More

     ಶಿಶುವಿನಾಳದಲ್ಲಿ ತತ್ವಪದದ ಮೊದಲ ಥೀಮ್ ಪಾರ್ಕ್

    ಹಾವೇರಿ: ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಸಂತ ಶಿಶುನಾಳ ಶರೀಫರ ತತ್ವ ಪದಗಳ ಭಾವಾರ್ಥ ಅರಿಯುವ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಶಿಗ್ಗಾಂವಿ ತಾಲೂಕಿನ ಶಿಶುವಿನಾಳ ಗ್ರಾಮದ ಸಂತ ಶರೀಫ ಶಿವಯೋಗಿ ಮತ್ತು ಗುರು ಗೋವಿಂದ ಭಟ್ಟರ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸುಕ್ಷೇತ್ರ ಶಿಶುವಿನಾಳದ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ಈಗಾಗಲೇ 8 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ ಎಂದರು.

    ಷರೀಫರ ತತ್ವಪದಗಳ ಭಾವಾರ್ಥದ ಮ್ಯೂಸಿಯಂ ಮಾಡುತ್ತಿದ್ದೇವೆ. ಷರೀಫರು ನಡೆದಾಡಿ ಹೋಗಿರುವ ಘಟನೆಗಳನ್ನು ಚಿತ್ರೀಕರಿಸುತ್ತೇವೆ. ಅವರ ಜೀವನ ಮೌಲ್ಯಗಳನ್ನು ಜನಸಾಮಾನ್ಯರೂ ತಿಳಿಯುವಂತಾಗಬೇಕು ಎಂದರು.

    ಷರೀಫರ ವಿಚಾರ ಧರ್ಮದ ಚೌಕಟ್ಟು ಮೀರಿದಂತಹದು. ಇವರು ವಿಸ್ಮಯವಾಗಿರುವ ಕವಿ, ಅವರನ್ನು ಅರ್ಥಮಾಡಿಕೊಂಡವರಿಗೆ ಅವರ ವಿಚಾರಗಳು ಗೊತ್ತಾಗಲಿದೆ. ಷರೀಫರು ಜೀವನದ ಮೌಲ್ಯ, ಮಾನವೀಯ ಸಂಬಂಧದ ಬಗ್ಗೆ ಹೇಳಿದ್ದಾರೆ ಎಂದರು.

    ಖ್ಯಾತ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಮಾತನಾಡಿ, ನಮ್ಮ ಹೊಟ್ಟೆಪಾಡು ಷರೀಫರ ಹಾಡುಗಳಿಂದ ನಡೆದಿದೆ. ಅವರ ಭಕ್ತಿಯ ನೆಲದಲ್ಲಿ ಕಾರ್ಯಕ್ರಮ ನೀಡಬೇಕೆಂಬ ಕನಸು ಬಹಳ ವರ್ಷಗಳಿಂದ ಇತ್ತು. ಸಿಎಂ ಬಸವರಾಜ ಬೊಮ್ಮಾಯಿ ಅವರ ಕೃಪಾಕಟಾಕ್ಷದಿಂದ ಇಲ್ಲಿಗೆ ಬಂದಿದ್ದೇನೆ. ವೈದ್ಯರು ಎರಡು ತಿಂಗಳು ಹಾಡದಂತೆ ಸೂಚಿಸಿದ್ದಾರೆ. ಆದರೆ, ಅಜ್ಜನ ಸನ್ನಿಧಿಯಲ್ಲಿ ಹಾಡುತ್ತಿದ್ದೇನೆ. ಅಜ್ಜನೇ ಕಾಪಾಡುತ್ತಾನೆ ಎಂಬ ನಂಬಿಕೆ ಇದೆ. ‘ಸೋರುತಿಹುದು ಮನೆಯ ಮಾಳಿಗೆ’ ಎಂಬ ಹಾಡನ್ನು 32 ದೇಶಗಳಲ್ಲಿ ಹಾಡಿದ್ದೇನೆ ಎಂದರು.

    ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅಜೀಮಪೀರ್ ಖಾದ್ರಿ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ಶ್ರೀಕಾಂತ ದುಂಡಿಗೌಡರ, ಗ್ರಾಮದ ಮುಖಂಡರು, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts