More

    ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಇಂದು ಮಹತ್ವದ ದಿನ

    ಮೈಸೂರು: ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಇಂದು ಮಹತ್ವದ ದಿನವಾಗಿದ್ದು, ಆರೋಪಿ‌ ಗುರುತು ಪತ್ತೆ ಹಚ್ಚಲು ತನ್ವೀರ್​ ಸೇಠ್​ ಮೈಸೂರಿಗೆ ಬಂದಿದ್ದಾರೆ.

    ಆರೋಪಿ ಫರ್ಹಾನ್ ಪಾಷಾ ಗುರುತು ಹಿಡಿಯಲು ತನ್ವೀರ್ ಆಗಮನವಾಗಿದೆ. ಇಂದು ಮೈಸೂರು ಜೈಲಿನಲ್ಲಿ ಆರೋಪಿ ಗುರುತು ಪತ್ತೆ ಹಚ್ಚಲಿದ್ದಾರೆ. ಶಾಸಕರ ಜತೆಗೆ 6 ಮಂದಿ ಪ್ರತ್ಯಕ್ಷದರ್ಶಿಗಳು ಹಾಗೂ ಇಬ್ಬರು ಪೊಲೀಸರು ಹಾಜರಾಗುವ ಸಾಧ್ಯತೆ ಇದೆ.

    ನವೆಂಬರ್ 18ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಶಾಸಕ ತನ್ವೀರ್ ಸೇಠ್ ಮೇಲೆ ಕೊಲೆ ಯತ್ನ ನಡೆದಿತ್ತು. ಫರ್ಹಾನ್ ಪಾಷಾ ಚಾಕುವಿನಿಂದ ಕತ್ತಿನ ಭಾಗಕ್ಕೆ ಇರಿದಿದ್ದನು. ಈ ವೇಳೆ ಕುತ್ತಿಗೆ ಭಾಗಕ್ಕೆ ಪೆಟ್ಟು ಬಿದ್ದಿತ್ತು. ಶಾಸಕ ತನ್ವೀರ್ ಸೇಠ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

    ಮೈಸೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಶಾಸಕ ತನ್ವೀರ್ ಸೇಠ್ ನಂತರ ವೈದ್ಯರ ಸಲಹೆ ಮೇರೆಗೆ ವಿದೇಶದಲ್ಲಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆ ನಂತರ ದುಬೈನಲ್ಲೇ ಶಾಸಕ ತನ್ವೀರ್ ಸೇಠ್ ವಿಶ್ರಾಂತಿ ಪಡೆಯುತ್ತಿದ್ದರು. ಇದೀಗ ವಿಶ್ರಾಂತಿ ಮುಗಿಸಿ ತನ್ವೀರ್ ಸೇಠ್ ವಿದೇಶದಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts