ಹೇರಳ ಪೋಷಕಾಂಶವುಳ್ಳ ಹುಣಸೆ ಹಣ್ಣು ಉತ್ತಮ ಆರೋಗ್ಯಕ್ಕೆ ಪೂರಕ

Tamarind

ಹೇರಳ ಪೋಷಕಾಂಶವುಳ್ಳ ಹುಣಸೆ ಹಣ್ಣು ಉತ್ತಮ ಆರೋಗ್ಯಕ್ಕೆ ಪೂರಕಹೆಸರು ಹೇಳಿದ ತಕ್ಷಣ ಬಾಯಲ್ಲಿ ನೀರೂರಿಸುವ ಹುಣಸೆ ಹಣ್ಣಿನ ಬಗ್ಗೆ ಇಂದು ತಿಳಿದುಕೊಳ್ಳೋಣ. ಉಷ್ಣಗುಣವನ್ನು ಹೊಂದಿರುವ ಹುಣಸೆಹಣ್ಣು ಅದರ ಈ ಗುಣದಿಂದಾಗಿ ಕಫ ಮತ್ತು ವಾತ ದೋಷಗಳನ್ನು ನಿಯಂತ್ರಿಸುತ್ತದೆ. ಅಲ್ಪ ಪ್ರಮಾಣದಲ್ಲಿ ಅಡುಗೆಯಲ್ಲಿ ಇದನ್ನು ನಿತ್ಯವೂ ಬಳಸಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಚಳಿಗಾಲ ಮತ್ತು ಮಳೆಗಾಲದಲ್ಲಿ ಇದರ ಬಳಕೆ ಹೆಚ್ಚು ಉಪಯುಕ್ತ. ಏಕೆಂದರೆ ಮಳೆಗಾಲದಲ್ಲಿ ವಾತ ದೋಷವು ಹೆಚ್ಚಾಗುತ್ತದೆ ಮತ್ತು ಹುಣಸೆಹಣ್ಣು ಹೆಚ್ಚಾದ ವಾತ ದೋಷವನ್ನು ನಿಯಂತ್ರಿಸುತ್ತದೆ. ಮಳೆಗಾಲದಲ್ಲಿ ಜೀರ್ಣಶಕ್ತಿ ಕಡಿಮೆಯಾಗುತ್ತದೆ ಮತ್ತು ಹುಣಸೆಹಣ್ಣು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಶರತ್ಕಾಲ ಮತ್ತು ಬೇಸಿಗೆಯಲ್ಲಿ ಇದನ್ನು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು; ಏಕೆಂದರೆ ಇದು ಪಿತ್ತದೋಷವನ್ನು ಹೆಚ್ಚಿಸುತ್ತದೆ. ಪಿತ್ತದ ಕಾರಣದಿಂದ ಉಂಟಾದ ಮೈಗ್ರೇನ್, ಅಸಿಡಿಟಿ, ಅಲ್ಸರ್​ನಂತಹ ತೊಂದರೆಗಳಲ್ಲಿ ಇದನ್ನು ಬಳಸದೇ ಇರುವುದು ಹೆಚ್ಚು ಒಳ್ಳೆಯದು.

ಜೀರ್ಣಕ್ರಿಯೆಗೆ ಸಹಕಾರಿ: ಒಂದು ಚಮಚದಷ್ಟು ಹುಣಸೆ ಹಣ್ಣನ್ನು ಒಂದು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕಿವುಚಬೇಕು. ನಂತರ ಇದನ್ನು ಸೋಸಿ ಸಿಕ್ಕ ನೀರನ್ನು ತರಕಾರಿಗಳು ಮತ್ತು ಹಣ್ಣುಗಳನ್ನು ತೊಳೆಯಲು ಬಳಸಬೇಕು. ಹುಣಸೆ ಹಣ್ಣಿನಲ್ಲಿರುವ ಟಾರ್ಟಾರಿಕ್ ಆಸಿಡ್ ಹಣ್ಣುಗಳು ಮತ್ತು ತರಕಾರಿಗಳ ಮೇಲೆ ಇರುವ ರಾಸಾಯನಿಕಗಳನ್ನು ತಕ್ಕಮಟ್ಟಿಗೆ ತೆಗೆಯಲು ಸಹಾಯ ಮಾಡುತ್ತದೆ. ಮಲೆನಾಡು ಮತ್ತು ಕರಾವಳಿಯ ಭಾಗಗಳಲ್ಲಿ ಮಳೆಗಾಲದಲ್ಲಿ ಮತ್ತು ಅತಿಯಾದ ನೆಗಡಿ ಅಥವಾ ಜ್ವರ ಇದ್ದಾಗ ನೀರಿಗೆ ಹುಣಸೆ ಹಣ್ಣನ್ನು ಸೇರಿಸಿ ಅದಕ್ಕೆ ಸ್ವಲ್ಪ ಉಪ್ಪು, ಬೆಲ್ಲ, ಜೀರಿಗೆ ಮತ್ತು ಕಾಳುಮೆಣಸು ಹಾಕಿ ಕುದಿಸಿದ ನೀರನ್ನು ಕುಡಿಯುತ್ತಾರೆ. ಇದಕ್ಕೆ ಖಟ್ನೆ ಎಂದು ಕರೆಯುತ್ತಾರೆ. ಇದನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗಿ ನೆಗಡಿ, ತಲೆಭಾರದಂತಹ ತೊಂದರೆಗಳು ಕಡಿಮೆಯಾಗಲು ಸಹಾಯವಾಗುತ್ತದೆ.

