ಬೆಡ್‌ ಮೇಲೆ ಸರಸವಾಡುತ್ತಿದ್ದ ಹಾವುಗಳನ್ನು ನೋಡದೆ ಫೋನಿನಲ್ಲಿ ಮಾತನಾಡುತ್ತ ಕುಳಿತುಕೊಂಡ ಮಹಿಳೆಯ ಪ್ರಾಣಕ್ಕೇ ಸಂಚಕಾರ!

ಗೋರಖ್‌ಪುರ: ಆಘಾತಕಾರಿ ಘಟನೆಯೊಂದರಲ್ಲಿ ಫೋನಿನಲ್ಲಿ ಮಾತನಾಡುತ್ತಿದ್ದ ಮಹಿಳೆಯೊಬ್ಬರು ಎರಡು ಹಾವುಗಳ ಮೇಲೆ ಕುಳಿತುಕೊಂಡಿದ್ದಾರೆ. ಅವುಗಳಿಂದ ಕಚ್ಚಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶದ ಗೋರಖ್​​​ಪುರದ ರಿಯಾನವ್ ಎಂಬ​​​​​ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಘಟನೆ ನಡೆದಿದ್ದು, ಥಾಯ್‌ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ಜೈ ಸಿಂಗ್‌ ಯಾದವ್‌ ಎಂಬುವರ ಪತ್ನಿ ಗೀತಾ, ತನ್ನ ಗಂಡನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಎರಡು ಹಾವುಗಳು ಮನೆಯೊಳಗೆ ಎಂಟ್ರಿ ಕೊಟ್ಟಿವೆ ಮತ್ತು ಫೋನಿನಲ್ಲಿ ಮಾತನಾಡುತ್ತ ಬೆಡ್‌ರೂಂಗೆ ಬಂದ ಗೀತಾ ಹಾವುಗಳನ್ನು ನೋಡದೆ ಬೆಡ್‌ ಮೇಲೆ ಕುಳಿತುಕೊಂಡಿದ್ದಾರೆ. ಆಗ ಹಾವುಗಳು ಆಕೆಗೆ ಕಚ್ಚಿವೆ ಮತ್ತು ಕೆಲವೇ ನಿಮಿಷಗಳಲ್ಲಿ ಪ್ರಜ್ಞೆ ತಪ್ಪಿದ್ದಾರೆ. ಪ್ರಿಂಟೆಡ್‌ ಬೆಡ್‌ಶೀಟ್‌ ಆಗಿದ್ದರಿಂದಾಗಿ ಹಾವುಗಳು ಅಲ್ಲಿರುವುದು ಆಕೆಗೆ ಕಾಣಿಸಿಲ್ಲ.

ಕೂಡಲೇ ಇತರೆ ಕುಟುಂಬ ಸದಸ್ಯರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ನೀಡುತ್ತಿದ್ದ ವೇಳೆ ಗೀತಾ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಅದಾದ ಬಳಿಕ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ವಾಪಸ್ ಈಕೆಯ ರೂಮಿಗೆ ಹೋಗಿ ನೋಡಿದಾಗ ಆ ಹಾವುಗಳು ಬೆಡ್‌ ಮೇಲಿರುವುದು ಕಂಡಿದೆ. ಕೋಪಗೊಂಡ ಜನರು ಈ ಎರಡು ಹಾವುಗಳನ್ನು ಹೊಡೆದು ಸಾಯಿಸಿದ್ದಾರೆ.

ಪಶು ವೈದ್ಯರ ಪ್ರಕಾರ, ಮಹಿಳೆಯು ಹಾವುಗಳ ಮೇಲೆ ಕುಳಿತುಕೊಂಡಾಗ ಅವುಗಳು ಸಂಭೋಗದಲ್ಲಿ ನಿರತವಾಗಿದ್ದಿರಬಹುದು ಎನ್ನಲಾಗಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *