ಸಿನಿಮಾ

ವಿದೇಶಿ ಖರ್ಚಿಗೆ ತೆರಿಗೆ ಭಾರ; ಜುಲೈ 1ರಿಂದ ಅನ್ವಯ

ವಿದೇಶಗಳಲ್ಲಿ ಮಾಡುವ ಖರ್ಚಿನ ಮೇಲೆ ಶೇ. 20ರಷ್ಟು ತೆರಿಗೆ ವಿಧಿಸಲಾಗುತ್ತದೆ. ಕ್ರೆಡಿಟ್ ಕಾರ್ಡ್​ನಿಂದ ಪಾವತಿಸುವ ವಿದೇಶಿ ವೆಚ್ಚಕ್ಕೂ ಜುಲೈ 1ರಿಂದ ಈ ತೆರಿಗೆ ಅನ್ವಯವಾಗುತ್ತದೆ ಎನ್ನಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಿದ್ದು, ಪ್ರಸ್ತುತ 7 ಲಕ್ಷ ರೂಪಾಯಿವರೆಗಿನ ಕ್ರೆಡಿಟ್ ಕಾರ್ಡ್ ಪಾವತಿಗೆ ತೆರಿಗೆ ವಿನಾಯಿತಿಯು ಮುಂದುವರಿಯಲಿದೆ ಎಂದು ಹೇಳಿದೆ.

ಮೂಲದಲ್ಲೇ ತೆರಿಗೆ ಸಂಗ್ರಹ (ಟಿಸಿಎಸ್) ಕೂಡ ಒಂದು ರೀತಿಯಲ್ಲಿ ಮೂಲದಲ್ಲಿಯೇ ತೆರಿಗೆ ಕಡಿತವನ್ನು (ಟಿಡಿಎಸ್) ಹೋಲುತ್ತದೆ. ಏಕೆಂದರೆ, ಟಿಸಿಎಸ್​ನಲ್ಲಿ ಸಂಗ್ರಹಿಸಲಾಗುವ ತೆರಿಗೆಯು ನಿಮ್ಮ ಪರವಾಗಿ ಮೂರನೇ ವ್ಯಕ್ತಿಯಿಂದ ಕಡಿತವಾಗಿರುತ್ತದೆ. ಇದನ್ನು ಎಲ್​ಆರ್​ಎಸ್ (ಉದಾರೀಕೃತ ರವಾನೆ ಯೋಜನೆ) ಅಡಿಯಲ್ಲಿ ಪಾವತಿಗಳ ಮೇಲೆ 2020ರ ಬಜೆಟ್​ನಲ್ಲಿ ಪರಿಚಯಿಸಲಾಯಿತು. ಅಂದರೆ, ಪರದೇಶಗಳಲ್ಲಿನ ವೆಚ್ಚಕ್ಕೆ ತೆರಿಗೆ ವಿಧಿಸುವುದು. ಟಿಸಿಎಸ್ ಎಂಬುದು ತೆರಿಗೆಯಲ್ಲ. ಇದು ಕೇವಲ ತೆರಿಗೆ ಸಂಗ್ರಹವಾಗಿದೆ. ಉದಾಹರಣೆಗೆ, ನೀವು ಹೋಟೆಲ್​ನಲ್ಲಿ ತಂಗಲು 100 ಡಾಲರ್ ಖರ್ಚು ಮಾಡಿದರೆ, ನಿಮಗೆ ಕಾರ್ಡ್ ಒದಗಿಸುವವರು 20 ಡಾಲರ್ ಟಿಸಿಎಸ್ ಕಡಿತಗೊಳಿಸುತ್ತಾರೆ. ಈ ಟಿಸಿಎಸ್​ಗೆ ಸಮಾನವಾದ ರೂಪಾಯಿಗಳನ್ನು (1,648 ರೂ.) ನೀವು ವರ್ಷದ ಅವಧಿಯಲ್ಲಿ ಪಾವತಿಸಬೇಕಾದ ಯಾವುದೇ ಮುಂಗಡ ತೆರಿಗೆಯಲ್ಲಿ ಹೊಂದಿಸಲು ಅವಕಾಶವಿರುತ್ತದೆ. ಇಂತಹ ಯಾವುದೇ ತೆರಿಗೆ ಬಾಕಿ ಪಾವತಿ ಇಲ್ಲದಿದ್ದಲ್ಲಿ, ವರ್ಷದ ಕೊನೆಯಲ್ಲಿ ಮರುಪಾವತಿಯನ್ನು ಕ್ಲೇಮ್ ಮಾಡಬಹುದು.

