25.7 C
Bangalore
Monday, December 16, 2019

ಅಂಗನವಾಡಿ ಕಾರ್ಯಕರ್ತೆಯರಿಗೆ ತರಾಟೆ

Latest News

ಅವಶ್ಯಕ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ

ವಿಜಯಪುರ: ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯ ಭೂ ಒಡೆತನ ಯೋಜನೆಯಡಿ ಅವಶ್ಯಕವಿರುವ ಅನುದಾನ-ಜಮೀನು ಕುರಿತು ವಾರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲು ಕ್ರಮ...

ಕ್ರೀಡೆ, ಯೋಗಕ್ಕೆ ಆದ್ಯತೆ ನೀಡಿ

ಹುನಗುಂದ: ಮಾನಸಿಕ ನೆಮ್ಮದಿಯೊಂದಿಗೆ ದೇಹಕ್ಕೆ ಹೊಸ ಉಲ್ಲಾಸ ನೀಡುವ ಕ್ರೀಡೆ ಹಾಗೂ ಯೋಗ ಮಾಡಲು ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ವಿಜಯ ಮಹಾಂತೇಶ...

ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ತಮ್ಮ ಪ್ರಜೆಗಳನ್ನು ವಾಪಸ್​ ಕರೆಯಿಸಿಕೊಳ್ಳಲು ಸಿದ್ಧ ಎಂದ ಬಾಂಗ್ಲಾದೇಶ

ಢಾಕಾ: ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರನ್ನು ವಾಪಸ್ ಪಡೆಯಲು ಸಿದ್ದವಿರುವುದಾಗಿ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೆಮೊನ್ ಹೇಳಿದ್ದಾರೆ. ಪೌರತ್ವ ಕಾಯ್ದೆ...

ಪೌರತ್ವ ತಿದ್ದುಪಡಿ ಮಸೂದೆ ತಿರಸ್ಕರಿಸಲು ಒತ್ತಾಯ

ವಿಜಯಪುರ: ಪೌರತ್ವ ತಿದ್ದುಪಡಿ ಮಸೂದೆ-2019 ತಿರಸ್ಕರಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ೆಡರೇಷನ್ (ಎಸ್‌ಎ್ಐ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎ್ಐ) ಕಾರ್ಯಕರ್ತರು...

ಅಲ್ಪಸಂಖ್ಯಾತ ಸಂಸ್ಥೆಗಳ ಅಧಿಕಾರ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಸಿಗಲಿ: ವಿಹಿಂಪ ಆಗ್ರಹ

ನವದೆಹಲಿ: ಸಂವಿಧಾನಕ್ಕೆ ತಿದ್ದುಪಡಿ ತಂದಾದರೂ ಸರಿ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿರುವ ಹಕ್ಕುಗಳನ್ನು ದೇಶದಲ್ಲಿರುವ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ನೀಡಬೇಕು ಎಂದು ವಿಶ್ವ...

ಕೊಳ್ಳೇಗಾಲ: ತಾಲೂಕಿನ ಸಿಲ್ಕಲ್‌ಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಎದುರಿನಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಬುಧವಾರ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ವಂದಿತಾಶರ್ಮ ಹಾಗೂ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ನೇತೃತ್ವದ ತಂಡ ಭೇಟಿ ನೀಡಿ ಆಹಾರ ವಿತರಣೆಯಲ್ಲಿ ಮಕ್ಕಳಿಗೆ ಆಗುತ್ತಿರುವ ಮೋಸವನ್ನು ಪತ್ತೆ ಹಚ್ಚಿತು.

ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಸರ್ಕಾರ ಅಂಗನವಾಡಿ ಮಕ್ಕಳಿಗೆ ನೀಡುವ ಸವಲತ್ತು ದುರ್ಬಳಕೆ ಮತ್ತು ಅವರಿಗೆ ದೊರೆಯದ ಮೂಲ ಸೌಕರ್ಯದ ಕುರಿತು ‘ವಿಜಯವಾಣಿ’ ಇತ್ತೀಚೆಗೆ ವರದಿ ಪ್ರಕಟಿಸಿತ್ತು. ಇದರ ಬೆನ್ನೆಲ್ಲೇ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ತಂಡ ಭೇಟಿ ನೀಡಿತು.

