ನವದೆಹಲಿ: ಕರ್ನಾಟಕದ ಹುಬ್ಬಳ್ಳಿ ಕೇಂದ್ರಿತ ದೇಶದ ಅತಿದೊಡ್ಡ ಲಾಜಿಸ್ಟಿಕ್ಸ್ ಸಂಸ್ಥೆ ವಿಆರ್ಎಲ್ ಲಾಜಿಸ್ಟಿಕ್ಸ್ನಿಂದ 1,300 ವಾಣಿಜ್ಯ ವಾಹನಗಳ ಆರ್ಡರ್ ಅನ್ನು ದೇಶದ ಮುಂಚೂಣಿ ವಾಹನ ಉತ್ಪಾದಕ ಸಂಸ್ಥೆ ಟಾಟಾ ಮೋಟಾರ್ಸ್ ಪಡೆದುಕೊಂಡಿದೆ.
ವಿಆರ್ಎಲ್ ಲಾಜಿಸ್ಟಿಕ್ಸ್ನ ಕಾರ್ಯಾಚರಣೆಗೆ ಅನುಕೂಲವೆನಿಸುವ ಮೀಡಿಯಂ, ಹೆವಿ ವಾಣಿಜ್ಯ ವಾಹನ ಮತ್ತು ಇಂಟರ್ವಿುೕಡಿಯೇಟ್, ಲಘು ವಾಣಿಜ್ಯ ಸ್ತರದ ವಾಹನಗಳನ್ನು ಕಂಪನಿ ಪೂರೈಸಲಿದೆ. ಅತ್ಯುತ್ತಮ ಚಾಲನಾಯೋಗ್ಯ, ಗರಿಷ್ಠ ಇಂಧನ ಕ್ಷಮತೆ, ಕಡಿಮೆ ಒಟ್ಟು ವೆಚ್ಚದ ಮಾಲೀಕತ್ವಗಳ ಆಧಾರದ ಮೇಲೆ ವಾಹನಗಳನ್ನು ಆಯ್ಕೆ ಮಾಡಲಾಗುತ್ತದೆ. ಇದು ವಿಆರ್ಎಲ್ ಲಾಜಿಸ್ಟಿಕ್ಸ್ನ ಫ್ಲೀಟ್ ಕಾರ್ಯಕ್ಷಮತೆಯನ್ನು ಹೆಚ್ಚಿಸಲಿದೆ ಎಂದು ಮುಂಬೈ ಮೂಲದ ವಾಹನ ಉತ್ಪಾದನಾ ಸಂಸ್ಥೆ ಟಾಟಾ ಮೋಟಾರ್ಸ್ ಹೇಳಿದೆ.
ಕಡಿಮೆ ಮಾಲೀಕತ್ವದ ವೆಚ್ಚದಲ್ಲಿ ನಾವು ನಮ್ಮ ವಾಹನಗಳನ್ನು ನೀಡಲು ಪ್ರಯತ್ನಿಸುತ್ತೇವೆ. ನಮ್ಮಲ್ಲಿರುವ ವಿಶಾಲ ಸೇವಾ ನೆಟ್ವರ್ಕ್ ದೇಶದ ಮೂಲೆ ಮೂಲೆಗಳಲ್ಲಿ ಇರುವ ಕಾರಣ ಉದ್ಯಮದಲ್ಲಿನ ಅತ್ಯುತ್ತಮ ಸೇವಾ ಬೆಂಬಲವನ್ನು ದೃಢೀಕರಿಸುವುದು ಸುಲಭವಾಗುತ್ತದೆ.
ವಿಆರ್ಎಲ್ ಲಾಜಿಸ್ಟಿಕ್ಸ್ ಜತೆಗೆ ಫಲಪ್ರದ ಪಾಲುದಾರಿಕೆಯನ್ನು ನಾವು ಎದುರುನೋಡುತ್ತೇವೆ. ಅವರ ತಡೆರಹಿತ ಕಾರ್ಯಾ ಚರಣೆಗಳಿಗೆ ಉತ್ತಮ ಬೆಂಬಲವನ್ನೂ ಒದಗಿಸುತ್ತೇವೆ ಎಂದು ಟಾಟಾ ಮೋಟಾರ್ಸ್ ವಾಣಿಜ್ಯ ವಾಹನ ವ್ಯಾಪಾರ ಘಟಕದ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ರಾಜೇಶ್ ಕೌಲ್ ತಿಳಿಸಿದರು.
ಪವರ್ ಆಫ್ ಸಿಕ್ಸ್: ಡ್ರೖೆವೆಬಿಲಿಟಿ, ಕಾರ್ಯಾಚರಣೆಯ ಒಟ್ಟು ವೆಚ್ಚ, ಅನುಕೂಲತೆ ಮತ್ತು ಸೌಕರ್ಯ ಹಾಗೂ ಸಂಪರ್ಕ ಸಾಧನ ಒದಗಿಸುವ ಪವರ್ ಆಫ್ 6 ಎಂಬ ತತ್ತ್ವದ ಆಧಾರದಲ್ಲಿ ವಾಣಿಜ್ಯ ವಾಹನಗಳ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಮಾಡಲಾಗುತ್ತದೆ. ಸಂಪೂರ್ಣ ಸೇವಾ ಎಂಬ ಸೇವಾ ಸೌಲಭ್ಯವನ್ನೂ ವಾಹನ ಬಳಕೆದಾರರಿಗೆ ಒದಗಿಸಲಾಗುತ್ತಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.
ಹಾವೇರಿ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆ; ಸಿಡಿಲು ಬಡಿದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು