ಮಿಲ್ಕಿ ಬ್ಯೂಟಿ ತಮನ್ನಾ ಕಬಡ್ಡಿ ಕಣಕ್ಕಿಳಿದಿದ್ದಾರೆ. ಆದರೆ ಆಟಗಾರರಾಗಿ ಅಲ್ಲ, ಕೋಚ್ ಆಗಿ. ಹೌದು.. ಸಂಪತ್ ನಂದಿ ನಿರ್ದೇಶನದ ತೆಲುಗಿನ ‘ಗೋಪಿಚಂದ್ 28’ ಚಿತ್ರದಲ್ಲಿ ನಟಿ ತಮನ್ನಾ ಭಾಟಿಯಾ ಕಬಡ್ಡಿ ತರಬೇತುದಾರರಾಗಿ ಅಭಿನಯಿಸಲಿದ್ದಾರಂತೆ.
ಇಲ್ಲಿ ಅವರು ತರಬೇತಿ ನೀಡಲಿರುವುದು ಯುವ ಕ್ರೀಡಾಪಟುಗಳಿಗೆ. ‘ಶಾಲೆಯಲ್ಲಿ ತರಗತಿ ಬಂಕ್ ಮಾಡುತ್ತಿದ್ದ ನಾನು, ಈಗ ಕ್ರೀಡಾ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಪರ್ಯಾಸ. ಇದು ಹೊಸ ಅನುಭವ, ಸವಾಲಿನ ಪಾತ್ರ. ಚಿತ್ರದಲ್ಲಿ ಅಭಿನಯಿಸಲು ಉತ್ಸುಕಳಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.
‘ಡಾನ್ಸ್ ಅಂದರೆ ತುಂಬ ಇಷ್ಟ. ನೃತ್ಯ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸುವುದು ನನ್ನ ಕನಸು’ ಎಂದು ಈ ಹಿಂದೆ ತಮನ್ನಾ ಹೇಳಿಕೊಂಡಿದ್ದರು. ಟಾಲಿವುಡ್ನ ‘ದಟ್ ಈಸ್ ಮಹಾಲಕ್ಷ್ಮಿ’ ಹಾಗೂ ನವಾಜುದ್ದೀನ್ ಸಿದ್ಧಿಕಿ ಅಭಿನಯದ ‘ಬೋಲೆ ಚುಡಿಯಾನ್’ ಬಾಲಿವುಡ್ ಚಿತ್ರದಲ್ಲಿ ಸದ್ಯ ತಮನ್ನಾ ಬಿಜಿ. ರಾಮ್ ಸುಬ್ರಮಣಿಯನ್ ನಿರ್ದೇಶನದ ‘ದಿ ನವೆಂಬರ್ಸ್ ಸ್ಟೋರಿ’ ತಮಿಳು ವೆಬ್ ಸಿರೀಸ್ ಚಿತ್ರೀಕರಣದಲ್ಲೂ ತಮನ್ನಾ ತೊಡಗಿಸಿಕೊಂಡಿದ್ದಾರೆ.