ಹೃದಯಕ್ಕೆ ಹತ್ತಿರ: ಹುಣಸೆಹಣ್ಣಿಗೆ ನಮ್ಮ ಮೂತ್ರಕೋಶವನ್ನು ಶುದ್ಧೀಕರಿಸುವ ಗುಣವಿದೆ ಎಂದು ಆಯುರ್ವೆದ ಗ್ರಂಥಗಳು ಹೇಳುತ್ತವೆ. ರುಚಿ ಹುಳಿಯಾಗಿರುವ ಬಹುತೇಕ ಎಲ್ಲಾ ದ್ರವ್ಯಗಳು ಹೃದಯಕ್ಕೆ ಶಕ್ತಿಯನ್ನು ಕೊಡುತ್ತವೆ ಎಂದು ಆಯುರ್ವೆದ ಹೇಳುತ್ತದೆ. ಹಾಗೆಯೇ ಹುಣಸೆಹಣ್ಣು ಕೂಡ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಒಂದು ವರ್ಷ ಹಳೆಯ ಹುಣಸೆಹಣ್ಣು ಅಷ್ಟಾಗಿ ಪಿತ್ತವನ್ನು ಹೆಚ್ಚಿಸುವುದಿಲ್ಲ ಎಂದು ಕೈಯದೇವ ನಿಘಂಟು ಹೇಳುತ್ತದೆ. ಚೆನ್ನಾಗಿ ಬೆಳೆದಿರುವ ಹುಣಸೆಹಣ್ಣು ಮಲಬದ್ಧತೆಯನ್ನು ಅನುಭವಿಸುತ್ತಿರುವವರಿಗೆ ಅನುಕೂಲಕರ. ಅಂಥವರು ಸ್ವಲ್ಪ ನೀರಿಗೆ ಚಿಕ್ಕ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣನ್ನು ಹಾಕಿ ಅದಕ್ಕೆ ಜೋನಿಬೆಲ್ಲ ಮತ್ತು ಸೈಂಧವ ಲವಣವನ್ನು ಹಾಕಿ ರಾತ್ರಿ ಊಟದ ಜೊತೆಗೆ ಸೇವಿಸಬೇಕು. ಇದರಿಂದ ಮಲಬದ್ಧತೆಯಲ್ಲಿ ಅನುಕೂಲವಾಗುತ್ತದೆ. ಹೆಚ್ಚಾದರೆ ಇದು ಭೇದಿಗೆ ಕಾರಣವಾಗಬಹುದು. ಹುಣಸೆ ಹಣ್ಣನ್ನು ಬಿಸಿ ಮಾಡಿ ಬಾವಿನ ಮೇಲೆ ಹಚ್ಚಿದರೆ ಬಾವು, ಉರಿಯೂತ ಮತ್ತು ನೋವು ಕಡಿಮೆಯಾಗಲು ಸಹಾಯವಾಗುತ್ತದೆ.

ಬ್ಯಾಕ್ಟೀರಿಯಾ ನಿವಾರಕ ಗುಣ: ಕೆಲವು ಸಂಶೋಧನೆಗಳ ಪ್ರಕಾರ ಹುಣಸೆಹಣ್ಣು ಹಾನಿಕಾರಕವಾದ ಸೂಕ್ಷ್ಮ ಜೀವಿಗಳು ಅಥವಾ ಬ್ಯಾಕ್ಟೀರಿಯಾಗಳನ್ನು ನಿವಾರಿಸುವ ಗುಣವನ್ನುಹೊಂದಿದೆ. ಇನ್ನು ಕೆಲವು ಸಂಶೋಧನೆಗಳ ಪ್ರಕಾರ ಇದರ ನಿಯಮಿತ ಸೇವನೆಯಿಂದ ಹೃದ್ರೋಗ, ಕ್ಯಾನ್ಸರ್ ಮತ್ತು ಡಯಾಬಿಟಿಸ್​ನಂತಹ ತೊಂದರೆಗಳ ವಿರುದ್ಧ ರಕ್ಷಣೆಯನ್ನು ಕೊಡುತ್ತದೆ. ಪೋಷಕಾಂಶಗಳಲ್ಲಿ ಅತ್ಯಂತ ಶ್ರೀಮಂತವಾಗಿರುವ ಇದರಲ್ಲಿ ಹೇರಳ ಪ್ರಮಾಣದಲ್ಲಿ ಮ್ಯಾಗ್ನಿಸಿಯಂ, ಪೊಟ್ಯಾಸಿಯಂ, ಕಬ್ಬಿಣ, ಕ್ಯಾಲ್ಸಿಯಂ, ಪಾಸ್ಪರಸ್, ತಾಮ್ರ, ಬಿ ವಿಟಮಿನ್ ಇವೆ. ಸ್ವಲ್ಪ ಪ್ರಮಾಣದಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್​ಬಿ 6, ವಿಟಮಿನ್ ಬಿ5 ಮತ್ತು ಸೆಲೇನಿಯಮ್ ಇವೆ.

ಇರೋದು 4 ಜನ, 4 ಬಲ್ಬ್​, 4 ಫ್ಯಾನ್​… 20 ಲಕ್ಷ ರೂ. ಕರೆಂಟ್ ಬಿಲ್​ ಪಡೆದ ಕುಟುಂಬ ಕಂಗಾಲು

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…