ಉತ್ತಮ ಸ್ವಯಂ ಸೇವಾ ಸಂಸ್ಥೆ ಪ್ರಶಸ್ತಿ

ಬೀದರ್: ಕ್ಷಯ ರೋಗ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ಬಸವಣ್ಣ ಶಿಕ್ಷಣ, ಗ್ರಾಮಿಣ ಮತ್ತು ನಗರಾಭಿವೃದ್ದಿ ಸೇವಾ ಸಂಸ್ಥೆಗೆ ಉತ್ತಮ ಸ್ವಯಂ ಸೇವಾ ಸಂಸ್ಥೆ ಪ್ರಶಸ್ತಿ ನೀಡಲಾಗಿದೆ.
ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದಲ್ಲಿ ನಡೆದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಬಸವರಾಜ ಖಂಡ್ರೆ ಅವರಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಡಿಎಚ್ಒ ಡಾ.ಎಂ.ಎ. ಜಬ್ಬಾರ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ದೀಪಾ ಖಂಡ್ರೆ, ಡಾ. ಶಿವರಾಜ ಹೆಡೆ ಇತರರಿದ್ದರು. ಬಸವಣ್ಣಾ ಸಂಸ್ಥೆ ಜಿಲ್ಲೆಯಲ್ಲಿ ಕ್ಷಯ ರೊಗದ ಬಗ್ಗೆ ಸುಮಾರು 165 ಗ್ರಾಮಗಳಲ್ಲಿ ಪರಿಣಾಮಕಾರಿಯಾಗಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿದೆ. ಅಲ್ಲದೇ 48 ಕ್ಷಯ ರೋಗಿಗಳನ್ನು ಆಪ್ತಸಮಾಲೋಚನೆ ಮಾಡಿ ಚಿಕಿತ್ಸೆಯನ್ನು ಮಧ್ಯದಲ್ಲಿ ಬಿಡದಂತೆ ಸತತವಾಗಿ 6ತಿಂಗಳ ಮಾತ್ರೆ ತೆಗೆದುಕೊಳ್ಳುವಂತೆ ಮಾಡಿದೆ. ಕ್ಷಯ ರೋಗದ ಕುರಿತು ಸಂಸ್ಥೆ ಮಾಡಿದ ಯಶಸ್ವಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.