‘ಕವಿತ್ವಬೀಜಂ ಜನ್ಮಾಂತರಗತ ಸಂಸ್ಕಾರ ವಿಶೇಷಃ’ -ಪೂರ್ವಜನ್ಮದ ವಿಶಿಷ್ಟ ಸಂಸ್ಕಾರದಿಂದಾಗಿ ಪ್ರತಿಭೆಯು ಹೊರಹೊಮ್ಮುತ್ತದೆ. ಪ್ರತಿಭೆ ಸ್ವಾಭಾವಿಕವಾಗಿ ಸಹಜವಾಗಿ ಅಂಕುರಿಸುವುದು. ಉದಾ: ಸಂತ ಶಿಶುನಾಳ ಶರೀಫ, ತೆನಾಲಿ ರಾಮ, ಕೃಷ್ಣ, ಕಡಕೋಳ ಮಡಿವಾಳಪ್ಪ, ಕೂಡಲೂರು ಬಸವಲಿಂಗ ಶರಣರು, ಸರ್ವಜ್ಞ ಕವಿ, ವೇಮನಯೋಗಿ, ಮುದ್ದಣ -ಮನೋರಮೆ, ಸಂಚಿಹೊನ್ನಮ್ಮ. ಇತ್ತೀಚೆಗೆ ಬದುಕಿಹೋದ ಬಳ್ಳಾರಿ ಗಜಲ್ ಗುಂಡಮ್ಮ, ಗದಗ-ಬೆಟಗೇರಿ ರಾಮಣ್ಣ ಬ್ಯಾಟಿ ಈ ಮೊದಲಾದ ಅನೇಕ ಆಶುಕವಿಗಳು ತಮ್ಮ ಜನ್ಮಾಂತರದ ಪ್ರತಿಭೆಯನ್ನು ಕಾವ್ಯ, ಕಥೆ, ವಚನಗಳ ಮೂಲಕ ಹೊರಸೂಸಿದ್ದಾರೆ. ಜನ್ಮಾಂತರದ ಸಂಸ್ಕಾರ ಬೀಜವು ಸುಪ್ತವಾಗಿಯೇ ಉಳಿದಿದ್ದರೆ ಯಾರಿಗೆ ಪ್ರಯೋಜನ? ಆದ್ದರಿಂದ ಪ್ರತಿಭೆಯೆಂಬುದನ್ನು ಅರಳಿಸಲು ಅವಕಾಶ ಬೇಕು. ಸುಪ್ತವಾಗಿದ್ದದ್ದು ಆ ಅವಕಾಶದಿಂದ ಅಭಿವೃದ್ಧಿಯಾಗುತ್ತದೆ. ಆದರೆ ಪ್ರತಿಭಾ ಶಕ್ತಿಗೆ ಉತ್ಪತ್ತಿ ಸಹಾಯ ಬೇಕೆ ಬೇಕು. ಅನೇಕ ಶಾಸ್ತ್ರಗಳ ಪರಿಶೀಲನೆಯು ಉತ್ಪತ್ತಿ ಎನಿಸುವದು.
ಪ್ರತಿಭೆ ಸಹಜ ಪ್ರವೃತ್ತಿಯಾದರೆ ಪರಿಶೀಲನೆ ಪ್ರಯತ್ನ ಪೂರ್ವಕ ಪ್ರವೃತ್ತಿ. ಪ್ರತಿಭೆ ಮತ್ತು ಪರಿಶೀಲನೆ ಇವೆರಡೂ ಉಳ್ಳವನೇ ಪಂಡಿತ. ಅಭಿವ್ಯಕ್ತಿ ಇಲ್ಲದ್ದನ್ನು ಪರಿಶೀಲಿಸಿ ಅಧ್ಯಯನ, ಅಧ್ಯಾಪನಗೈದು ಸಂಗ್ರಹಿಸುವದೇ ಉತ್ಪತ್ತಿ. ಅನೇಕ ದಾರ್ಶನಿಕರು ಸಾಂಖ್ಯ, ಯೋಗ, ನ್ಯಾಯ, ಪೂರ್ವಮಿಮಾಂಸ, ಉತ್ತರ ಮೀಮಾಂಸ ಹೀಗೆ ಶಾಸ್ತ್ರಗಳನ್ನು ಬರೆಯಬೇಕಾದರೆ ಪೂರ್ವ ಭಾವಿಯಾಗಿ ಅನೇಕ ಶಾಸ್ತ್ರಗಳನ್ನು ಅಧ್ಯಯನಗೈದು ಅಧ್ಯಾಪನ (ಪರಿಶೀಲನೆ) ಮಾಡಿದರು.
15 ನೇ ಶತಮಾನ ವಿಜಯ ನಗರದ ಸಾಮ್ರಾಜ್ಯದ ಕೃಷ್ಣದೇವರಾಯರ ಆಸ್ಥಾನದಲ್ಲಿ ಕವಿಗಳು- ಪಂಡಿತರು, ಗಾಯಕರು, ಶಾಸ್ತ್ರಕೋವಿದರು, ಚಿಂತಕರು, ಇವರಿಗೆಲ್ಲ ರಾಜಾಶ್ರಯವಿತ್ತು. ಆದ್ದರಿಂದಲೇ ಆ ಶತಮಾನದಲ್ಲಿ ದಾಸಸಾಹಿತ್ಯ ಉಕ್ಕಿಹರಿಯಿತು. ‘ಸಹಸ್ರೇಷು ಚ ಪಂಡಿತಃ ದಶಸಹಸ್ರೇಷು ವಕ್ತಾ’ ಎಂದು ಸುಭಾಷಿತದಲ್ಲಿ ಹೇಳಿದಂತೆ, ಸಾವಿರ ಜನರಲ್ಲಿ ಒಬ್ಬ ಪಂಡಿತ ಜನ್ಮಿಸುತ್ತಾನಂತೆ. ಹತ್ತು ಸಾವಿರ ಜನರಲ್ಲಿ ಒಬ್ಬ ಶ್ರೇಷ್ಠ ವಾಗ್ಮಿ ಹುಟ್ಟುತ್ತಾನಂತೆ. ಪ್ರತಿಭೆ-ಪರಿಶೀಲನೆವುಳ್ಳವರೇ ಪಂಡಿತರು. ಆ ಪಾಂಡಿತ್ಯ ಪ್ರಸಾದ ವಾಣಿಯಾಗಿರಬೇಕು. ಆ ಪ್ರಸಾದ ವಾಣಿಗೆ ತಪಸ್ಸೇಬೇಕು ಎಂದು ಮನುಸ್ಮತಿಯಲ್ಲಿ ಹೇಳಲ್ಪಟ್ಟಿದೆ.
ಅಬ್ಬಾ! ಎಂತಹ ಜಾಗದಲ್ಲಿ ಅಡಗಿದೆ MH370 ವಿಮಾನ: ನಿಗೂಢ ನಾಪತ್ತೆ ಕೇಸ್ ಬಗೆಹರಿದಿದೆ ಎಂದ ವಿಜ್ಞಾನಿ