ತಾವರಗೇರಾ: ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯಡಿ ಜಾರಿಗೋಳಿಸಿದ ಸಂಸ್ಥೆಗಳು ದೇಶಾದ್ಯಂತ 350 ಶಾಖೆಗಳಿದ್ದು, ಉಡುಪಿ ಶಾಖೆಯವರು ಪಟ್ಟಣದ ರಾಮದೇವರ ಸಮುದಾಯ ಭವನದಲ್ಲಿ 13 ದಿನಗಳ ಕಾಲ ವಿವಿಧ ರೋಗ, ಆರೋಗ್ಯ ತೊಂದರೆಗಳಿಗೆ ಉಚಿತ ಫುಟ್ ಪಲ್ಸ್ ಥೆರಪಿ ನೀಡುತ್ತಿದ್ದಾರೆ.
ಮಧುಮೆಹ, ಹೈ ಬಿಪಿ, ಸಂದಿವಾತ, ನರಗಳ ಸೆಳೆತ, ಸ್ಪಾಂಡಲೈಟೀಸ್, ನಿದ್ರಾಹೀನತೆ, ಥೈರಾಯ್ಡ, ಲಕ್ವಾ, ಬೆನ್ನು ನೋವು ಮುಂತಾದ ಸುದೀರ್ಘ ನೋವುಗಳಿಗೆ ಫುಟ್ ಥೆರಪಿ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಎಂದು ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ, ಅಶೋಕ, ಸುಚೇತ ಹೇಳಿದರು. ಮೊದಲ ದಿನ 80 ಜನರು ಚಿಕಿತ್ಸೆ ಪಡೆದರು.
ಅರ್ಧ ಗಂಟೆಗಳಕಾಲ ಚಿಕಿತ್ಸಾ ಸಲಕರಣೆ ಮೇಲೆ ಎರಡೂ ಕಾಲುಗಳನ್ನಿಟ್ಟು ಕುಳಿತರೆ ಪರಿಣಾಮ ತಿಳಿಯುತ್ತದೆ ಎಂದು ತಿಳಿಸಿದರು. ಡಿ.25 ರವರೆಗೆ ಉಚಿತ ಚಿಕಿತ್ಸಾ ಶಿಬಿರ ಇರುತ್ತದೆ.