ಬೈಕ್ ಸವಾರರ ದುರ್ಮರಣ

ತರೀಕೆರೆ: ತಾಲೂಕಿನ ರಾಂಪುರ ಸಮೀಪ ಶುಕ್ರವಾರ ಬೈಕ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಹಿಂಬದಿ ಸವಾರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ತಾಲೂಕಿನ ಯಲುಗೆರೆ ಗ್ರಾಮದ ದೀಪು(22), ಹೇಮಂತ್ (23) ಮೃತಪಟ್ಟವರು. ಶುಕ್ರವಾರ ಮಧ್ಯಾಹ್ನ ಈ ಇಬ್ಬರು ಕಾರ್ಯ ನಿಮಿತ್ತ ಪಟ್ಟಣಕ್ಕೆ ಬೈಕ್​ನಲ್ಲಿ ಬಂದಿದ್ದರು. ಸಂಜೆ 4 ಗಂಟೆಗೆ ಕೆಲಸ ಮುಗಿಸಿಕೊಂಡು ಪಟ್ಟಣದಿಂದ ಯಲುಗೆರೆಗೆ ವಾಪಸ್ ತೆರಳುವಾಗ ರಾಂಪುರ ಸಮೀಪ ಲಕ್ಕವಳ್ಳಿ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ದೀಪು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡಿದ್ದ ಹೇಮಂತ್ ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *