ಮೂಲಸೌಲಭ್ಯಕ್ಕೆ ಒತ್ತಾಯಿಸಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ

ತಾವರಗೇರಾ: ಪಟ್ಟಣದ 12ನೇ ವಾರ್ಡ್‌ನ ನಿವಾಸಿಗಳು ಮೂಲಸೌಲಭ್ಯಗಳಿಗೆ ಆಗ್ರಹಿಸಿ ಪಪಂ ಕಚೇರಿ ಎದುರು ಖಾಲಿ ಕೊಡಗಳೊಂದಿಗೆ ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಕುಡಿವ ನೀರಿನ ಸಮಸ್ಯೆ, ಬೀದಿದೀಪಗಳ ಕೊರತೆ ಸೇರಿ ಇತರ ಸಮಸ್ಯೆಗಳ ಬಗ್ಗೆ ಪಪಂ ಮುಖ್ಯಾಧಿಕಾರಿ ಸಾಹೇಬಣ್ಣ ಸೂಗೂರರ ಮುಂದಿಟ್ಟರು. 15 ದಿನದಿಂದ ಕುಡಿವ ನೀರು ಬರುತ್ತಿಲ್ಲ. ನೀರಿಗಾಗಿ ನಿತ್ಯ ಪರದಾಡುವ ದುಸ್ಥಿತಿ ಎದುರಾಗಿದೆ. ಅಲ್ಲದೆ, ಸರಿಯಾದ ಬೀದಿದೀಪಗಳಿಲ್ಲದಿರುವುದರಿಂದ ಮಹಿಳೆಯರು ಮತ್ತು ಮಕ್ಕಳು ರಾತ್ರಿ ವೇಳೆ ಮನೆಬಿಟ್ಟು ಹೊರ ಬರಲು ಹೆದರುವಂತಾಗಿದೆ. ನೀರಿಗಾಗಿ ಟ್ಯಾಂಕರ್ ಅವಲಂಬಿತವಾಗಿರುವ ವಾರ್ಡ್‌ಗಳಲ್ಲಿ ಸಮರ್ಪಕ ನೀರು ಪೂರೈಸುವಂತೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಗ್ರಾಪಂ ಮಾಜಿ ಸದಸ್ಯ ವೀರಭದ್ರಪ್ಪ ದಂಡಿನ್, ನಿವೃತ್ತ ಶಿಕ್ಷಕ ಪರಸಪ್ಪ ದಾಸರ, ವಿಕಾಸ್ ಭೋಲಾ, ರಮೇಶ ಮೂಗಣ್ಣಿ, ಪರಶುರಾಮ ಉಪ್ಪಳ, ಭಾರತಿ, ಸಾವಿತ್ರಮ್ಮ, ಲಕ್ಷ್ಮಮ್ಮ ಪ್ರತಿಭಟನೆಯಲ್ಲಿದ್ದರು.