ಚೆನ್ನೈ: ದಿನದಿಂದ ದಿನಕ್ಕೆ ಹಲವಾರು ರಾಜ್ಯಗಳಲ್ಲಿ ಕರೊನಾ ವೈರಸ್ ಪರಿಸ್ಥಿತಿ ತೀರಾ ಗಂಭೀರವಾಗುತ್ತಲೇ ಸಾಗಿದೆ. ತಮಿಳುನಾಡಿನಲ್ಲಿ ನಿನ್ನೆಯಿಂದ ಇಲ್ಲಿಯವರೆಗೆ ಒಂದೇ ದಿನದಲ್ಲಿ 106 ಹೊಸ ಸೋಂಕು ಪ್ರಕರಣ ದಾಖಲಾಗಿದ್ದು, ಇಲ್ಲಿಯವರೆಗೆ 1075 ಜನರಿಗೆ ಸೋಂಕು ತಗುಲಿರುವುದು ತಿಳಿದುಬಂದಿದೆ.
ಈ ಸೋಂಕಿತರಲ್ಲಿ 900ಕ್ಕೂ ಅಧಿಕ ಮಂದಿ ನವದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ತಬ್ಲಿಘಿಗಳೇ ಇರುವುದಾಗಿ ಸರ್ಕಾರ ಹೇಳಿದೆ.
ಆತಂಕದ ಸಂಗತಿ ಎಂದರೆ ಸೋಂಕಿತರ ಪೈಕಿ ಎಂಟು ವೈದ್ಯರು ಮತ್ತು ಐವರು ನರ್ಸ್‌ಗಳು. ಇವರನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ಪತ್ತೆಯಾಗಿದೆ. ಈಗಾಗಲೇ ನಮ್ಮಲ್ಲಿ 24 ಸಾವಿರ ಆರೋಗ್ಯ ಪರೀಕ್ಷಾ ಕಿಟ್‌ಗಳು ಇದ್ದೂ ಇನ್ನೂ 90 ಸಾವಿರ ಕಿಟ್‌ಗಳ ಅವಶ್ಯಕತೆ ಇದೆ. ಅದನ್ನು ಶೀಘ್ರದಲ್ಲಿ ಆಸ್ಪತ್ರೆಗಳಿಗೆ ವಿತರಿಸಲಾಗುವುದು ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ಬೀಲಾ ರಾಜೇಶ್ ಹೇಳಿದ್ದಾರೆ.
ಈಗಾಗಲೇ ಒಂಬತ್ತು ಮಂದಿ ಸೋಂಕಿನಿಂದ ತಮಿಳುನಾಡಿನಲ್ಲಿ ಪ್ರಾಣ ಕಳೆದುಕೊಂಡಿದ್ದು, ಶೇ 50ರಷ್ಟು ಮಂದಿ ಚೇತರಿಸಿಕೊಂಡಿದ್ದಾರೆ ಎಂದು ರಾಜೇಶ್ ವಿವರಿಸಿದ್ದಾರೆ.
ಮಹಾರಾಷ್ಟ್ರ 1,895 ಸೋಂಕಿತರನ್ನು ಹೊಂದಿ ನಂ.1 ಸ್ಥಾನದಲ್ಲಿದ್ದರೆ, ದೆಹಲಿಯಲ್ಲಿ 1,023 ಸೋಂಕಿತರನ್ನು ಗುರುತಿಸಲಾಗಿದೆ. ಇದೀಗ ತಮಿಳುನಾಡು 3ನೇ ಸ್ಥಾನದಲ್ಲಿದೆ. (ಏಜೆನ್ಸೀಸ್)
ಕರೊನಾ ಸೋಂಕಿತರ ಪೈಕಿ ಶೇ.80 ಜನರಲ್ಲಿ ಆರಂಭಿಕ ಲಕ್ಷಣಗಳು: ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆ
ಕರೊನಾದಿಂದ ಚೇತರಿಸಿಕೊಂಡ ಲಂಡನ್ ಪ್ರಧಾನಿ: ಆಸ್ಪತ್ರೆಯಿಂದ ಡಿಸ್‌ಚಾರ್ಜ್