ಟಾಟಾ ಸುಮೋ, ಮಹಾರಾಷ್ಟ್ರ ಬಸ್​​ ನಡುವೆ ಡಿಕ್ಕಿ: ಒಂದೇ ಗ್ರಾಮದ ಐವರು ದುರ್ಮರಣ

ಕೊಲ್ಹಾಪುರ: ಟಾಟಾ ಸುಮೋ ಮತ್ತು ಮಹಾರಾಷ್ಟ್ರ ಸಾರಿಗೆ ಬಸ್ ಮಧ್ಯ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಗ್ರಾಮದ ಐವರು ಮೃತಪಟ್ಟಿದ್ದಾರೆ.
ರಾಜ್ಯದ ಗಡಿಯ ಕೊಲ್ಹಾಪುರ ಜಿಲ್ಲೆಯ ಗಡಹಿಂಗ್ಲಜ್ ಚಂದಗಡ ರಾಜ್ಯ ಹೆದ್ದಾರಿಯಲ್ಲಿ ಟಾಟಾ ಸುಮೋ ಚಾಲಕ ನಿಯಂತ್ರಣ ತಪ್ಪಿ ಬಸಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಬಸ್ಸಿನಲ್ಲಿದ್ದ ಹಲವರಿಗೆ ಗಂಭೀರ ಗಾಯವಾಗಿದೆ. ಚಂದಗಡದಿಂದ ದ್ವಗ್ರಾಮಕ್ಕೆ ತೆರಳುವಾಗ ನಡೆದ ಘಟನೆ. ಗಡಹಿಂಗ್ಲಜ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.