ಜೀಪು ಹರಿದು ಆಟವಾಡುತ್ತಿದ್ದ 3 ವರ್ಷದ ಮಗು ದುರ್ಮರಣ

ವಿಜಯಪುರ: ಆಟವಾಡುತ್ತಿದ್ದ ಮಗುವು ಜೀಪಿನಡಿಗೆ ಸಿಕ್ಕಿ ಮರಣ ಹೊಂದಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಪಟ್ಟಣದ ಹೊರವಲಯದಲ್ಲಿರುವ ಬಾರಾಕುಟ್ರಿ ತಾಂಡಾದಲ್ಲಿ 3 ವರ್ಷದ ಮಗು ಅಮನಕಾಂತು ರಾಠೋಡ್​ ಆಟವಾಡುತ್ತಿದ್ದ. ಆ ತಾಂಡಾಕ್ಕೆ ಯಾವುದೋ ಕಾರಣಕ್ಕೆ ಜೀಪೊಂದು ಹೋಗಿತ್ತು. ಮಗು ಆಟವಾಡುತ್ತಿದ್ದುದನ್ನು ಗಮನಿಸದ ಚಾಲಕ ಜೀಪು ಚಲಾಯಿಸಿದ್ದಾನೆ. ಆದರೆ, ಮಗುವಿಗೆ ಡಿಕ್ಕಿಯಾಗಿ ಅದು ಸಾವನ್ನಪ್ಪಿದೆ.

ಈ ಘಟನೆ ಬಳಿಕ ಚಾಲಕ ಜೀಪಿನೊಂದಿಗೆ ಪರಾರಿಯಾಗಿದ್ದಾನೆ. ಆದರೆ, ಮಗು ಸತ್ತಿರುವುದು 15 ನಿಮಿಷದ ನಂತರ ತಿಳಿದು ಬಂದಿದೆ. ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *