ಕೊಟ್ಟೂರು: ವಿಕಸಿತ ಭಾರತವೆಂಬ ಕೇಂದ್ರ ಸರ್ಕಾರದ ಯೋಜನೆಯಡಿ ರೈತರು ಸಾಲ ಸೌಲಭ್ಯ ಪಡೆದು ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕು ಎಂದು ಕ್ಷೇತ್ರಾಧಿಕಾರಿ ಎಂ.ಕೊಟ್ರೇಶ ಹೇಳಿದರು.
ಕೋಗಳಿ ಗ್ರಾಮದಲ್ಲಿ ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್ ಮತ್ತು ತಾಲೂಕಿನ ಎಲ್ಲ ಸಹಕಾರ ಸಂಘಗಳ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ 71ನೇ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಯೋಜನೆಯಡಿ ನಬಾರ್ಡ್ ನೀಡುವ ಶೂನ್ಯ ಬಡ್ಡಿ ಸಾಲವನ್ನು ಪಡೆದು, ಸಕಾಲಕ್ಕೆ ಮರು ಪಾವತಿಸಿ ಸಂಘಗಳ ಬೆಳವಣಿಗೆ ಸಹಕರಿಸಬೇಕೆಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ. ಕೋಗಳಿ ಸಹಕಾರ ಸಂಘದ ಅಧ್ಯಕ್ಷ ಹೇಮಗಿರಿಗೌಡ, ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜೆ.ಎಂ. ಶಿವಪ್ರಸಾದ್ ಮಾತನಾಡಿದರು.
ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಮಾನಸ, ಕ್ಷೇತ್ರಾಧಿಕಾರಿ ವಿ.ಎಸ್. ಪ್ರವೀಣ್, ಉಪಾಧ್ಯಕ್ಷೆ ರೇಖಾ ಮೋಹನ್, ಪ್ರಮುಖರಾದ ನಾಗರಾಜ್, ಅಳವಂಡಿ ಕೊಟ್ರೇಶ, ಅಂಬಳಿ ಸೋಮನಗೌಡ, ಚನ್ನವೀರಪ್ಪ, ಮಾರುತಿ, ಹನುಮಂತಪ್ಪ, ರವೀಶ, ವಿರೂಪಾಕ್ಷಗೌಡ, ಪ್ರದೀಪ್, ಶಿರಸಪ್ಪ, ವೀರಣ್ಣ, ನಾಗರಾಜ್, ಮಂಜಣ್ಣ, ಕೊಟ್ರೇಶ, ಕೆ. ಉಮೇಶ, ಬಿ. ಕೋಟೆಪ್ಪ, ಕೆ.ರಾಜ, ಸಿ.ಗೋಣೆಪ್ಪ ಇತರರಿದ್ದರು.