ಮತಾಂತರ ಜಾಲದ ವಿರುದ್ಧ ಕಠಿಣ ಕ್ರಮಕೈಗೊಳ್ಳಿ

ಶ್ರೀಮಂಗಲ: ಕೊಡಗಿನಾದ್ಯಂತ ಸರ್ಕಾರಿ ಶಾಲೆಗಳಿಗೆ ಕ್ರಿಶ್ಚಿಯನ್ ಮಿಷನರಿಗಳಿಂದ ಬೈಬಲ್, ಕ್ರೈಸ್ತ ಧರ್ಮ ಸಾರುವ ಹಲವು ಪುಸ್ತಕಗಳನ್ನು ಹಂಚಿಕೆ ಮಾಡುವ ಮೂಲಕ ಪರೋಕ್ಷವಾಗಿ ಮತಾಂತರಕ್ಕೆ ಪ್ರಯತ್ನಿಸುತ್ತಿರುವ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶ್ರೀಮಂಗಲ ರಾಷ್ಟ್ರೀಯ ಸೇವಾ ಸಂಘದ ಮುಖಂಡರು ಎಚ್ಚರಿಸಿದರು.

ತುರ್ತು ಸಭೆ ನಡೆಸಿದ ಸಂಘದ ಪ್ರಮುಖರಾದ ಬೊಳ್ಳಾಜಿರ ಆಶೋಕ್, ಚೋನೀರ ಕಾಳಯ್ಯ, ಐಪುಮಾಡ ಸಂಜು ಮತ್ತಿತರರು ಇಲ್ಲಿಯವರೆಗೆ ಜಿಲ್ಲೆಯ ಕಾರ್ಮಿಕರ ಕಾಲನಿಗಳಲ್ಲಿ ಮತಾಂತರಕ್ಕೆ ಪ್ರಯತ್ನ ನಡೆಸಲಾಗುತ್ತಿತ್ತು. ಇದೀಗ ಶಿಕ್ಷಣ ಸಂಸ್ಥೆಗಳಿಗೂ ಮತಾಂತರದ ಪಿಡುಗು ವ್ಯಾಪಿಸುತ್ತಿದೆ ಎಂದು ಕಿಡಿಕಾರಿದರು.

ಜಿಲ್ಲಾಡಳಿತ ಈ ಬಗ್ಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇದರ ವಿರುದ್ಧ ಶ್ರೀಮಂಗಲ ಬಂದ್ ಮಾಡಿ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದರು. ಇದೇ ವೇಳೆ ಕಾಕಮಾಡ ಅಜಿತ್ ಇದ್ದರು.

Leave a Reply

Your email address will not be published. Required fields are marked *