ಬೆಂಗಳೂರು: ತರಕಾರಿ, ಸೊಪ್ಪು, ಹಣ್ಣು, ಮಾಂಸ, ಪಾನೀಯಗಳು ಆರೋಗ್ಯಕ್ಕೆ ತುಂಬಾ ಮುಖ್ಯವಾಗಿದೆ. ನಾವು ಇಂದು ನಿಮಗೆ ಕೆಸುವಿನ ಎಲೆಗಳಿಂದ ಮಾಡಿದ ಆಹಾರ ಸೇವನೆಯಿಂದ ಆರೋಗ್ಯಕ್ಕೆ ಇರುವ ಲಾಭಗಳ ಕುರಿತಾಗಿ ತಿಳಿಸಿ ಕೊಡಲಿದ್ದೇವೆ.
ಕೆಸುವಿನ ಎಲೆಯಲ್ಲಿರುವ ಪೋಷಕಾಂಶ: ಕೆಸುವಿನ ಎಲೆಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಬಿ, ಥೈಯಾಮಿನ್, ರಿಬೋಫ್ಲೇವಿನ್, ಫೋಲೆಟ್, ಮ್ಯಾಂಗನೀಸ್, ತಾಮ್ರ, ಪೊಟಾಷ್ಯಿಯಂ, ಕಬ್ಬಿಣದಂಶ ಇರುತ್ತದೆ. ಇದರಲ್ಲಿ ಸಾಕಷ್ಟು ನಾರಿನಂಶ ಕೂಡ ಇದೆ.
ಕೆಸುವಿನ ಎಲೆಗಳ ಸೇವನೆಯಿಂದ ಆರೋಗ್ಯಕ್ಕೆ ಇರುವ ಲಾಭ:
1) ಮಳೆಗಾಲದಲ್ಲಿ ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗಿರುತ್ತದೆ. ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ.
2) ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಉರಿಯೂತದ ಸಮಸ್ಯೆ ಕಡಿಮೆಯಾಗುವುದು.
3) ಹಲ್ಲು ಹಾಗೂ ಮೂಳೆಗಳನ್ನು ಬಲಪಡಿಸುತ್ತದೆ, ಅಲ್ಲದೆ ಸಂಧಿವಾತದ ಸಮಸ್ಯೆ ತಡೆಗಟ್ಟುವುದು.
4) ವಿಟಮಿನ್ ಎ ಇರುವುದರಿಂದ ಕಣ್ಣಿಗೆ ಹಾಗೂ ತ್ವಚೆ ಒಳ್ಳೆಯದು, ಅಲ್ಲದೆ ತ್ವಚೆ ಮೃದುವಾಗುವುದು. ಅಲ್ಲದೆ ತ್ವಚೆಯ ಹೊಳಪು ಕೂಡ ಹೆಚ್ಚುವುದು.
5) ಮಧುಮೇಹಿಗಳು ಕೆಸುವಿನ ಎಲೆಯ ಗೊಜ್ಜು ಕೂಡ ಮಾಡಿ ಸವಿಯಬಹುದು. ಕೆಸವಿನ ಎಲೆ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿಡುತ್ತದೆ
ಕೆಸುವಿನ ಎಲೆಯಿಂದ ಮಾಡುವ ಪದಾರ್ಥಗಳು: ನೀವು ಕೆಸುವಿನ ಎಲೆಯಿಂದ ಮಾಡಿದ ಅಡುಗೆಗೆ ಹುಣಸೆ ಹಣ್ಣು ಸೇರಿಸಿ ಮಾಡಬೇಕು, ಇಲ್ಲದಿದ್ದರೆ ಬಾಯಿ ತುರಿಸಬಹುದು. ಪತ್ರೊಡೆ, ಕೆಸುವಿನ ಸಾರು, ಕೆಸುವಿನ ಗೊಜ್ಜು ಇವೆಲ್ಲಾ ಮಳೆಗಾಲದ ವಿಶೇಷ ಅಡುಗೆಗಳಾಗಿವೆ.