ಫೋನ್​ ಕದ್ದಾಲಿಕೆ ಮಹಾರಾಷ್ಟ್ರದ ರಾಜಕೀಯ ಸಂಸ್ಕೃತಿ ಅಲ್ಲ, ಬೇಕಿದ್ದರೆ ಸರ್ಕಾರ ತನಿಖೆ ಮಾಡಿಕೊಳ್ಳಲಿ: ದೇವೇಂದ್ರ ಫಡ್ನವೀಸ್​

blank

ಮುಂಬೈ: ಕರ್ನಾಟಕದಲ್ಲಿ ಎಚ್​.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಫೋನ್​ ಟ್ಯಾಪಿಂಗ್​ ನಡೆದಿದೆ ಎಂದು ಆರೋಪ ಕೇಳಿಬಂದಿತ್ತು.

ಈಗ ಮಹಾರಾಷ್ಟ್ರದಲ್ಲಿ ಫೋನ್​ ಟ್ಯಾಪಿಂಗ್​ ಆರೋಪ ಕೇಳಿಬಂದಿದೆ. ಇಂದು ಬೆಳಗ್ಗೆ ಶಿವಸೇನೆ ಮುಖಂಡ ಸಂಜಯ್​ ರಾವತ್​ ಮಾತನಾಡಿ, ಮಹಾರಾಷ್ಟ್ರದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ದೇವೇಂದ್ರ ಫಡ್ನವೀಸ್​ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನನ್ನ ಫೋನ್​ ಟ್ಯಾಪ್​ ಮಾಡಿತ್ತು. ಈ ಬಗ್ಗೆ ನನಗೆ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ ಎಂದು ಹೇಳಿದ್ದರು.

ಈಗ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರು ಶಿವಸೇನೆಯ ಆರೋಪವನ್ನು ತಳ್ಳಿ ಹಾಕಿದ್ದಾರೆ. ಶಿವಸೇನೆ ಅಥವಾ ಎನ್​ಸಿಪಿ ನಾಯಕರ ಫೋನ್​ಗಳನ್ನು ಕದ್ದಾಲಿಕೆ ಮಾಡಿಲ್ಲ ಎಂದು ಹೇಳಿದ್ದಾರೆ.
ಫೋನ್​ ಕದ್ದಾಲಿಕೆ ಮಹಾರಾಷ್ಟ್ರ ರಾಜಕಾರಣದ ಸಂಸ್ಕೃತಿ ಅಲ್ಲ. ನಮ್ಮ ಸರ್ಕಾರ ಯಾವತ್ತೂ ಅಂತಹ ಕೆಲಸ ಮಾಡಿಲ್ಲ. ನಾವ್ಯಾರಿಗೂ ಆದೇಶ ನೀಡಿ ಫೋನ್​ ಕದ್ದಾಲಿಕೆ ಮಾಡಿಸಿಲ್ಲ. ಈಗ ಆರೋಪ ಮಾಡುತ್ತಿರುವವರು ನಂಬಿಕೆಗೆ ಎಷ್ಟು ಅರ್ಹರು ಎಂಬುದು ಎಲ್ಲರಿಗೂ ಗೊತ್ತು ಎಂದು ಹೇಳಿದ್ದಾರೆ.

ಫೋನ್​ ಕದ್ದಾಲಿಕೆ ಬಗ್ಗೆ ಈಗಿನ ಸರ್ಕಾರ ತನಿಖೆ ಮಾಡುವುದಾದರೆ ಮಾಡಿಕೊಳ್ಳಲಿ. ಈ ರಾಜ್ಯದ ಜನರಿಗೆ ಸತ್ಯ ಏನೆಂಬುದು ಗೊತ್ತು. ರಾಜ್ಯದ ಗೃಹಸಚಿವರು ಶಿವಸೇನೆಯವರೇ ಇದ್ದಾರೆ. ಆದಷ್ಟು ಬೇಗನೇ ತನಿಖೆ ಮಾಡಿ ಸಾರ್ವಜನಿಕರಿಗೆ ವರದಿ ನೀಡಿ ಎಂದು ಅವರಲ್ಲಿ ಮನವಿ ಮಾಡುತ್ತೇನೆ ಎಂದು ಫಡ್ನವೀಸ್​ ಹೇಳಿದರು.

ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶಮುಖ್​ ಅವರೂ ಕೂಡ ಫೋನ್​ ಟ್ಯಾಪಿಂಗ್​ ಆರೋಪ ಮಾಡಿದ್ದಾರೆ. ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​, ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ, ಸಂಸದ ಸಂಜಯ್​ ರಾವತ್​ ಫೋನ್​ಗಳನ್ನು ಕಳೆದ ಬಿಜೆಪಿ ಸರ್ಕಾರ ಟ್ಯಾಪ್​ ಮಾಡಿತ್ತು ಎಂದು ಆರೋಪ ಮಾಡಿದ್ದರು.(ಏಜೆನ್ಸೀಸ್​)

ಸರ್ಕಾರ ನನ್ನ ಫೋನ್ ಟ್ಯಾಪ್ ಮಾಡಿತ್ತು ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ: ಶಿವಸೇನೆ ನಾಯಕ ಸಂಜಯ್ ರಾವತ್

 

Share This Article

ಶುಕ್ರ ಗ್ರಹದ ಕೃಪೆಯಿಂದಾಗಿ 2025ರಲ್ಲಿ ಈ 3 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ! Horoscope 2025

Horoscope 2025 : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ದಿ ಝೀರೋ ಅನ್ನೋ 3-ಡಿ ಮೋಡ್​ ಫುಟ್​ವೇರ್​..2025ಕ್ಕೆ ಬರ್ತಿದೆ ಹೊಸ ಶೂ.. ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ…! | The Zero, Shoes Trends |

ಆನ್​ಲೈನ್​ ಶಾಪಿಂಗ್​ ವೆಬ್​ಸೈಟ್​ ಹಾಗು ಲಕ್ಷೂರಿ ಬ್ರ್ಯಾಂಡ್​ಗಳಲ್ಲಿ ಸಿಗುವಂತಹ ವಿಚಿತ್ರ ಬಟ್ಟೆ, ಶೂ ಹೀಗೆ ಸಾಕಷ್ಟು…

Monday Puja Tips: ಸೋಮವಾರದಂದು ಈ ಕಾರ್ಯಗಳನ್ನು ಮಾಡಿ ನೋಡಿ.. ಶಿವನ ಕೃಪೆಗೆ ಪಾತ್ರರಾಗುತ್ತೀರ…

Monday Puja Tips: ಸೋಮವಾರ ಹಿಂದೂ ಧರ್ಮದಲ್ಲಿ ಶಿವನಿಗೆ ಮೀಸಲಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು…