Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ದ್ರಾವಿಡ ಚಳವಳಿಯ ಖನಿ, ಡಿಎಂಕೆ ವರಿಷ್ಠ ಕರುಣಾನಿಧಿ

Tuesday, 07.08.2018, 7:12 PM       No Comments

ಚೆನ್ನೈ: ಡಿಎಂಕೆ ವರಿಷ್ಠರಾಗಿದ್ದ ಬಹುಮುಖ ವ್ಯಕ್ತಿತ್ವದ ಎಂ.ಕರುಣಾನಿಧಿ ರಾಜಕೀಯ, ಸಿನಿಮಾ ಮತ್ತು ದ್ರಾವಿಡ ಹೋರಾಟಗಳಲ್ಲಿ ವಿಶಿಷ್ಟ ಛಾಪು ಮೂಡಿಸಿದವರು. ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಹೊಸ ಇತಿಹಾಸವನ್ನು ಬರೆದಿದ್ದಾರೆ.

”ಕಲೈನರ್” ಎಂದೇ ಖ್ಯಾತರಾದ ಎಂ. ಕರುಣಾನಿಧಿ ಅವರು 1924ರ ಜೂನ್ 3ರಲ್ಲಿ ಜನಿಸಿದರು. ಹೋರಾಟ ಮತ್ತು ರಾಜಕೀಯದಲ್ಲಿ ಚಿಕ್ಕಂದಿನಿಂದಲೇ ಆಸಕ್ತಿ ಹೊಂದಿದ್ದ ಕರುಣಾನಿಧಿ, 14ನೇ ವಯಸ್ಸಿನಲ್ಲೇ ರಾಜಕೀಯ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು. ಆ ಹೊತ್ತಿನ ತಮಿಳುನಾಡಿನ ಪ್ರಭಾವಿ ನಾಯಕ, ಜಸ್ಟಿಸ್​ ಪಾರ್ಟಿಯ ನಾಯಕ ಅಳಗಿರಿ ಸ್ವಾಮಿ ಅವರ ವಿಚಾರಧಾರೆಗಳಿಂದ ಪ್ರೇರಿತರಾಗಿದ್ದರು.

ಹೀಗಿದ್ದ ಕರುಣಾನಿಧಿ ಅವರು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದು ಮಾತ್ರ ಚಿತ್ರರಂಗದ ಮೂಲಕ. ಚಿತ್ರ ಸಾಹಿತ್ಯ, ಚಿತ್ರಕತೆ ರಚನೆಯಲ್ಲಿ ಅತ್ಯಂತ ಸೂಕ್ಷ್ಮಮತಿಯಾಗಿದ್ದ ಕರುಣಾನಿಧಿ ‘ರಾಜಕುಮಾರಿ’ ಎಂಬ ಚಿತ್ರಕ್ಕೆ ಮೊಟ್ಟ ಮೊದಲ ಬಾರಿಗೆ ಚಿತ್ರಕಥೆ ಬರೆದಿದ್ದರು. ಆ ಚಿತ್ರ ಅವರನ್ನು ಸಿನಿಮಾ ರಂಗದಲ್ಲಿ ಮೇರು ಹಂತಕ್ಕೆ ಕೊಂಡೊಯ್ಯಿತು. ಆ ಮೂಲಕವೇ ಅವರು ಕಲೈನರ್​ ಎಂಬ ಪಟ್ಟವನ್ನೂ ದಕ್ಕಿಸಿಕೊಂಡವರು. ಸಿನಿಮಾ ಕ್ಷೇತ್ರ ಅವರ ಸೇವೆಯನ್ನು ಹಂಬಲಿಸುತ್ತಿರುವಾಗಲೇ ಅವರು ರಾಜಕೀಯಕ್ಕೆ ಧುಮುಕಿದ್ದರು. ಹೋರಾಟ ಮತ್ತು ರಾಜಕೀಯದಲ್ಲಿನ ಅಪಾರ ಆಸಕ್ತಿ ಅವರನ್ನು ಚಿತ್ರರಂಗದಲ್ಲಿ ಹೆಚ್ಚು ದಿನ ಇರಗೊಡಲಿಲ್ಲ.

ಹೋರಾಟದಲ್ಲೂ ಭಾಗಿ

ಸಿನಿಮಾ ಮತ್ತು ರಾಜಕೀಯ ರಂಗಕ್ಕೆ ಬರುವುದಕ್ಕೂ ಮೊದಲು ಹೋರಾಟಗಳಲ್ಲೇ ಹೆಚ್ಚು ಗುರುತಿಸಿಕೊಂಡಿದ್ದ ಕರುಣಾನಿಧಿ, ಯುವಕರ ಸಂಘ ಕಟ್ಟಿದ್ದರು. ಸಂಘದ ಸದಸ್ಯರಿಗಾಗಿ ‘ಮನಾವರ್​ ನೇಸನ್​’ ಎಂಬ ಪ್ರಕಟಣೆಯನ್ನು ಹೊರತರುತ್ತಿದ್ದರು. ಅಲ್ಲದೆ, ತಮಿಳ್​ ಮನಾವರ್​ ಮಂದರಮ್​ ಎಂಬ ಸಂಘಟನೆಯನ್ನು ಸ್ಥಾಪಿಸುವ ಮೂಲಕ ದ್ರಾವಿಡ ಚಳವಳಿಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.