ತೆರಿಗೆ ನಿಖರವಾಗಿ ಯಾವುದಕ್ಕೆ ಅನ್ವಯಿಸುತ್ತದೆ?: 2020ರ ಬಜೆಟ್​ನಲ್ಲಿ ಮೊದಲ ಬಾರಿಗೆ ಟಿಸಿಎಸ್ ವಿಧಿಸಲಾಯಿತು. ಆಗ ಇದು ವರ್ಷಕ್ಕೆ 7 ಲಕ್ಷ ರೂಪಾಯಿಗಿಂತ ಹೆಚಿನ ಎಲ್​ಆರ್​ಎಸ್ ಅಡಿಯಲ್ಲಿನ ಪಾವತಿಗಳಿಗೆ ಮಾತ್ರ ಅನ್ವಯಿಸುತ್ತಿತ್ತು. ಕ್ರೆಡಿಟ್ ಕಾರ್ಡ್​ಗಳನ್ನು ಎಲ್​ಆರ್​ಎಸ್ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಆದರೆ, 2023ರ ಬಜೆಟ್​ನಲ್ಲಿ ಈ ಕನಿಷ್ಠ ಮಿತಿಯನ್ನು ರದ್ದುಗೊಳಿಸಲಾಯಿತು. ಅಲ್ಲದೆ, ಎಲ್​ಆರ್​ಎಸ್ ನಿಯಮಕ್ಕೆ ಇತ್ತೀಚಿಗೆ ಮಾಡಲಾಗಿರುವ ತಿದ್ದುಪಡಿ ಮೂಲಕ ಕ್ರೆಡಿಟ್ ಕಾರ್ಡ್​ಗೆ ನೀಡಲಾಗಿದ್ದ ವಿನಾಯಿತಿಯನ್ನು ಕೂಡ ತೆಗೆದುಹಾಕಲಾಗಿದೆ ಎಂದು ಹೇಳಲಾಗಿತ್ತು. ಡೆಬಿಟ್ ಕಾರ್ಡ್, ಫೋರೆಕ್ಸ್ ಕಾರ್ಡ್ ಇತ್ಯಾದಿಗಳ ಮೂಲಕ ಖರ್ಚು ಮಾಡಿದರು ಸಹ ಎಲ್​ಆರ್​ಎಸ್ ನಿಯಮ ಅನ್ವಯಿಸುತ್ತದೆ ಎನ್ನಲಾಗಿತ್ತು. ಆದರೀಗ ಕೇಂದ್ರ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಿದೆ. ಎಲ್​ಆರ್​ಎಸ್ ಮಿತಿಯಿಂದ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್​ಗಳನ್ನು ಹೊರಗಿಟ್ಟಿದೆ. ಅಂದರೆ, ಒಂದು ಹಣಕಾಸು ವರ್ಷದಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್​ಗಳ ಮೂಲಕ ವಿದೇಶಗಳಲ್ಲಿನ ಖರೀದಿಗೆ ಪಾವತಿಸುವ 7 ಲಕ್ಷ ರೂಪಾಯಿವರೆಗಿನ ಹಣಕ್ಕೆ ಟಿಸಿಎಸ್ ಅನ್ವಯ ಆಗುವುದಿಲ್ಲ.

ಮರಳಿ ಕ್ಲೇಮ್ ಮಾಡುವುದ್ಹೇಗೆ?

ಪ್ರತಿ ತ್ರೖೆಮಾಸಿಕದಲ್ಲಿ ಟಿಸಿಎಸ್ ರಿಟರ್ನ್ಸ್ ಅನ್ನು ಬ್ಯಾಂಕ್ ಸಲ್ಲಿಸಿದಾಗ ಟಿಸಿಎಸ್ ಫಾಮ್ರ್ 26 ಎಎಸ್​ನಲ್ಲಿ ಅದು ಪ್ರತಿಫಲಿಸುತ್ತದೆ. ನೀವು ಪಾವತಿಸಬೇಕಾದ ಮುಂಗಡ ತೆರಿಗೆಗೆ ಅದನ್ನು ಸರಿಹೊಂದಿಸಬಹುದು. ಉದ್ಯೋಗದಾತರಿಂದ ತೆರಿಗೆಯನ್ನು ಸಂಪೂರ್ಣವಾಗಿ ಕಡಿತಗೊಳಿಸಿದ ಸಂಬಳ ಪಡೆಯುವ ವ್ಯಕ್ತಿಗಳಿಗೆ, ಯಾವುದೇ ಮುಂಗಡ ತೆರಿಗೆ ಬಾಕಿ ಇರದಿರಬಹುದು. ಅಂತಹ ಸಂದರ್ಭದಲ್ಲಿ ನಿಮ್ಮ ರಿಟರ್ನ್​ಗಳನ್ನು ಸಲ್ಲಿಸುವಾಗ ಮರುಪಾವತಿಯನ್ನು ಕ್ಲೇಮ್ ಮಾಡಬಹುದು. ಆದರೂ ಈ ಮೊತ್ತದ ಮೇಲೆ ಗಳಿಸುವ ಬಡ್ಡಿಯನ್ನು ನೀವು ಕಳೆದುಕೊಳ್ಳುತ್ತೀರಿ.

