ಅರ್ಥಪೂರ್ಣ ಜಿಲ್ಲಾ ಸಮ್ಮೇಳನ ಆಯೋಜಿಸೋಣ


ಪೂರ್ವಭಾವಿ ಸಭೆ >>

ತಾಳಿಕೋಟೆ: ಜಿಲ್ಲಾ ಸಾಹಿತ್ಯ ಸಮ್ಮೇಳನ ಕೇವಲ ಉದ್ಘಾಟನೆ, ಸಮಾರೋಪಕ್ಕೆ ಆದ್ಯತೆ ನೀಡುವುದಕ್ಕಿಂತ ಅರ್ಥಪೂರ್ಣ ಗೋಷ್ಠಿಗಳನ್ನು ನಡೆಸುವ ಮೂಲಕ ಮಾದರಿ ಸಮ್ಮೇಳನವನ್ನಾಗಿಸಬೇಕು ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪಕ್ಷಾತೀತಿವಾಗಿ, ಜಾತ್ಯತೀತವಾಗಿ ಸಮ್ಮೇಳನ ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ. ಯಾವುದೇ ಭಿನ್ನಾಭಿಪ್ರಾಯಕ್ಕೆ ಆಸ್ಪದ ನೀಡದೆ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದರು.

ಇಂಡಿ ತಾಲೂಕು ಕಸಾಪ ಅಧ್ಯಕ್ಷ ಕಾಂತು ಇಂಡಿ ಮಾತನಾಡಿ, ಸಮ್ಮೇಳನ ಯಶಸ್ವಿಗೆ 30 ವಿವಿಧ ಸಮಿತಿ ರಚಿಸಬೇಕಾಗುತ್ತದೆ. ಸಮಿತಿಗಳಲ್ಲಿ 20-30 ಜನ ಸದಸ್ಯರನ್ನಾಗಿಸಬೇಕು. ಸಮ್ಮೇಳನ ಯಶಸ್ವಿಗೆ ಆರ್ಥಿಕ ನೆರವು ಅಗತ್ಯ ಎಂದರು.

ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಊಟದ ವ್ಯವಸ್ಥೆಗೆ ಬೇಕಾಗುವ ಖರ್ಚು ನೀಡುವುದಾಗಿ, ತಾಲೂಕು ಪೇಂಡಾಲ ಮಾಲೀಕರ ಸಂಘಟನೆ ಅಧ್ಯಕ್ಷ ಶಫೀಕ್ ಮುರಾಳ, ಉಪಾಧ್ಯಕ್ಷ ಆದಂ ಅತ್ತಾರ ಸಾಹಿತ್ಯ ಸಮ್ಮೇಳನಕ್ಕೆ ಬೇಕಾದ ಟೆಂಟ್, ಸೌಂಡ್ ಸಿಸ್ಟಮ್, ಲೈಟ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಬಿ.ಎಸ್. ಪಾಟೀಲ ಯಾಳಗಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭುಗೌಡ ಮದರಕಲ್ಲ, ಬಿಇಒ ಎಸ್.ಡಿ. ಗಾಂಜಿ, ಶಿಕ್ಷಕರ ಸಂಘಟನೆ ಆರ್.ಎಂ. ಡೋಣಿ, ಕರವೇ ಸಂಘಟನೆ ಜೈಭೀಮ ಮುತ್ತಗಿ, ತಹಸೀಲ್ದಾರ್ ಎಸ್.ಎಚ್. ಅರಿಕೇರಿ, ಬಸನಗೌಡ ಮಾಡಗಿ, ಚಂದ್ರಶೇಖರ ದೇವರಡ್ಡಿ, ಜೆ.ಟಿ. ಘೋರ್ಪಡೆ ಮಾತನಾಡಿದರು.

ಖಾಸ್ಗತೇಶ್ವರ ಮಠದ ಪೀಠಾಧಿಕಾರಿ ಸಿದ್ಧಲಿಂಗ ದೇವರು ಸಾನ್ನಿಧ್ಯ ವಹಿಸಿದ್ದರು. ಕೈಲಾಸ ಪೇಠೆಯ ಬಸವಪ್ರಭು ದೇವರು, ಜಿಪಂ ಸದಸ್ಯ ಬಸನಗೌಡ ವಣಕ್ಯಾಳ, ಶಿವಾನಂದ ದೇಸಾಯಿ, ವಿಠಲಸಿಂಘ ಹಜೇರಿ, ಎಸ್.ಬಿ. ಕಟ್ಟಿಮನಿ, ಬಸನಗೌಡ ಗಬಸಾವಳಗಿ, ಎಂ.ಬಿ. ನಾವದಗಿ, ಎಸ್.ಬಿ. ಚಲವಾದಗಿ, ಎಂ.ಎಂ. ಬೆಳಗಲ್ಲ, ಎಂ.ಕೆ. ಡೋಣಿ, ಶಾಂತಾಬಾಯಿ ನೂಲಿಕರ, ವಾಸುದೇವ ಹೆಬಸೂರ, ಕಾಶಿನಾಥ ಮುರಾಳ ಇತರರಿದ್ದರು.