ಹೋರಾಟಗಳ ಮೂಲಕವೇ ರಾಜಕೀಯದ ಮುನ್ನೆಲೆಗೆ ಬಂದಿದ್ದ ಅವರು, ಐವತ್ತರ ದಶಕದ ಹೊತ್ತಿಗೆ ಡಿಎಂಕೆ ಸೇರಿದ್ದರು. 1957ರಲ್ಲಿ ತಿರುಚನಾಪಳ್ಳಿಯ ಲಿತಲೈ ವಿಧಾನಸಭೆ ಮೂಲಕ ಮೊಟ್ಟ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 1967ರಲ್ಲಿ ತಮಿಳುನಾಡು ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾದರು. ಇದಾದ ಎರಡೇ ವರ್ಷದಲ್ಲಿ ದ್ರಾವಿಡ ಹೋರಾಟಗಾರ, ಡಿಎಂಕೆಯ ಪ್ರಮುಖ, ಅಂದಿನ ಮುಖ್ಯಮಂತ್ರಿ ಅಣ್ಣಾದೊರೈ ನಿಧನರಾದರು. ಅಂದು ಪಕ್ಷ ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದು ಕರುಣಾನಿಧಿಯವರನ್ನು.

50 ವರ್ಷ ಡಿಎಂಕೆ ಅಧ್ಯಕ್ಷ

ಡಿಎಂಕೆಯಲ್ಲಿ ಅಲ್ಲಿಂದ ಆರಂಭವಾದ ಕರುಣಾನಿಧಿ ಅವರ ಶಕೆ ಸತತ ಐವತ್ತು ವರ್ಷಗಳ ವರೆಗೆ ಪ್ರಶ್ನಾತೀತವಾಗಿ ಮುಂದುವರಿಯಿತು. ಇಂದು ಇಹಲೋಕ ತ್ಯಜಿಸಿರುವ ಕರುಣಾನಿಧಿ ಡಿಎಂಕೆ ಪಕ್ಷಕ್ಕೆ ಐವತ್ತು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು ಎಂದರೆ ಅವರ ರಾಜಕೀಯ ಇಚ್ಛಾಶಕ್ತಿ ಎಂಥದ್ದು ಎಂಬುದನ್ನು ಯಾರು ಬೇಕಾದರೂ ಅರಿಯಬಹುದು.

ದ್ರಾವಿಡ ಅಸ್ಮಿತೆ ಮತ್ತು ದ್ರಾವಿಡ ಚಳವಳಿಗಳು ತಮಿಳುನಾಡಿನಲ್ಲಿ ಅತ್ಯಂತ ಪ್ರಖರ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಅಣ್ಣಾದೊರೈ, ಎಂ.ಜಿ. ರಾಮಚಂದ್ರನ್​ ಮತ್ತು ಕರುಣಾನಿಧಿ ಅವರನ್ನು ದ್ರಾವಿಡ ದ್ರುವತಾರೆಗಳು ಎಂದು ಕರೆಯುವುದುಂಟು. ದ್ರಾವಿಡ ಹೋರಾಟ ಮತ್ತು ಅಸ್ಮಿತೆಯ ಪ್ರತಿಪಾದನೆಯಲ್ಲಿ ಈ ಮೂವರೂ ನಾಯಕರಿಗಿದ್ದ ಬದ್ಧತೆ ಅವರಿಗೆ ಅಂಥ ಪಟ್ಟವನ್ನು ದಕ್ಕಿಸಿಕೊಟ್ಟಿತ್ತು. ಅದರೆ, ಕರುಣಾನಿಧಿ ಅವರ ನಿಧನದಿಂದಾಗಿ ದ್ರಾವಿಡ ಚಳವಳಿ ಅತ್ಯಂತ ಬದ್ಧತೆಯ, ತೂಕದ ನಾಯಕರನ್ನು ಕಳೆದುಕೊಂಡಿರುವುದು ಸುಳ್ಳಲ್ಲ.

