ಇದುವರೆಗೂ ಕಿಸ್ಸಿಂಗ್​ ದೃಶ್ಯಗಳಲ್ಲಿ ನಟಿಸದ ಮಿಲ್ಕಿ ಬ್ಯೂಟಿ ಈ ಹೀರೋಗಾಗಿ ನಿಯಮ ಮುರಿಯಲಿದ್ದಾರಂತೆ?

ಮುಂಬೈ: ಬಹುಭಾಷಾ ನಟಿಯಾಗಿ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ತಮನ್ನಾ ಭಾಟಿಯಾ ಅವರು ಅಸಂಖ್ಯಾತ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಮಿಲ್ಕಿ ಬ್ಯೂಟಿ ಎಂದೇ ಹೆಸರಾಗಿರುವ ತಮನ್ನಾ ಇತ್ತೀಚೆಗೆ ಕಿಸ್ಸಿಂಗ್​ ಸೀನ್​ ಕುರಿತು ಬಹಿರಂಗ ಹೇಳಿಕೆಯನ್ನು ನೀಡಿ ಎಲ್ಲರ ಹುಬ್ಬೇರಿಸಿದ್ದಾರೆ.

ಬಾಹುಬಲಿ ಖ್ಯಾತಿಯ ತಮನ್ನಾ ಕೆಲ ದಿನಗಳ ಹಿಂದೆ ಫಿಲ್ಮಫೇರ್​ ಕಾರ್ಯಕ್ರದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ಸುಮಾರು 14 ವರ್ಷಗಳ ಸಿನಿಮಾ ವೃತ್ತಿಯಲ್ಲಿ ನಾನು ಈವರೆಗೂ ಸಹನಟನೊಂದಿಗೆ ಕಿಸ್ಸಿಂಗ್​ ದೃಶ್ಯದಲ್ಲಿ ನಟಿಸಿಲ್ಲ ಎಂದು ತಿಳಿಸಿದರು. ಅಲ್ಲದೆ, ಈ ನಿಯಮವನ್ನು ಬಾಲಿವುಡ್​ ಸೂಪರ್​ ಸ್ಟಾರ್​ ಹೃತಿಕ್​ ರೋಷನ್​ ಅವರಿಗಾಗಿ ಮುರಿಯುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದರು.

ನಾನು ಹೃತಿಕ್​ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡ ತಮನ್ನಾ, ಸಾಮಾನ್ಯವಾಗಿ ನಾನು ತೆರೆಯ ಮೇಲೆ ಕಿಸ್ಸಿಂಗ್​ ದೃಶ್ಯದಲ್ಲಿ ನಟಿಸಿಲ್ಲ. ಇದು ನನ್ನ ಸಿನಿಮಾ ಒಪ್ಪಂದ ಭಾಗವೂ ಆಗಿಲ್ಲ. ಆದರೆ, ಹೃತಿಕ್​ ಅವರೊಡನೆ ಈ ನಿಯಮ ಮುರಿಯುವುದಾಗಿ ನಾನು ಯಾವಾಗಲೂ ಸ್ನೇಹಿತೆಯರ ಬಳಿ ಹೇಳುತ್ತಾ ಜೋಕ್ಸ್​ ಮಾಡುತ್ತಿದ್ದೆ ಎಂದು ಹೇಳಿಕೊಂಡರು.

ಹೃತಿಕ್ ಅವರೊಂದಿಗಿನ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿ, ನನ್ನ ವೃತ್ತಿ ಜೀವನದಿಂದಲೂ ಅವರನ್ನು ನೋಡುತ್ತಿದ್ದೇನೆ. ಅವರು ಯಾವಾಗಲೂ ನನಗೆ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದಾರೆ. ಈ ಹಿಂದೆಯು ಅವರನ್ನು ಭೇಟಿ ಮಾಡಿದ್ದೇನೆ. ಅವರೊಬ್ಬ ವಿನಮ್ರ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. (ಏಜೆನ್ಸೀಸ್​)