More

    ತಾಪಂಗೆ ಚುನಾವಣೆ ಯಾವಾಗ ?- ಇದ್ದೂ ಇಲ್ಲದಂತಾದ ಸ್ಥಳೀಯ ಆಡಳಿತ

    ಕೊಟ್ಟೂರು: ಇಲ್ಲಿನ ತಾಲೂಕು ಪಂಚಾಯಿತಿ ಕಳೆದ ಎರಡು ವರ್ಷಗಳಿಂದ ಸದಸ್ಯರಿಲ್ಲದೆ ಆಡಳಿತಾಧಿಕಾರಿ ವಶದಲ್ಲಿದ್ದು, ಜನತೆಗೆ ಇದ್ದೂ ಇಲ್ಲದಂತಾಗಿದೆ.

    ಕೂಡ್ಲಿಗಿ ತಾಲೂಕಿನಿಂದ ಬೇರ್ಪಟ್ಟ ಕೊಟ್ಟೂರು

    ಕೂಡ್ಲಿಗಿ ತಾಲೂಕಿನಿಂದ ಬೇರ್ಪಟ್ಟ ಕೊಟ್ಟೂರು, ಸ್ವತಂತ್ರ ತಾಲೂಕಾದ ಮೇಲೆ 2020ರ ಜ.18 ರಂದು ತಾಪಂ ಅಸ್ತಿತ್ವಕ್ಕೆ ಬಂತು. ತಾಲೂಕಿಗೆ ಒಳಪಟ್ಟ ಎಂಟು ಸದಸ್ಯರನ್ನು ಒಳಗೊಂಡ ನೂತನ ತಾಪಂ ಅಸ್ತಿತ್ವಕ್ಕೆ ಬಂದಾಗ ಇದರ ಪ್ರಥಮ ಅಧ್ಯಕ್ಷರಾಗಿ ಹರಾಳು ಗುರುಮೂರ್ತಿ ಆಡಳಿತ ನಡೆಸಿದ್ದರು.

    ಇದನ್ನೂ ಓದಿ: ಜಿಪಂ, ತಾಪಂ ಚುನಾವಣೆ: ಸರ್ಕಾರಕ್ಕೆ 12 ವಾರ ಕಾಲಾವಕಾಶ ನೀಡಿದ ಹೈಕೋರ್ಟ್​

    14 ಗ್ರಾಪಂ ಹೊಂದಿರುವ ತಾಪಂ ಕೇವಲ ಒಂದೂವರೆ ವರ್ಷವಷ್ಟೇ ಅಸ್ತಿತ್ವದಲ್ಲಿತ್ತು. ಸದಸ್ಯರ ಅಧಿಕಾರವಧಿ ಮುಗಿದಿದ್ದರಿಂದ 2021ರ ಜೂ.11 ರಂದು ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿತು. ಇನ್ನೇನು ಕೆಲ ತಿಂಗಳಲ್ಲಿ ತಾಪಂಗೆ ಚುನಾವಣೆ ನಡೆಯಲಿದೆ ಎಂದುಕೊಂಡಿದ್ದ ಜನರ ನಿರೀಕ್ಷೆ ಹುಸಿಯಾಯಿತು.

    ಅಂದಿನ ಬಿಜೆಪಿ ಸರ್ಕಾರ ಕ್ಷೇತ್ರ ವಿಂಗಡಣೆ, ಜನರ ಆಕ್ಷೇಪದಿಂದ ಮರುಕ್ಷೇತ್ರ ವಿಂಗಡಣೆಯಿಂದಾಗಿ ಚುನಾವಣೆ ಮುಂದೂಡಲ್ಪಟ್ಟಿತ್ತು. ಎರಡು ವರ್ಷವಾದರೂ ಚುನಾವಣೆ ನಡೆದಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ತಾಪಂ ಚುನಾವಣೆಗೆ ಯಾವಾಗ ದಿನಾಂಕ ಗೊತ್ತುಪಡಿಸುತ್ತದೆಯೋ ಕಾದು ನೋಡಬೇಕು.

