ದೇಶದ ಸುಭದ್ರತೆಗೆ ಮತ್ತೆ ಮೋದಿ ಪ್ರಧಾನಿಯನ್ನಾಗಿಸಿ

ತಾಳಿಕೋಟೆ: ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ರೈತ ವಿರೋಧಿಯಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ರೈತ ಬೆಳೆದ ಬೆಲೆ ದ್ವಿಗುಣಗೊಳಿಸಲಾಗುವುದು. ರೈತರನ್ನು ಸ್ವಾವಲಂಬಿಯನ್ನಾಗಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.

ತಾಲೂಕಿನ ಗಡಿಸೋಮನಾಳ, ಖ್ಯಾತನಾಳ, ಕಾರಗನೂರ, ಕೊಡಗಾನೂರ ಗ್ರಾಮಗಳಲ್ಲಿ ಶನಿವಾರ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಪರ ಮತಯಾಚಿಸಿ ಅವರು ಮಾತನಾಡಿದರು.

ಈ ಭಾಗದ ಕುಡಿಯುವ ನೀರಿನ ಬಹು ನಿರೀಕ್ಷಿತ ಪೀರಾಪುರ ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಗೆ 4 ಕೋಟಿ ರೂ. ಹೆಚ್ಚುವರಿ ಹಣವನ್ನು ಕೇಂದ್ರ ಸಚಿವ ರಮೇಶ ಜಿಗಜಿಣಗಿ ನೀಡಿದ್ದಾರೆ. ಕಾಮಗಾರಿ ಆರಂಭವಾಗಿದ್ದು, ಕುಡಿಯುವ ನೀರಿನ ತೊಂದರೆ ನೀಗಲಿದೆ ಎಂದರು.

ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ ಮಾತನಾಡಿ, ದೇಶ ಸುಭದ್ರವಾಗಿರಲು ರೈತ, ಸೈನಿಕ ಹಾಗೂ ಶಿಕ್ಷಕ ಅವಶ್ಯಕವಾಗಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ಮೂವರನ್ನು ಕಡೆಗಣಿಸಿತ್ತು. ಆದರೆ, ಮೋದಿ ಅಧಿಕಾರಕ್ಕೆ ಬಂದ ಮೇಲೆ ಇವರಿಗೆ ಸ್ವಾತಂತ್ರೃ ನೀಡಿ ದೇಶ ಸುಭದ್ರವಾಗಿಸಿದ್ದಾರೆ. ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ ಜಗತ್ತಿನ ಅತೀ ಪ್ರಬಲ ದೇಶವಾಗಲಿದೆ ಎಂದರು.

ಬಿಜೆಪಿ ಮುಖಂಡರಾದ ಸಂಗನಗೌಡ ಹೆಗರಡ್ಡಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರಭುಗೌಡ ಬಿರಾದಾರ, ಪ್ರಶಾಂತ ಹಾವರಗಿ, ಭೀಮನಗೌಡ ತಂಗಡಗಿ, ಶೇಖುಗೌಡ ತಂಗಡಗಿ, ರಾಜುಗೌಡ ಇಬ್ರಾಹಿಂಪುರ, ಜಿಪಂ ಮಾಜಿ ಸದಸ್ಯ ಸಾಯಬಣ್ಣ ಆಲ್ಯಾಳ, ಶಿವನಗೌಡ ಪಾಟೀಲ, ಸಾಹೇಬಗೌಡ ಗೋಟಖಂಡ್ಕಿ, ಮಂಜು ಮೈಲೇಶ್ವರ, ಬಾಬುಗೌಡ ಪಾಟೀಲ, ಮಲ್ಲನಗೌಡ ಬಿರಾದಾರ, ಬಸನಗೌಡ ಕಿರಶ್ಯಾಳ ಇತರರಿದ್ದರು.

Leave a Reply

Your email address will not be published. Required fields are marked *