ಮೈಸೂರು: ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದಲ್ಲಿ ಮಹಿಳೆಯರಿಂದ ಸಮಾಜಕ್ಕೆ ಮತ್ತಷ್ಟು ಉತ್ತಮ ಕೊಡುಗೆ ಸಾಧ್ಯ. ಆರೋಗ್ಯದತ್ತ ಗಮನ ಹರಿಸುವಂತೆ ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಸಲಹೆ ನೀಡಿದರು.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಖಿ ಫೌಂಡೇಷನ್ ಮತ್ತು ಸೂರ್ಯ ಚಾರಿಟಬಲ್ ಟ್ರಸ್ಟ್‌ನಿಂದ ರಾಮಕೃಷ್ಣನಗರದ ಜಯಲಕ್ಷ್ಮೀದೇವಿ ಪದವಿಪೂರ್ವ ಕಾಲೇಜಿನ ಋತ್ವಿಕ್ ವೇದಿಕೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಖಿ ಸಂಭ್ರಮ-ಸ್ಫೂರ್ತಿ ಸಖಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮನೆ ಕೆಲಸ, ದುಡಿಮೆ, ಮಕ್ಕಳ ಲಾಲನೆ, ಪಾಲನೆ ಎಂದು ಮಹಿಳೆಯರು ತಮ್ಮ ವೈಯಕ್ತಿ ಆರೋಗ್ಯದ ಕಡೆಗೆ ಗಮನ ನೀಡುವುದೇ ಇಲ್ಲ. ಇದರಿಂದ ಮುಂದೆ ಅನಾರೋಗ್ಯ ಸಮಸ್ಯೆಗೆ ತುತ್ತಾಗುತ್ತಾರೆ. ಹಾಗಾಗಿ ಆರೋಗ್ಯದತ್ತ ಹೆಚ್ಚು ಕಾಳಜಿ ತೋರುವಂತೆ ತಿಳಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಶ್ರೀಗಂಧ ವಲಯ ಪ್ರಮುಖ್ ಡಾ.ವಿ.ರಂಗನಾಥ್ ಮಾತನಾಡಿ, ಮಹಿಳೆಯು ತಮ್ಮ ಕೆಲಸ ಕಾರ್ಯಗಳ ನಡುವೆ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮತ್ತಷ್ಟು ಕ್ರಿಯಾಶೀಲ ವ್ಯಕ್ತಿತ್ವ ಅವರದ್ದಾಗುತ್ತದೆ, ಮಹಿಳೆಯರು ಸಂಯಮಶೀಲರಾಗಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಟ್ರಸ್ಟ್ ಸಂಸ್ಥಾಪನಾ ಕಾರ್ಯದರ್ಶಿ ಗಾಯತ್ರಿ ಸುಂದರೇಶ್ ಮಾತನಾಡಿ, ಅನೇಕ ಮಹಿಳೆಯರು ಸಾಧನೆಯ ಮೆಟ್ಟಿಲನ್ನೇರಿದ್ದರೂ ಹೊರ ಪ್ರಪಂಚಕ್ಕೆ ತಮ್ಮ ಸಾಧನೆಯ ಬಗ್ಗೆ ತೋರಿಸಿಕೊಳ್ಳುವಲ್ಲಿ ಹಿಂಜರಿಯುತ್ತಾರೆ. ಅಂತಹ ಸಾಧಕ ಸಖಿಯರನ್ನು ಗುರುತಿಸಿ ಗೌರವಿಸುವ ಜವಾಬ್ದಾರಿ ನಮ್ಮಂತಹ ಸಂಘ-ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದರು.
ಅನಿತಾ ರೀಟಾ(ಉದ್ಯಮ) ಶ್ರೀಮತಿ ಅರುಣ್‌ಕುಮಾರ(ರಂಗಭೂಮಿ), ಬಿ.ಆರ್.ನಾಗರತ್ನ (ಸಾಹಿತ್ಯ) ಅವರಿಗೆ ಸ್ಫೂರ್ತಿ ಸಖಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದೇಸಿ ಪಾನೀಯ ಸ್ಪರ್ಧೆಯಲ್ಲಿ ಭಾಗ್ಯ ಪ್ರಭಾಕರ್, ಸರೋಜಾ ಹಾಗೂ ಆಶಾ, ಬಜ್ಜಿ ತಯಾರಿಕಾ ಸ್ಪರ್ಧೆಯಲ್ಲಿ ಉಷಾರಾವ್, ವರ್ಷಾ, ವಿಜಯಲಕ್ಷ್ಮಿ, ಗಾದೆಗಳು ಮತ್ತು ಒಗಟುಗಳಿಗೆ ಸಂಬಂಧಿಸಿದ ಕನ್ನಡ ರಸಪ್ರಶ್ನೆ ಸ್ಪರ್ಧೆಯಲ್ಲಿ ಕುಸುಮಾ, ಲೀಲಾವತಿ, ಆರ್.ಗಾಯತ್ರಿ, ತೇಜಸ್ವಿನಿ ಹಾಗೂ ಜಯಮಾಲಾ ಅವರು ಬಹುಮಾನ ಪಡೆದುಕೊಂಡರು.
ಕನ್ನಡ ಹಳೆಯ ಚಲನ ಚಿತ್ರಗೀತಗಾಯನ ಸ್ಪರ್ಧೆಯಲ್ಲಿ ಸುದರ್ಶಿನಿ, ಜಯಮಾಲಾ, ಸುಮಾ ಸೋಮಶೇಖರ್, ಪನ್ನಗ, ಸರೋಜಾ ಗಣೇಶ್, ಪ್ರತಿಭಾ ಶ್ರೀನಿವಾಸ್, ದೋಸ್ತಿ ನಂಬರ್1 ಸ್ಪರ್ಧೆಯಲ್ಲಿ ಜ್ಯೋತಿ, ಅಕ್ಷತಾ, ರಿಶಿತ ಸವಿತಾ ಬಹುಮಾನ ತಮ್ಮದಾಗಿಸಿಕೊಂಡರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸಿ: ಡಾ.ಎಸ್.ಪಿ.ಯೋಗಣ್ಣ ಸಲಹೆ

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt
Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…
ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit
Vomit : ಕೆಲವರಿಗೆ ಬಸ್ ಮತ್ತು ಕಾರಿನಲ್ಲಿ ಪ್ರಯಾಣ ಮಾಬೇಕಾದರೆ ಸಲ್ಪ ದೂರು ಪ್ರಯಾಣಿಸಿದ ಬಳಿಕ…
ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon
Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…