ಬದುಕು ಹಸನಾಗಲು ಪರಿಶ್ರಮ ಅಗತ್ಯ: ಡಾ.ಮಹಿಮಾ ಆಚಾರ್ಯ

ಗಂಗೊಳ್ಳಿ: ವಿದ್ಯಾರ್ಥಿ ಜೀವನದ ಬದುಕು ಹಸನಾಗಲು ಪ್ರಾಮಾಣಿಕ ಪರಿಶ್ರಮ ಅಗತ್ಯ ಎಂದು ಮನೋವೈದ್ಯೆ ಡಾ.ಮಹಿಮಾ ಆಚಾರ್ಯ ಅಭಿಪ್ರಾಯಪಟ್ಟರು. ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರೌಢಶಾಲಾ ವಿಭಾಗದಲ್ಲಿ ನೇರಂಬಳ್ಳಿ ಪ್ರಭಾಕರ ಆಚಾರ್ಯ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ಸಂಸ್ಥೆ ಉಪಪ್ರಾಂಶುಪಾಲ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ರಘುರಾಮ್ ಉಡುಪ ಶುಭಾಶಂಸನೆಗೈದರು. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ 37ವಿದ್ಯಾರ್ಥಿಗಳಿಗೆ ನೇರಂಬಳ್ಳಿ ಪ್ರಭಾಕರ ಆಚಾರ್ಯ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಪುರಸ್ಕರಿಸಲಾಯಿತು.ಎರ್ಮಾಳ್ … Continue reading ಬದುಕು ಹಸನಾಗಲು ಪರಿಶ್ರಮ ಅಗತ್ಯ: ಡಾ.ಮಹಿಮಾ ಆಚಾರ್ಯ