More

  ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರಿಗೂ ತೊಂದರೆಯಿಲ್ಲ

  ತಾಳಿಕೋಟೆ: ಪಟ್ಟಣದ ಎಸ್.ಕೆ. ಹಸ್ಕೂಲ್ ಮುಂಭಾಗದಲ್ಲಿ ಶುಕ್ರವಾರ ತಾಲೂಕು ಬಿಜೆಪಿ ಘಟಕದ ವತಿಯಿಂದ ಶುಕ್ರವಾರ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿತು.
  ಅಭಿಯಾನದಲ್ಲಿ ಕಾಲೇಜು ವಿದ್ಯಾರ್ಥಿಗಳು, ಕಾರ್ಯಕರ್ತರು, ನಾಗರಿಕರು ಪಾಲ್ಗೊಂಡು ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲಿಸಿ ಸಹಿ ಸೂಚಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.
  ಪುರಸಭೆ ಸದಸ್ಯ ವಾಸುದೇವ ಹೆಬಸೂರ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಎಂಬುದು ಯಾವ ಭಾರತೀಯನಿಗೂ ಯಾವುದೇ ಸಮುದಾಯಕ್ಕೂ ನಷ್ಟವಿಲ್ಲ. ಅನ್ಯದೇಶಗಳಾದ ಪಾಕಿಸ್ಥಾನ್, ಬಾಂಗ್ಲಾದೇಶ, ಅಪ್ಘಾನಿಸ್ತಾನ್, ಇಂಗ್ಲೆಂಡ್ ಮತ್ತಿತರ ದೇಶಗಳಲ್ಲಿ ಹಿಂಸೆ ಅನುಭವಿಸಿ ವಲಸಿಗರಾಗಿ ಬಂದ ಹಿಂದು, ಸಿಖ್, ಜೈನ್, ಪಾರ್ಸಿ, ಬೌದ್ಧ, ಕ್ರಿಶ್ಚಿಯನ್ ನಿರಾಶ್ರಿತರಿಗೆ ಪೌರತ್ವದ ಹಕ್ಕು ನೀಡಿ ನಮ್ಮ ದೇಶದ ಪೌರತ್ವ ಒದಗಿಸುವಂತಹ ಕಾರ್ಯ ಇದಾಗಿದೆ ಎಂದರು.
  ಸಹಿ ಸಂಗ್ರಹ ಅಭಿಯಾನದಲ್ಲಿ ಹುಟ್ಟುತ್ತಲೇ ಎರಡು ಕೈಗಳಿಲ್ಲದೆ ಅಂಗವಿಕಲೆ ಮೈಲೇಶ್ವರದ ಭಾಗಮ್ಮ ವಿದ್ಯಾರ್ಥಿನಿ ತನ್ನ ಕಾಲುಗಳಿಂದಲೇ ಸಹಿ ಮಾಡಿ ಜನರ ಗಮನ ಸೆಳೆದಳು. ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆಯ ಜನ ಜಾಗೃತಿ ಅಭಿಯಾನದ ಕರಪತ್ರಗಳನ್ನು ವಿತರಿಸಲಾಯಿತು.
  ಮುಖಂಡರಾದ ಪುರಸಭೆ ಸದಸ್ಯರಾದ ಅಣ್ಣಾಜಿ ಜಗತಾಪ, ನಿಂಗರಾಜ ಕುಂಟೋಜಿ, ಮುದಕಣ್ಣ ಬಡಿಗೇರ, ತಾಪಂ ಸದಸ್ಯ ಗುರುರಾಜ ಕೊಪ್ಪದ, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಘವೇಂದ್ರ ಚವಾಣ್, ಕಾಶಿನಾಥ ಮುರಾಳ, ಶಿವಶಂಕರ ಹಿರೇಮಠ, ಮಾನಸಿಂಗ್ ಕೊಕಟನೂರ, ರಾಜು ಹಂಚಾಟೆ, ಈಶ್ವರ ಹೂಗಾರ, ಗಂಗಾರಾಮ ಕೊಕಟನೂರ, ಸೀತಾರಾಮ ಹಜೇರಿ, ಅಶ್ವಿನ್ ಬೇದರಕರ, ಶಿವಣ್ಣ ಸರೂರ, ಮಹಾದೇವಪ್ಪ ಕುಂಬಾರ, ಸಿದ್ದು ಕತ್ತಿ, ಸಿದ್ದು ಶಿರಶಿ, ಶಶೀಧರ ಲೋಕರೆ, ಶಂಭು ಹಂದಿಗನೂರ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts