ಇಂದು ವೈದ್ಯರ ಪ್ರತಿಭಟನೆ

ತಾಳಿಕೋಟೆ: ಕಲ್ಕತ್ತಾದಲ್ಲಿ ಕಿರಿಯ ವೈದ್ಯೆಯೊಬ್ಬರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ತಾಳಿಕೋಟೆ ವೈದ್ಯರ ಸಂಘದಿಂದ ಬೆಂಬಲ ವ್ಯಕ್ತಪಡಿಸಿ ಜೂ.17 ರಂದು ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಸಿ ಪ್ರಧಾನ ಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಡಾ. ಎಲ್.ಎನ್. ಶೆಟ್ಟಿ ಹೇಳಿದರು.
ಈ ಕುರಿತು ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿಭಟನೆಯಲ್ಲಿ ತಾಳಿಕೋಟೆ ಔಷಧ ವ್ಯಾಪಾರಸ್ಥರ ಸಂಘ, ಲ್ಯಾಬೊರೇಟರಿ ಸಂಘದವರು ಕೂಡ ಪಾಲ್ಗೊಳ್ಳಲು ತೀರ್ಮಾನಿಸಿದ್ದಾರೆ. ಡಾ. ಟಿಟಿ ಹಾಲ್‌ದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್ ಕಚೇರಿಗೆ ತಲುಪಲಿದೆ ಎಂದರು.
ಸಂಘದ ಪದಾಕಾರಿಗಳಾದ ಡಾ. ನಜೀರ ಕೊಳ್ಯಾಳ, ಡಾ. ಎ.ಎ. ನಾಲಬಂದ, ಡಾ. ಆರ್.ಎಂ. ಕೋಳ್ಯಾಳ, ಡಾ. ಪಿ.ಎಸ್. ಅಗರವಾಲಾ, ಡಾ. ಬಿ.ಎಸ್. ಯಾದವಾಡ, ಡಾ. ಆನಂದ ಬಟ್, ಡಾ. ಗುರು ಚಿತ್ತರಗಿ, ಡಾ. ಬಿ.ಎಸ್. ಸಾಸನೂರ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *