ಕ್ರಿಯಾಶೀಲವಾಗಿರಲು ಆರೋಗ್ಯ ಕಾಳಜಿವಹಿಸಿ

blank

ಸೊರಬ: ಮನುಷ್ಯ ಸೂರ್ಯೋದಯದ ಮುಂಚಿತವಾಗಿ ಏಳುವ ಅಭ್ಯಾಸದ ಜತೆಗೆ ಚಟುವಟಿಕೆಗಳಿಂದ ಕೂಡಿದರೆ ಉತ್ತಮ ಆರೋಗ್ಯ ಹೊಂದಬಹುದು ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಹರಿಶಿ ಗ್ರಾಪಂನ ವಿದ್ಯಾನಗರದ ಪ್ರೌಢಶಾಲೆ ಆವರಣದಲ್ಲಿ ರಾಘವಿ ಚಾರಿಟಬಲ್ ಟ್ರಸ್ಟ್ ಮತ್ತು ಸೇವಾ ೌಂಡೇಶನ್, ಶ್ರೀಲಕ್ಷ್ಮೀ ಗ್ರೂಪ್ ಆ್ ಆಸ್ಪತ್ರೆ ಹಾಗೂ ಯುನಿಟಿ ಕೇರ್ ಆಸ್ಪತ್ರೆ ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಟಿವಿ ಮತ್ತು ಮೊಬೈಲ್ ಬಂದಮೇಲೆ ಮನುಷ್ಯನ ಆರೋಗ್ಯ ಹದಗೆಟ್ಟಿದೆ. ಆರೋಗ್ಯ ಕೆಟ್ಟಮೇಲೆ ಯಾವುದೇ ಕೆಲಸವಾಗಲಿ, ಸಾಧನೆಯಾಗಲಿ ಸಾಧ್ಯವಾಗುವುದಿಲ್ಲ. ಹೀಗಾಗಿ ಆರೋಗ್ಯ ಕೆಡುವ ಮೊದಲು ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು. ಆರೋಗ್ಯಕ್ಕೆ ದೈಹಿಕ ಚಟುವಟಿಕೆಗಳು ಮುಖ್ಯ ಎಂದರು.
ಕಾರ್ತಿಕೇಯ ಪೀಠದ ಅವಧೂತ ಯೋಗೇಂದ್ರ ಶ್ರೀ ಮಾತನಾಡಿ, ಆಧುನಿಕ ಜೀವನಶೈಲಿ ಬದಲಾದ ಹಿನ್ನೆಲೆಯಲ್ಲಿ ರೋಗರುಜಿನಗಳು ಹೆಚ್ಚಾಗಿವೆ. ಮನುಷ್ಯನಿಗೆ ಆರೋಗ್ಯ ಮುಖ್ಯವಾಗಿದ್ದು, ಕಾಪಾಡಿಕೊಳ್ಳುವುದು ಆತನ ಕೈಯಲ್ಲೇ ಇದೆ. ಉತ್ತಮ ಆಹಾರ, ಚಿಂತನೆ, ಹವ್ಯಾಸಗಳ ಜತೆಗೆ ಸದಾ ಕ್ರಿಯಾಶೀಲವಾಗಿ ದೈಹಿಕ ಚಟುವಟಿಕೆಗಳಿಂದ ಕೂಡಿದ್ದಲ್ಲಿ ಉತ್ತಮ ಆರೋಗ್ಯ ಹೊಂದಬಹುದು ಎಂದು ಹೇಳಿದರು.
ಹರಿಶಿ ಗ್ರಾಪಂ ಅಧ್ಯಕ್ಷೆ ಅನಸೂಯಮ್ಮ, ಸಹಕಾರ ಸಂಘದ ಅಧ್ಯಕ್ಷ ಶಿವಣ್ಣ ತಬಲಿ, ಪ್ರಮುಖರಾದ ತಬಲಿ ಬಂಗಾರಪ್ಪ, ಸುನೀಲ್ ಗೌಡ, ಎನ್.ಜಿ.ನಾಯ್ಕ, ಮಾರ್ಯಪ್ಪ, ಚೌಡಪ್ಪ, ವಜ್ರಕುಮಾರ್, ಉಮಾಕಾಂತ ಗೌಡ, ಮುಖ್ಯ ಶಿಕ್ಷಕ ಮಂಜುನಾಥ್, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ಡಾ. ಮಂಜುನಾಥ್, ಡಾ. ಆಶಿತಾ, ಡಾ. ಐಶ್ವರ್ಯ, ಡಾ. ಜಾನ್, ಡಾ. ಅಜಯ್ ಇತರರಿದ್ದರು.

Share This Article

1 ರೂ. ಖರ್ಚು ಮಾಡದೆ ನಿಮ್ಮ ಕೂದಲು ದಪ್ಪವಾಗಿ, ಸೊಂಪಾಗಿ ಬೆಳೆಯಲು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ? Hair Tips

Hair Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದನ್ನು…

ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night

traveling at night : ರಾತ್ರಿಯಲ್ಲಿ  ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…

ಮಾರ್ಚ್​ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota

Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…