ಅಧಿಕಾರಿಗಳ ತಂಡಕ್ಕೆ ಪುಟ್ಟ ಮಕ್ಕಳಿಂದ ಸ್ವಾಗತ ಕೋರಿಸುವಲ್ಲಿ ಯಶಸ್ವಿಯಾದ ಕೇಂದ್ರದ ಕಾರ್ಯಕರ್ತೆ ಎಲ್.ಗೀತಾ, ಸಹಾಯಕಿ ಯಶೋದಾ ಉಳಿದ ವಿಚಾರದಲ್ಲಿ ತಬ್ಬಿಬ್ಬಾದರು.

ಪರಿಶೀಲನೆ ವೇಳೆ ಕೇಂದ್ರದ ಮಕ್ಕಳು ಬಳಸಲು ಶೌಚಗೃಹದಲ್ಲಿ ನೀರಿನ ವ್ಯವಸ್ಥೆಯಿಲ್ಲದಿರುವುದು ಕಂಡುಬಂತು. ಈ ವಿಚಾರದಲ್ಲಿ ಬೇಸರಗೊಂಡ ವಂದಿತಾಶರ್ಮ, ಕೂಡಲೇ ಕೇಂದ್ರದ ಆವರಣದಲ್ಲಿರುವ ನೀರಿನ ಪೈಪ್‌ಲೈನ್ ಸಂಪರ್ಕವನ್ನು ಶೌಚಗೃಹಕ್ಕೆ ಒದಗಿಸಿ ಸಮರ್ಪಕ ರೀತಿಯಲ್ಲಿ ಮಕ್ಕಳ ಶೌಚಕ್ಕೆ ನೀರು ಕಲ್ಪಿಸಬೇಕು. ಮಕ್ಕಳು ಶೌಚಗೃಹ ಬಳಸುವುದನ್ನು ಕಲಿಸಬೇಕು ಎಂದು ಟಗರಪುರ ಗ್ರಾಪಂ ಕಾರ್ಯದರ್ಶಿ ಶಿವಮೂರ್ತಿಗೆ ಖಡಕ್ ಸೂಚನೆ ನೀಡಿದರು.

ಅಂಗನವಾಡಿ ಕೇಂದ್ರದ ಅಡುಗೆ ಮನೆಯಲ್ಲಿ ಬೇಳೆ ಕಾಳು ಮತ್ತು ತರಕಾರಿ ರಹಿತ ತಿಳಿ ಸಾರು, 22 ಮಕ್ಕಳಿಗೆ ತಲಾ ಅರ್ಧದಂತೆ ನೀಡಲು ತಯಾರಿಸಿದ್ದ 11 ಮೊಟ್ಟೆ ಹಾಗೂ ಬಿಸಿಯಿಲ್ಲದ ಅನ್ನ ಕಂಡು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಮಕ್ಕಳನ್ನು ವಿಚಾರಿಸಿದಾಗ ಮಕ್ಕಳು ವಾರದಲ್ಲಿ 2 ದಿನ ಅರ್ಧ ಮೊಟ್ಟೆ ನೀಡುತ್ತಿರುವುದನ್ನು ಬಾಯಿಬಿಟ್ಟರು. ಈ ಮಧ್ಯೆ ಮಕ್ಕಳಿಗೆ ನೀಡಬೇಕಿದ್ದ ಆಟಿಕೆಗಳನ್ನು ಚೀಲವೊಂದರಲ್ಲಿ ತುಂಬಿ ಅಡುಗೆ ಕೋಣೆಯಲ್ಲಿಟ್ಟಿರುವುದನ್ನು ನೋಡಿ ಕಾರ್ಯಕರ್ತೆರನ್ನು ತೀವ್ರ ತರಾಟೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಅಂಗನವಾಡಿ ಕಾರ್ಯಕರ್ತೆ ಎಲ್.ಗೀತಾ, ಪ್ರತಿ ಮಕ್ಕಳಿಗೆ ತಲಾ 1 ಮೊಟ್ಟೆ ಬೇಯಿಸಿಕೊಡಲು ಸಹಾಯಕಿ ಯಶೋದಾಗೆ 22 ಮೊಟ್ಟೆ ನೀಡಿದ್ದು, ಏನಾಯಿತು ಅಂತ ಗೊತ್ತಿಲ್ಲ. ಇಲಾಖೆಯಿಂದ ಬೇಳೆ ಸರಬರಾಜಾಗಿಲ್ಲ. ಗ್ರಾಮಕ್ಕೆ ತರಕಾರಿ ಮಾರುವವನು ಬಂದಿಲ್ಲ. ಅದಕ್ಕೆ ತಿಳಿ ಸಾಂಬಾರ್ ಮಾಡಲಾಗಿದೆ. ಆಟಿಕೆಗಳು ಹಾಳಾಗದಂತೆ ಚೀಲದಲ್ಲಿ ಎತ್ತಿಡಲಾಗಿದೆ ಎಂದು ಸಮಜಾಯಿಸಿ ನೀಡಿದರು.

ಇದನ್ನು ಒಪ್ಪದ ವಂದಿತಾಶರ್ಮ, ಪುಟ್ಟ ಮಕ್ಕಳಿಗೆ ಸರ್ಕಾರ ಕೊಡುವ ಆಹಾರಗಳನ್ನು ಮೋಸ ಮಾಡುತ್ತಿರುವುದು ಕಂಡುಬಂದಿದ್ದು, ನಿಮ್ಮ ಮೇಲೆ ಕೂಡಲೇ ಕ್ರಮ ಕೈಗೊಳ್ಳದೆ ಬಿಡುವುದಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

ಗರ್ಭಿಣಿ, ಬಾಣಂತಿಯರು ಊಟಕ್ಕೆ ಬರುತ್ತಿಲ್ಲ: ನಮ್ಮಲ್ಲಿ ಐವರು ಗರ್ಭಿಣಿಯರು, 7 ಬಾಣಂತಿಯರು ಇದ್ದು, ಅವರ‌್ಯಾರು ಕೇಂದ್ರಕ್ಕೆ ಬಂದು ಊಟ ಸೇವಿಸುತ್ತಿಲ್ಲ. ಸೊಸೈಟಿ ಅಕ್ಕಿಯ ಅನ್ನದ ಊಟ ಮಾಡಿದರೆ ಕಾಲು ಧೂಳಾಗುತ್ತದೆ ಎನ್ನುತ್ತಾರೆ. ಇಲಾಖೆಗೆ ಈ ಬಗ್ಗೆ ವರದಿ ನೀಡಿದ್ದು, ಪಡಿತರ ಪಡೆಯುತ್ತಿಲ್ಲ ಎಂದು ಕಾರ್ಯಕರ್ತೆಯರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಈ ಕುರಿತು ಪರಿಶೀಲಿಸುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ಸೂಚನೆ ನೀಡಿದರಲ್ಲದೇ, ಅಂಗನವಾಡಿ ಕೇಂದ್ರಕ್ಕೆ ಬಾಟಲಿಯಲ್ಲಿ ಮಕ್ಕಳೇ ಕುಡಿಯಲು ನೀರು ತರುತ್ತಿರುವುದನ್ನು ತಪ್ಪಿಸಲು ಇಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲು ಕ್ರಮವಹಿಸಲು ಹೇಳಿದರು.

ಕೃಷಿ ಇಲಾಖೆ ಆಯುಕ್ತ ರಾಜೇಶ್ ದಿಕ್ಷಿತ್, ಜಂಟಿ ನಿರ್ದೇಶಕಿ ಚಂದ್ರಕಲಾ, ಸಾಂಕೀಕ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರಯ್ಯ, ಉಪ ವಿಭಾಗಾಧಿಕಾರಿ ನಿಖಿತಾ ಎಂ ಚಿನ್ನಸ್ವಾಮಿ, ತಹಸೀಲ್ದಾರ್ ಕೆ.ಕುನಾಲ್ ಹಾಜರಿದ್ದರು.

- Advertisement -

Stay connected

278,757FansLike
589FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...