ಹುಬ್ಬಳ್ಳಿ: ವಿದ್ಯಾರ್ಥಿಗಳು ರಾಷ್ಟ್ರೀಯ ಹಬ್ಬಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಅವುಗಳ ಹಿಂದಿರುವ ಇತಿಹಾಸ, ಪ್ರಾಮುಖ್ಯತೆ, ಉದ್ದೇಶವನ್ನು ಅರಿಯಬೇಕು ಎಂದು ಐ.ಜಿ. ಹಿರೇಗೌಡರ ಕಾಲೇಜಿನ ಅಧ್ಯಕ್ಷ ಶಿವಾನಂದ ಹೆಬಸೂರ ಹೇಳಿದರು.
ಇಲ್ಲಿಯ ಉಣಕಲ್ಲ ತರಳಬಾಳು ಕ್ಯಾಂಪಸ್ ನಲ್ಲಿ ತರಳಬಾಳು ಪೂರ್ವ ಹಾಗೂ ಕಿರಿಯ ಆಂಗ್ಲ ಪ್ರಾಥಮಿಕ ಶಾಲೆ, ಆರ್.ಕೆ. ಕೋಕಾಟೆ ಪ್ರೌಢಶಾಲೆ ಹಾಗೂ ಐ.ಜಿ. ಹಿರೇಗೌಡರ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ 76ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಭಾರತೀಯರು ಸ್ವೀಕರಿಸಿ ಜಾರಿಗೆ ತಂದ ದಿನ ಇದಾಗಿದೆ. ಇದನ್ನು ಹೆಮ್ಮೆಯಿಂದ ಆಚರಿಸಬೇಕು ಎಂದರು.
ಪ್ರಾಥಮಿಕ ಶಾಲೆಯ ಅಧ್ಯಕ್ಷ ಆರ್.ಎಸ್. ಹನ್ನಿ ಅವರು ಧ್ವಜಾರೋಹಣ ನೆರವೇರಿಸಿದರು. ಪ್ರೌಢಶಾಲೆ ಮುಖ್ಯೋಪಾಧ್ಯಾಯ ಶಿವಕುಮಾರಗೌಡ ಬಿ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಮೇಘಾ ಎಂ.ಜೆ., ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ವೀರೇಶ ಪಾಟೀಲ, ಶಾಲೆ, ಕಾಲೇಜಿನ ಸ್ಥಳಿಯ ಸಲಹಾ ಸಮಿತಿ ಸದಸ್ಯರು, ಉಪನ್ಯಾಸಕರು, ಶಿಕ್ಷಕರು ಭಾಗವಹಿಸಿದ್ದರು.
ಪೃಥ್ವಿ ದವಾಸ್ಕರ ನಿರೂಪಿಸಿದರು. ಕುಲ್ಸುಂಬಿ ದಾಸನಕೊಪ್ಪ ವಂದಿಸಿದರು.