    ತಾಪಂಗೆ ಚುನಾವಣೆ ಯಾವಾಗ ?- ಇದ್ದೂ ಇಲ್ಲದಂತಾದ ಸ್ಥಳೀಯ ಆಡಳಿತ

    ತಾಪಂ ಅಧ್ಯಕ್ಷ ಮತ್ತು ಸದಸ್ಯರಿಲ್ಲದ್ದಿದ್ದರೂ ಯಥಾ ಪ್ರಕಾರ ಸರ್ಕಾರದಿಂದ ಅನುದಾನ ಬರುತ್ತದೆ. ತಾಪಂ ಆಡಳಿತಾಧಿಕಾರಿ, ನಾವು ಹಾಗೂ ಇಂಜಿನಿಯರ್ ಸೇರಿ ಸಮರ್ಥವಾಗಿ ತಾಲೂಕಿನ 14 ಗ್ರಾಪಂಗಳಿಗೆ ಯಾವುದೇ ಸಮಸ್ಯೆ ಇಲ್ಲದೆ ಅಭಿವೃದ್ಧಿ ಮಾಡುತ್ತಿದ್ದೇವೆ. ಶಾಸಕರಿಗೆ ಬರುವಂತೆ ತಾಪಂ ಸದಸ್ಯರಿಗೆ ಸರ್ಕಾರ ಪ್ರತ್ಯೇಕ ಅನುದಾನ ಕೊಡುವುದಿಲ್ಲ. ಗ್ರಾಪಂಗಳ ಬೇಡಿಕೆ ಮತ್ತು ಸಮಸ್ಯೆಗಳಿಗೆ ಅನುಗುಣವಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ. ಅದನ್ನು ಬಳಸಿ ಗ್ರಾಪಂಗಳ ಅಭಿವೃದ್ಧಿ ಮಾಡುತ್ತಿದ್ದೇವೆ.
    | ಜಿ.ಪರಮೇಶ್ವರ, ತಾಪಂ ಇಒ, ಕೊಟ್ಟೂರು

    ತಾಪಂಗೆ ಚುನಾವಣೆ ಯಾವಾಗ ?- ಇದ್ದೂ ಇಲ್ಲದಂತಾದ ಸ್ಥಳೀಯ ಆಡಳಿತ

    ಇಷ್ಟೊಂದು ದೀರ್ಘಕಾಲ ತಾಪಂಗೆ ಚುನಾವಣೆ ನಡೆಯದಿರುವುದು ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲು. ಅಂದಿನ ಬಿಜೆಪಿ ಸರ್ಕಾರ ತಾಪಂ ಚುನಾವಣೆ ನಡೆಸದೆ ತಪ್ಪು ಮಾಡಿತು. ಈಗ ತಾಪಂಯಲ್ಲಿ ಅಧಿಕಾರಿಗಳದೇ ದರ್ಬಾರ್ ಆಗಿದೆ. ಅಧ್ಯಕ್ಷ-ಸದಸ್ಯರಿದ್ದಾಗಲೇ ಭ್ರಷ್ಟಾಚಾರ ನಡೆಯುತ್ತಿತ್ತು. ಈಗ ಹೇಳೋರು-ಕೇಳೋರು ಇಲ್ಲ. ಅಧಿಕಾರಿಗಳು ತಮಗೆ ತಿಳಿದಂತೆ ಕ್ರಿಯಾ ಯೋಜನೆ ರೂಪಿಸುತ್ತಾರೆ. ಯೋಜನೆ ಅನುಷ್ಠಾನ ಅಗಿದೆಯೇ ಇಲ್ಲವೆ ಎಂಬುದನ್ನು ಜನಪ್ರತಿನಿಧಿಗಳು ಪರಿಶೀಲಿಸುತ್ತಿದ್ದರು. ಈಗ ಯಾರ ಹಂಗೂ ಇಲ್ಲದಂತಾಗಿದೆ.
    | ಹರಾಳು ಗುರುಮೂರ್ತಿ, ಕೊಟ್ಟೂರು ತಾಪಂ ಮೊದಲ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts