Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಬಾಯಿಯಿಂದ ಬೆಂಕಿ ಹೊತ್ತಿಸುವ ಸಾಹಸ ಮಾಡಿ ಪ್ರಾಣ ಕಳೆದುಕೊಂಡ ಬಾಲಕ!

Saturday, 22.09.2018, 3:53 PM       No Comments

ಕಾಂಚಿಪರಂ: ಬಾಯಿಯಿಂದ ಬೆಂಕಿ ಹೊತ್ತಿಸುವ ವಿದ್ಯೆ ಕಲಿಯಲು ಹೋದ 15 ವರ್ಷದ ಯುವಕ ಅದೇ ಅಗ್ನಿಯ ಕೆನ್ನಾಲಿಗೆಗೆ ಬಲಿಯಾಗಿರುವ ಘಟನೆ ತಮಿಳುನಾಡಿನ ಕಾಂಚಿಪುರಂನಲ್ಲಿ ನಡೆದಿದೆ.

ಅಗ್ನಿ ಅನಾಹುತಕ್ಕೊಳಗಾದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಕಳೆದುಕೊಂಡಿದ್ದಾನೆ.

ಕಾಂಚಿಪುರಂನ ಉರಪ್ಪಕ್ಕಂನ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ ಮೃತ ಬಾಲಕ ಸಾಹಸ ಮನೋಭಾವವುಳ್ಳವನಾಗಿದ್ದ. ಆತನಿಗೆ ಬಾಯಿಯಿಂದ ಬೆಂಕಿ ಹೊತ್ತಿಸುವ ತಂತ್ರ ಕಲಿಯುವ ಇಂಗಿತವಿತ್ತು. ಶುಕ್ರವಾರ ಮೊಹರಂಗಾಗಿ ಶಾಲೆ ರಜೆ ಇದ್ದಿದರಿಂದ ಸ್ವತಃ ತಾನೇ ಮನೆಯ ತಾರಸಿಯಲ್ಲಿ ಈ ತಂತ್ರ ಕಲಿಯುವ ಪ್ರಯತ್ನ ಮಾಡಿದ್ದಾನೆ. ಬೆಂಕಿ ಹಚ್ಚಿರುವ ಕಡ್ಡಿಗೆ ಬಾಯಿಯ ಮುಖಾಂತರ ಸೀಮೆಎಣ್ಣೆ ಊದುವಾಗ, ಸೀಮೆಎಣ್ಣೆ ಆತನ ಮೈಮೇಲೆ ಚೆಲ್ಲಿದೆ ಎಂದು ಘಟನೆಯ ಬಗ್ಗೆ ಗುಡುವಂಚೆರಿ ಪೊಲೀಸ್​ ಠಾಣೆಯ ಇಸ್​ಸ್ಪೆಕ್ಟರ್​ ಶರವಣನ್​ ವಿವರಿಸಿದ್ದಾರೆ.

ಬಾಲಕ ಕಿರುಚಲು ಆರಂಭಿಸಿದ ತಕ್ಷಣ ಆತನ ತಂದೆ ಮತ್ತು ನೆರೆಮನೆಯವರು ತಾರಸಿಗೆ ಓಡಿ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆತ ತೀವ್ರ ಸುಟ್ಟ ಗಾಯಗಳಿಗೆ ತುತ್ತಾಗಿದ್ದ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದರು.

ಪ್ರಕರಣ ನಡೆದ ಬೆನ್ನಲ್ಲೇ ಪೊಲೀಸರು ಯುವಕರಿಗೆ ಇಂಥ ಸಾಹಸ ಮಾಡದಂತೆ ಎಚ್ಚರಿಕೆ ನೀಡುತ್ತಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top