ವಿದೇಶಿ ಶಿಕ್ಷಣದ ಬಗ್ಗೆ ಏನು?

ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ರವಾನೆಯಾಗುವ ಮೊತ್ತಕ್ಕೆ ಶೇ. 5ರಷ್ಟು ಮಾತ್ರ ಟಿಸಿಎಸ್ ವಿಧಿಸಲಾಗುತ್ತದೆ. ಶಿಕ್ಷಣದ ಸಾಲಗಳಿಗೆ ಇದು ಶೇ. 0.5 ಮಾತ್ರವಾಗಿದೆ. ಇದಕ್ಕೂ -ಠಿ; 7 ಲಕ್ಷ ಗರಿಷ್ಠ ಮಿತಿ ಇದೆ. ದೈನಂದಿನ ವೆಚ್ಚ, ಸಾರಿಗೆ, ಕ್ಯಾಂಪಸ್ ಹೊರಗಿನ ವಸತಿ ಸೇರಿದಂತೆ ವಿದ್ಯಾರ್ಥಿಯ ನಿರ್ವಹಣೆ ವೆಚ್ಚಗಳ ಬಗ್ಗೆ ಎಷ್ಟು ಟಿಸಿಎಸ್ ಕಡಿತ ಮಾಡಬೇಕು ಎಂಬುದರ ಬಗೆಗೆ ಅನುಮಾನಗಳಿವೆ. ಆದರೂ ಇಂತಹ ಪ್ರಾಸಂಗಿಕ ವೆಚ್ಚಗಳ ಮೇಲೆ ಶೇ. 5ರಷ್ಟು ಟಿಸಿಎಸ್ ವಿಧಿಸಬೇಕು ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಅದೇನೇ ಇದ್ದರೂ, ವೆಚ್ಚವು ಪ್ರಾಸಂಗಿಕವಾಗಿದೆ ಎಂದು ಸಾಬೀತುಪಡಿಸುವುದು ಬ್ಯಾಂಕಿಗೆ ಸವಾಲಾಗಿದೆ.

ಪ್ರಾಯೋಗಿಕ ತೊಂದರೆಗಳಿವೆಯೇ?

ಹೌದು. ವ್ಯಾಪಾರ ಉದ್ದೇಶಗಳಿಗಾಗಿ ಕಾರ್ಪೆರೇಟ್ ಕ್ರೆಡಿಟ್ ಕಾರ್ಡ್​ನಲ್ಲಿ ಖರ್ಚು ಮಾಡುವುದು ತಾಂತ್ರಿಕವಾಗಿ ‘ಕರೆಂಟ್ ಅಕೌಂಟ್’ನಲ್ಲಿ ಖರ್ಚು ಮಾಡುವುದು ಆಗಿದ್ದು, ಇದು ಎಲ್​ಆರ್​ಎಸ್ ಅಡಿಯಲ್ಲಿ ಬರಬಾರದು. ಆದ್ದರಿಂದ, ಇದರ ಮೇಲೆ ಟಿಸಿಎಸ್ ಕಡಿತಗೊಳಿಸಬಾರದು. ವ್ಯಾಪಾರ ಪ್ರವಾಸದಲ್ಲಿರುವ ಉದ್ಯೋಗಿಯ ಉದಾಹರಣೆಯನ್ನು ನೀಡುವ ಮೂಲಕ ಹಣಕಾಸು ಸಚಿವಾಲಯವು ಮೇ 18ರಂದು ಟ್ವೀಟ್​ನಲ್ಲಿ ಈ ನಿಲುವನ್ನು ಬೆಂಬಲಿಸಿದೆ. ಇದು ಎಲ್​ಆರ್​ಎಸ್ ಅಡಿಯಲ್ಲಿ ಬರುವುದಿಲ್ಲ. ಆದರೂ, ಕಾರ್ಪೆರೇಟ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಉದ್ಯೋಗಿ ಮಾಡುವ ವೈಯಕ್ತಿಕ ವೆಚ್ಚಗಳಿಂದ ವ್ಯಾಪಾರ ವೆಚ್ಚಗಳನ್ನು ಹೇಗೆ ಪ್ರತ್ಯೇಕಿಸಲು ಬ್ಯಾಂಕುಗಳಿಗೆ ಸಾಧ್ಯವಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮತ್ತೊಂದು ನಿರ್ಧಾರ; ಇದು ಎಲ್ಲ ಕಡೆಗೂ ಅನ್ವಯ ಎಂದ ಸಿಎಂ

Latest Posts

ಲೈಫ್‌ಸ್ಟೈಲ್