ ಪೂರದ, ಮೀನಾ ವಡ್ಡರ, ಮಂಜುಳಾ ಆರೊ, ಲಲಿತಾ ಅಂಗಡಿ, ಶಾಂತಾ ಖಾನಾಪೂರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts