ಒಂಬತ್ತು ಜನರಿಗೆ ಶಂಕಿತ ಡೆಂಘೆ

ತಾವರಗೇರಾ: ಕಳಮಳ್ಳಿ ತಾಂಡಾ ಜನ ಒಂದು ತಿಂಗಳಿಂದ ಜ್ವರದಿಂದ ತತ್ತರಿಸಿದ್ದು, 9 ಮಂದಿ ಶಂಕಿತ ಡೆಂಘೆಯಿಂದ ಬಳಲುತ್ತಿದ್ದಾರೆ.

ಕಿಲಾರಹಟ್ಟಿ ಗ್ರಾಪಂ ವ್ಯಾಪ್ತಿಯ ಕಳಮಳ್ಳಿ ತಾಂಡಾದಲ್ಲಿ 350ಕ್ಕೂ ಹೆಚ್ಚು ಮನೆಗಳಿವೆ. 250ಕ್ಕೂ ಹೆಚ್ಚು ಜನರಿಗೆ ವೈರಲ್ ಫೀವರ್ ಕಾಣಿಸಿಕೊಂಡಿದೆ. ಇಲಾಖೆ ವರದಿ ಪ್ರಕಾರ 9 ಜನರಿಗೆ ಡೆಂಘೆ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಮುದೇನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ 15 ದಿನಗಳಿಂದ ತಾಂಡಾದಲ್ಲಿ ವಾಸ್ತವ್ಯ ಹೂಡಿದ್ದು, ನಿವಾಸಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಚಿಕಿತ್ಸೆ ಕಾರ್ಯದಲ್ಲಿ ತೊಡಗಿದ್ದಾರೆ.

 

ಕಳಮಳ್ಳಿ ತಾಂಡಾದ ಒಂಬತ್ತು ಜನ ಡೆಂಘೆಯಿಂದ ಬಳಲುತ್ತಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮನೆ ಸುತ್ತ ಮುತ್ತ ಸ್ವಚ್ಛತೆ ಕಾಪಾಡುವಂತೆ ಜಾಗೃತಿ ಮೂಡಿಸಲಾಗಿದೆ.
| ಡಾ.ಆನಂದ ಗೋಟೂರ ತಾಲೂಕು ವೈದ್ಯಾಧಿಕಾರಿ ಕುಷ್ಟಗಿ

Leave a Reply

Your email address will not be published. Required fields are marked *