ಐದು ಬಾರಿ ಮುಖ್ಯಮಂತ್ರಿ

DMKಯ ಸ್ಥಾಪಕರಾದ C.N. ಅಣ್ಣಾದೊರೈ 1969ರಲ್ಲಿ ತೀರಿಹೋದ ನಂತರ ಇವರು ಅದರ ಮುಖಂಡತ್ವ ವಹಿಸಿಕೊಂಡರು. ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ. (1969-71, 1971-76, 1989-91, 1996-2001 ಮತ್ತು 2006-ಇಂದಿನವರೆಗೆ). 60 ವರ್ಷಗಳ ದೀರ್ಘಕಾಲದ ರಾಜಕೀಯ ವೃತ್ತಿಜೀವನದಲ್ಲಿ ಅವರು ಸ್ಪರ್ಧಿಸಿದ ಪ್ರತಿಯೊಂದು ಚುನಾವಣೆಯಲ್ಲಿ ತಮ್ಮ ಸ್ಥಾನದಲ್ಲಿ ಜಯಿಸುವ ಮ‌ೂಲಕ ದಾಖಲೆ ನಿರ್ಮಿಸಿದ್ದಾರೆ.

2004ರ ಲೋಕಸಭೆ ಚುನಾವಣೆಯಲ್ಲಿ ಅವರು ತಮಿಳುನಾಡು ಮತ್ತು ಪುದುಚೇರಿಯಲ್ಲಿ ಎಲ್ಲಾ 40 ಲೋಕಸಭೆ ಸ್ಥಾನಗಳನ್ನು ಗೆಲ್ಲಲು DMK-ನೇತೃತ್ವದ DPA (UPA ಮತ್ತು ಎಡ ಪಕ್ಷಗಳು) ಮುಂದಾಳತ್ವ ವಹಿಸಿದರು. ನಂತರದ 2009ರ ಲೋಕಸಭೆ ಚುನಾವಣೆಯಲ್ಲಿ DMKಯ ಸ್ಥಾನಗಳನ್ನು 16 ರಿಂದ 18ಕ್ಕೆ ಹೆಚ್ಚಿಸಿಕೊಳ್ಳಲು ಸಮರ್ಥರಾದರು. ತಮಿಳುನಾಡು ಮತ್ತು ಪುದುಚೇರಿಯಲ್ಲಿ UPAಯ ನೇತೃತ್ವ ವಹಿಸಿಕೊಂಡು, ಗಮನಾರ್ಹವಾಗಿ ಸಣ್ಣ ಸಮ್ಮಿಶ್ರ ಕೂಟವಾಗಿದ್ದರೂ 28 ಸ್ಥಾನಗಳನ್ನು ಜಯಿಸಿದರು.

ಮೂವರು ಪತ್ನಿಯರು

ಅವರು ಮ‌ೂರು ವಿವಾಹವಾಗಿದ್ದಾರೆ. ಪದ್ಮಾವತಿ, ದಯಾಲು ಅಮ್ಮಾಳ್ ಮತ್ತು ರಾಜದಿಯಮ್ಮಾಳ್ ಪತ್ನಿಯರು. ಅವರಿಗೆ M.K ಮುತ್ತು, M.K. ಅಳಗಿರಿ, M.K. ಸ್ಟಾಲಿನ್, M.K ತಮಿಳರಸು ಎಂಬ ನಾಲ್ವರು ಪುತ್ರರಿದ್ದಾರೆ ಹಾಗೂ ಸೆಲ್ವಿ ಮತ್ತು ಕನ್ನಿಮೊಳಿ ಎಂಬ ಇಬ್ಬರು ಪುತ್ರಿಯರಿದ್ದಾರೆ.

 

ಇಬ್ಬರು ಹೆಣ್ಣುಮಕ್ಕಳಾದ ಸೆಲ್ವಿ ಮತ್ತು ಕನ್ನಿಮೊಳಿ, ರಾಜಕಾರಣದಲ್ಲಿ ಸಕ್ರಿಯವಾಗಿದ್ದಾರೆ ಅವರಲ್ಲಿ ಕನ್ನಿಮೊಳಿ ಅಧಿಕಾರ ಸ್ಥಾನವನ್ನು ಹೊಂದಿದ್ದಾರೆ. ಪದ್ಮಾವತಿ ಮುಂಚೆಯೇ ಅಕಾಲಿಕ ಮರಣವಪ್ಪಿದ್ದು, ಹಿರಿಯ ಮಗ M.K. ಮುತ್ತುಗೆ ಜನ್ಮ ನೀಡಿದ್ದರು. ಅಳಗಿರಿ, ಸ್ಟಾಲಿನ್, ಸೆಲ್ವಿ ಮತ್ತು ತಮಿಳರಸು ದಯಾಲುವಮ್ಮಲ್ ಅವರಿಗೆ ಜನಿಸಿದವರಾಗಿದ್ದು, ಕನ್ನಿಮೊಳಿ ಮ‌ೂರನೇ ಹೆಂಡತಿ ರಾಜದಿಯಮ್ಮಲ್‌ ಅವರಿಂದ ಜನಿಸಿದ ಏಕೈಕ ಪುತ್ರಿ.

ಕರುಣಾನಿಧಿ ಅವರು ಬದುಕು ಸಾಧನೆ ಕುರಿತ ಚಿತ್ರಾವಳಿ 

ಇದನ್ನೂ ಓದಿ: 

 

Leave a Reply

Your email address will not be published. Required fields are marked *

Back To Top